Asianet Suvarna News Asianet Suvarna News

ಉಂಗುರ ಧರಿಸುವ ಬೆರಳ ಅರ್ಥವೆನು ?

ಎಂಗೇಜ್‌ಮೆಂಟ್ ಆದಾಗ ಬಲಗೈ ರಿಂಗ್ ಫಿಂಗರ್‌ಗೆ ಉಂಗುರ ತೊಡೋದು ಗೊತ್ತು. ಅದೂ ಸಾಮಾನ್ಯವಾಗಿ ಬಂಗಾರದ್ದು. ಆದರೆ, ಫ್ಯಾಷನ್ ಹೆಸರಿಲ್ಲಿ ತೊಡುವ ಉಂಗುರಗಳಿಗೆ ಹೇಳುವಂಥ ವೈಶಿಷ್ಟ್ಯವಿಲ್ಲದಿದ್ದರೂ, ಒಂದೊಂದು ಬೆರಳಿಗೆ ತೊಡುವ, ಒಂದೊಂದು ರೀತಿಯ ಉಂಗುರಗಳಿಗೆ ಒಂದೊಂದು ಅರ್ಥವಿರುತ್ತದೆ.

Finger ring depicts character

ಉಂಗುರ ತೊಡುವುದು ಪುರಾತನ ಸಂಪ್ರದಾಯವಾದರೂ, ಇದು ವಿವಿಧ ಮಜಲುಗಳನ್ನು ಪಡೆದು, ಆಧುನೀಕತೆ ಹೆಸರಿಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ. ಸಂಪ್ರದಾವಯೇ ಆಧುನಿಕ ಬಣ್ಣ ಪಡೆದುಕೊಂಡಿದ್ದು, ಪ್ರತಿಯೊಂದೂ ಬೆರಳಿಗೂ ತೊಡುವ ಉಂಗುರಗಳು ಇದೀಗ ಫ್ಯಾಷನ್ ಜಗತ್ತಿನಲ್ಲಿ ಲಭ್ಯ. ಅಷ್ಟಕ್ಕೂ ಯಾವ ಬೆರಳಿಗೆ, ಎಂಥ ಉಂಗುರ ತೊಟ್ಟರೆ ಏನರ್ಥ?

 

Finger ring depicts character

ಕಿರು ಬೆರಳು 

ಸ್ಟೈಲಿಷ್ ಉಂಗುರವನ್ನು ಕಿರು ಬೆರಳಿಗೆ  ಧರಿಸುತ್ತಾರೆ. ಜ್ಯೋತಿಷ್ಯಶಾಸ್ತ್ರ ಮತ್ತು ಹಸ್ತಸಮುದ್ರಿಕದ ಪ್ರಕಾರ ಕಿರು ಬೆರಳಿಗೆ ಉಂಗುರ ಧರಿಸುವುದರಿಂದ ಬುದ್ಧಿಶಕ್ತಿ ಹೆಚ್ಚಿದ್ದು, ಜೀವನದಲ್ಲಿ ಛಲ ಹೊಂದಿರುತ್ತಾರೆ.

 

Finger ring depicts character

ರಿಂಗ್ ಬೆರಳು 

ಈ ಬೆರಳಿನಲ್ಲಿ ಉಂಗುರ ತೊಟ್ಟರೆ ಮದುವೆಯಾಗಿದೆ ಎಂದರ್ಥ. ಚಂದಿರ, ಸೃಜನಶೀಲತೆ, ಸೌಂದರ್ಯ, ಪ್ರೀತಿ ಹಾಗೂ ಪ್ರೇಮವನ್ನು ಪ್ರತಿನಿಧಿಸುವ ಬೆರಳಿದು.

 

Finger ring depicts character

ಮಧ್ಯ ಬೆರಳು

ಜೀವನದ ಸಮತೋಲನ ಮತ್ತು ಜವಾಬ್ದಾರಿಯನ್ನು ಪ್ರತಿನಿಧಿಸುವ ಬೆರಳಿದು. ಈ ಬೆರಳು ಶನಿ ಗ್ರಹಕೂಟದೊಂದಿಗೆ ಸಂಬಂಧ ಹೊಂದಿದ್ದು, ಕಬ್ಬಿಣ ಹಾಗೂ ತಗಡಿನ ಉಂಗುರ ಧರಿಸಿದರೆ ಶ್ರೇಷ್ಠ.

 

Finger ring depicts character

ತೋರು ಬೆರಳು

ನಾಯಕತ್ವ, ಶಕ್ತ ಅಧಿಕಾರವನ್ನು ಪ್ರತಿನಿಧಿಸುವ ಬೆರಳಿದು.

 

Finger ring depicts character

ಹೆಬ್ಬೆರಳು 

ಪ್ರಭಾವಶಾಲಿ ವ್ಯಕ್ತಿತ್ವ ಹೊಂದಿರುವವರು ಈ ಬೆರಳಿಗೆ ಉಂಗುರ ತೊಡುತ್ತಾರೆ.

Follow Us:
Download App:
  • android
  • ios