ಫ್ಯಾಶನ್ ಟ್ರೆಂಡ್ ವಿಚಾರಕ್ಕೆ ಬಂದ್ರೆ ಪ್ರಿಯಾಂಕ ಸದಾ ಮುಂದು. ಫ್ಯಾಷನ್ ಪ್ರಿಯರಿಗೆ ಪ್ರಿಯಾಂಕ ಐಕಾನ್ ಇದ್ದಂತೆ. ಈ ಮೂಲಕ ಪಿಗ್ಗಿ ಗಮನ ಸೆಳೆಯುತ್ತಾರೆ. ಫ್ಯಾಷನ್ ಪ್ರಿಯರಿಗೆ ಒಂದಷ್ಟು ಟಿಪ್ಸ್ ನೀಡಿದ್ದಾರೆ. ಇವರ ಸಿಂಪಲ್ ಫ್ಯಾಶನ್ ಟಿಪ್ಸ್’ಗಳನ್ನು ಫಾಲೋ ಮಾಡಿ. ನೀವೂ ಟ್ರೆಂಡಿ ಎನಿಸಿಕೊಳ್ಳಿ. 

ಬಣ್ಣದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. 


ಕೆಲವು ಸ್ಟಾರ್’ಗಳು ರೋಮಾಂಚನ ಹುಟ್ಟಿಸುವ ಬಣ್ಣಗಳಿಂದ ದೂರವಿರುತ್ತಾರೆ ಆದರೆ ಪ್ರಿಯಾಂಕ ಅಂತಹ ಬಣ್ಣಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಅದರಲ್ಲೂ ಪಿಂಕ್, ಕೆಂಪು ಬಣ್ಣಗಳೆಂದರೆ ಇವರಿಗೆ ಬಹಳ ಪ್ರೀತಿ. 

ನಿಮ್ಮ ತನವನ್ನು ಬಿಡಬೇಡಿ 


ಬೇರೆಯವರವನ್ನು ಅನುಕರಣೆ ಮಾಡಲು ಹೋಗಿ ನಿಮ್ಮತನವನ್ನು ಬಿಡಬೇಡಿ. ಆಯಾ ಸನ್ನಿವೇಶಕ್ಕೆ ತಕ್ಕಂತೆ, ಆಯಾ ಸಂದರ್ಭಕ್ಕೆ ತಕ್ಕಂತೆ ಬಟ್ಟೆಗಳನ್ನು ಧರಿಸಿ. 

ನಿಮ್ಮ ಫೇವರೇಟ್ ಬಟ್ಟೆಗಳನ್ನು ಪದೇ ಪದೇ  ಧರಿಸಿ


ನಿಮ್ಮ ಬಳಿ ಎಷ್ಟೇ ಬಟ್ಟೆಗಳಿದ್ದರೂ ಅವುಗಳಲ್ಲಿ ಕೆಲವು ಮಾತ್ರ ನಿಮ್ಮ ಫೇವರೇಟ್ ಆಗಿರುತ್ತೆ. ನಿಮ್ಮ ಫೇವರೇಟ್ ಬಟ್ಟೆಗಳನ್ನೇ ಪದೇ ಪದೇ ಹಾಕಿಕೊಳ್ಳಿ. ಅದು ನಿಮಗೆ ಕಂಫರ್ಟಬಲ್ ನೀಡುತ್ತದೆ. 

ಮಿಕ್ಸ್ ಹೈ ಅಂಡ್ ಲೋ 

 


ಸಾಮಾನ್ಯವಾಗಿ ಸೆಲೆಬ್ರಿಟಿಗಳು ವರ್ಸೇಸ್ ಬಟ್ಟೆಗಳನ್ನು ಇಷ್ಟಡುತ್ತಾರೆ. ಇದಕ್ಕೆ ಪ್ರಿಯಾಂಕ ಕೂಡಾ ಹೊರತಲ್ಲ. ಇವರು ಆಗಾಗ ಮಿಕ್ಸ್ ಅಂಡ್ ಲೋ ಧರಿಸಿ ಸಖತ್ ಪೋಸ್ ಕೊಡುತ್ತಾರೆ.