ನಾಗರಹಾವು ಕಡಿತಕ್ಕೊಳಗಾದ ಮಹಿಳೆಗೆ ಆಸ್ಪತ್ರೆಗೆ ಕರೆದೊಯ್ಯುವ ಬದಲು ಗ್ರಾಮಸ್ಥರು ಬ್ಲಾಕ್ ಮ್ಯಾಜಿಕ್ ಮಾಡಿದ ವಿಡಿಯೋ ವೈರಲ್ ಆಗಿದೆ. ಹಾವು ಪುನಃ ವಿಷ ಹೀರಿಕೊಳ್ಳುವಂತೆ ಮಹಿಳೆಯ ಮೇಲೆ ಹಾಕುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಮೂಢನಂಬಿಕೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗರಹಾವು ಕಡಿತಕ್ಕೆ ಒಳಗಾದ ಮಹಿಳೆಯನ್ನ ಆಸ್ಪತ್ರೆಗೆ ಕರ್ಕೊಂಡು ಹೋಗಬೇಕಾದ ಸಮಯದಲ್ಲಿ ಬ್ಲಾಕ್ ಮ್ಯಾಜಿಕ್ ಮಾಡಿದ ಗ್ರಾಮಸ್ಥರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗುತ್ತಿದೆ.

ಬಿಹಾರದ ಸೀತಾಮರ್ಹಿಯಲ್ಲಿ ಈ ಘಟನೆ ನಡೆದಿದೆ. ನಾಗರ ಹಾವು ಕಡಿತಕ್ಕೆ ಒಳಗಾದ ಮಹಿಳೆಯನ್ನ ಆಸ್ಪತ್ರೆಗೆ ಕರ್ಕೊಂಡು ಹೋಗದೆ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ. ಇಲ್ಲಿ ಹಾವು ಕಡಿತಕ್ಕೆ ಒಳಗಾಗಿದ್ದ ಮಹಿಳೆಯಿಂದ ಕಚ್ಚಿದ ಹಾವು ಪುನಃ ವಾಪಸ್ ಮಹಿಳೆಯ ದೇಹದಿಂದ ವಿಷವನ್ನು ಹೀರಿಕೊಳ್ಳುವಂತೆ ಸುತ್ತಲೂ ನಿಂತ ಜನರು, ಹಾವನ್ನು ಮಹಿಳೆಯ ಬಳಿಗೆ ಹಾಕುತ್ತಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Scroll to load tweet…

ಶೈಲೇಂದ್ರ ಶುಕ್ಲ ಅನ್ನೋ ಎಕ್ಸ್ ಯೂಸರ್ ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಗ್ರಾಮಸ್ಥರು ಮಹಿಳೆಯ ಸುತ್ತಲೂ ನಿಂತಿದ್ದಾರೆ. ಮಹಿಳೆ ತನ್ನ ಹಳದಿ ಸೀರೆಯಿಂದ ಮುಖ ಮುಚ್ಚಿಕೊಂಡಿದ್ದಾಳೆ. ಕೈ, ಕಾಲು ಮಾತ್ರ ಕಾಣಿಸ್ತಿದೆ. ಮಹಿಳೆ ದೇಹದ ಹತ್ತಿರ ಹಾವು ಇದೆ. ಹಾವು ಹೊರಗೆ ಹೋಗೋಕೆ ಟ್ರೈ ಮಾಡ್ತಿದ್ರೆ ಗ್ರಾಮಸ್ಥರು ಕೋಲಿನಿಂದ ಹಾವನ್ನ ಮಹಿಳೆ ಮೇಲೆ ಹಾಕ್ತಿದ್ದಾರೆ.

ವಿಡಿಯೋ ವೈರಲ್ ಆದ್ಮೇಲೆ ಇದು ಬ್ಲಾಕ್ ಮ್ಯಾಜಿಕ್ ಅಲ್ಲ, ಹಾವು ಕಡಿತಕ್ಕೆ ಹಾವಿನಿಂದಲೇ ವಿಷ ತೆಗೆಯೋ ಪ್ರಯತ್ನ ಅಂತ ಕೆಲವರು ಹೇಳಿದ್ದಾರೆ. ಮಹಿಳೆ ಬದುಕಿದ್ದಾಳೋ ಇಲ್ವೋ ಗೊತ್ತಿಲ್ಲ. ನಾಗರ ಹಾವು ಕಡಿತ ತುಂಬಾ ಅಪಾಯಕಾರಿ. ಹಾಗಾಗಿ ಸೋಪಿನಿಂದ ತೊಳೆದು, ಬಿಗಿಯಾಗಿ ಕಟ್ಟಿ ಆಸ್ಪತ್ರೆಗೆ ಕರ್ಕೊಂಡು ಹೋಗಬೇಕು ಅಂತ ತಜ್ಞರು ಹೇಳುತ್ತಾರೆ. ಇಲ್ಲ ಅಂದ್ರೆ ಸಾವು ಖಚಿತ. ಆದರೆ, ಇಲ್ಲಿ ನಡೆದ ಘಟನೆಯನ್ನು ನೋಡಿದ ನೆಟ್ಟಿಗರು, ಇವರೆಂಥಾ ಮೂರ್ಖರು ಎಂದು ಕಿಡಿಕಾರಿದ್ದಾರೆ. ಇನ್ನು ಒಬ್ಬ ಅಮಾಯಕ ಮಹಿಳೆಯ ಜೀವನ ಬಲಿ ಕೊಡಲಾಗುತ್ತಿದೆ ಎಂದು ಚರ್ಚೆ ಮಾಡಿದ್ದಾರೆ.