Keep Snakes Away : ಹಾವು ಹೇಳಿ – ಕೇಳಿ ಮನೆಗೆ ಬರೋದಿಲ್ಲ. ಆದ್ರೆ ಹಾವು, ಮನೆ – ಮನೆ ಸುತ್ತಮುತ್ತ ಕಾಣಿಸಿಕೊಳ್ಳಲು ನಾವೂ ಕಾರಣ. ನಮ್ಮ ಕೆಲ ತಪ್ಪು ಹಾವನ್ನು ಆಕರ್ಷಿಸುತ್ತದೆ.
ಮಳೆಗಾಲದಲ್ಲಿ ಹಾವಿ (snake)ನ ಕಾಟ ಹೆಚ್ಚು. ಮನೆ, ಮನೆ ಸುತ್ತ ಹಾವು ಪ್ರತ್ಯಕ್ಷವಾಗುತ್ತೆ. ಬೂಟ್ ಒಳಗೆ, ಹೆಲ್ಮೆಟ್ ಒಳಗೆ ಹಾವು ಕಾಣಿಸಿಕೊಂಡ ಅನೇಕ ಎಗ್ಸಾಂಪಲ್ ಇದೆ. ಕರೆಯದೆ ಮನೆಗೆ ಬರುವ ಅಪಾಯಕಾರಿ ಅತಿಥಿ ಅಂದ್ರೆ ಹಾವು. ದೂರದಲ್ಲಿ ಎಲ್ಲೋ ಹಾವು ನೋಡಿದ್ರು ಭಯವಾಗುತ್ತೆ. ಇನ್ನು ಮನೆಯೊಳಗೆ ಹಾವು ಬಂದ್ರೆ ಪರಿಸ್ಥಿತಿ ಸಂಪೂರ್ಣ ಹದಗೆಡುತ್ತೆ. ಮನೆಯೊಳಗೆ, ಮನೆಯ ಸುತ್ತಮುತ್ತ ಹಾವು ಕಂಡ್ರೆ ಭಯಗೊಳ್ಳುವ ಜನರು ಅದನ್ನು ಕೊಲ್ತಾರೆ. ಪ್ರಾಣ ಭಯಕ್ಕೆ ಹಾವಿನ ಹತ್ಯೆ ಮಾಡುವ ಜನರಿಗೆ ನಂತ್ರ ಭಯ ಶುರುವಾಗುತ್ತೆ. ಹಿಂದೂ ಧರ್ಮ (Hinduism)ದಲ್ಲಿ ಹಾವನ್ನು ದೇವರಿಗೆ ಹೋಲಿಸಲಾಗಿದೆ. ಹಾವನ್ನು ಕೊಲ್ಲುವ ಬದಲು ನೀವು ಅದು ನಿಮ್ಮ ಮನೆ ಕಡೆ ಬರದಂತೆ ಕೆಲ ಉಪಾಯ ಮಾಡ್ಬೇಕು. ಸಾಮಾನ್ಯವಾಗಿ ಹಾವುಗಳು ತೇವ ಮತ್ತು ತಂಪಾದ ಸ್ಥಳಗಳನ್ನು ಹುಡುಕುತ್ತವೆ. ಮನೆಗಳು ಅವುಗಳಿಗೆ ಸುರಕ್ಷಿತ ಸ್ಥಳ ಅನ್ಸುತ್ತೆ. ನಿಮ್ಮ ಮನೆಯ ಸುತ್ತಮುತ್ತ ಇರುವ ಪರಿಸರ ಹಾವನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚು. ಹಾಗಾಗಿ ಹಾವು ಮನೆಗೆ ಬರಬಾರದು ಅಂದ್ರೆ ಮೊದಲು ಮನೆ ಸುತ್ತಮುತ್ತಲ ಪರಿಸರದ ಬಗ್ಗೆ ಗಮನ ಹರಿಸಿ.
ಹಾವು ಮನೆಗೆ ಬರದಂತೆ ಏನು ಮಾಡ್ಬೇಕು? :
1.ಮನೆ ಸುತ್ತ ಮುತ್ತ ಸ್ವಚ್ಛತೆ ಕಾಯ್ದುಕೊಳ್ಳಿ. ಮುಖ್ಯ ವಿಷ್ಯವೆಂದ್ರೆ ನಿಮ್ಮ ಮನೆ ಸುತ್ತಮುತ್ತಲ ಜಾಗವನ್ನು ಸ್ವಚ್ಛವಾಗಿಡಿ. ಹಾವು, ಪೊದೆ, ಕಲ್ಲಿನ ರಾಶಿ, ಮರದ ತುಂಡುಗಳು, ಕಸದ ರಾಶಿಯಲ್ಲಿ ಅಡಗಿಕೊಂಡಿರುವ ಸಾಧ್ಯತೆ ಹೆಚ್ಚು. ಮನೆಯ ಸುತ್ತಮುತ್ತ ಇದ್ಯಾವುದೂ ಇರದಂತೆ ನೋಡಿಕೊಳ್ಳಿ. ಪೊದೆಗಳನ್ನು ಸ್ವಚ್ಛಗೊಳಿಸಿ, ಆಗಾಗ ಮನೆ ಸುತ್ತಮುತ್ತಲಿನ ಕಳೆಗಳನ್ನು ತೆಗೆಯಿರಿ, ಕಸ ಇರದಂತೆ ನೋಡಿಕೊಳ್ಳಿ. ಹಾಗೆಯೇ ನೀರು ನಿಲ್ಲದಂತೆ ಎಚ್ಚರಿಕೆವಹಿಸಿ.
2.ಮನೆಯನ್ನು ಭದ್ರಗೊಳಿಸಿ. ಮನೆಯ ಬಾಗಿಲು, ಕಿಟಕಿ ಹಾಗೂ ಕೊಳಕು ಹೋಗುವ ಜಾಗ, ಗೋಡೆಯ ಮೇಲ್ಭಾಗ ಹಾಗೂ ಕೆಳ ಭಾಗದಲ್ಲಿ ಬಿರುಕುಗಳಿದ್ದರೆ ಅದನ್ನು ಮುಚ್ಚಬೇಕು. ಮಣ್ಣು ಅಥವಾ ಸುಣ್ಣದ ಸಹಾಯದಿಂದ ನೀವು ಮನೆಯಲ್ಲಿರುವ ಬಿರುಕುಗಳನ್ನು ಮುಚ್ಚಿ, ಯಾವುದೇ ಪ್ರಾಣಿ ಒಳಗೆ ಬರದಂತೆ ನೋಡಿಕೊಳ್ಳಿ. ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನೆಟ್ ಹಾಕೋದು ಉತ್ತಮ.
3.ಎಲ್ಲಿ ಲೀಕೇಜ್ ಇದ್ರೂ ಅದನ್ನು ಸರಿಪಡಿಸಿ. ಸ್ವಿಮ್ಮಿಂಗ್ ಪೂಲ್, ಕೊಳಗಳು ಮತ್ತು ಇತರ ನೀರಿನ ಮೂಲಗಳನ್ನು ಆಗಾಗ ಸ್ವಚ್ಛಗೊಳಿಸ್ತಿರಿ. ನೀರಿರುವ ಜಾಗದಲ್ಲಿ ಹಾವಿರುವ ಅಪಾಯ ಹೆಚ್ಚು.
4.ಹಾವುಗಳು ತಿನ್ನುವ ಆಹಾರ ನಿಮ್ಮ ಮನೆಯಲ್ಲಿ ಇರದಂತೆ ನೋಡಿಕೊಳ್ಳಿ. ಹಾವುಗಳು ಕೀಟಗಳು, ಕಪ್ಪೆ ಸೇರಿದಂತೆ ತಮ್ಮ ಆಹಾರ ಹುಡುಕ್ತಾ ಬರುತ್ತವೆ. ಹಾಗಾಗಿ ಮನೆಯಲ್ಲಿ ಕೀಟಗಳು ಇರದಂತೆ ನೋಡ್ಕೊಳ್ಳಿ.
5.ಹಾವುಗಳಿಗೆ ಕೆಲವೊಂದು ವಾಸನೆ ಇಷ್ಟವಾಗೋದಿಲ್ಲ. ಹಾವು ಬೆಳ್ಳುಳ್ಳಿ ಮತ್ತು ಈರುಳ್ಳಿ (garlic and onion) ವಾಸನೆಯನ್ನು ಇಷ್ಟಪಡುವುದಿಲ್ಲ. ಮನೆಯ ಮುಖ್ಯ ದ್ವಾರ ಹಾಗೂ ಹಾವು ಬರುವ ಸಾಧ್ಯತೆ ಇರುವ ಜಾಗದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ರಸವನ್ನು ಹಾಕ್ತಿರಿ.
6.ನೀವು ಬೇವಿನ ಕಹಿ ಮತ್ತು ವಾಸನೆಯಿಂದ ಹಾವು ದೂರ ಓಡುತ್ತದೆ. ನಿಮ್ಮ ಮನೆಯ ಸುತ್ತ ಮುತ್ತ ನೀವು ಬೇವಿನ ಗಿಡ ಬೆಳೆಸಬಹುದು. ಎಲ್ಲರ ಮನೆ ಮುಂದೆ ಬೇವಿನ ಗಿಡ ಬೆಳೆಸಲು ಸಾಧ್ಯವಿಲ್ಲ. ನೀವು ಬೇವಿನ ಎಲೆಯನ್ನು ನೀರಿನಲ್ಲಿ ಕುದಿಸಿ, ಆ ರಸವನ್ನು ಮನೆಯ ಸುತ್ತಮುತ್ತ ಸಿಂಪಡಿಸಬಹುದು. ಹರಳೆಣ್ಣೆ ಕೂಡ ಹಾವಿಗೆ ಇಷ್ಟವಿಲ್ಲ. ನೀವು ಮನೆ ಸುತ್ತ ಹರಳೆಣ್ಣೆ ಕೂಡ ಹಾಕ್ಬಹುದು.
7.ಶೂರ್ಯಾಕ್ ಗಳನ್ನು ಆಗಾಗ ಸ್ವಚ್ಛಗೊಳಿಸಿ. ಅದ್ರ ಬಾಗಿಲು ಸದಾ ಮುಚ್ಚಿರಲಿ. ಬೆಳಕಿರುವ, ಗಾಳಿಯಾಡುವ ಜಾಗದಲ್ಲಿ ಇದನ್ನು ಇಡಿ.
