ಈ ವಿಚಿತ್ರ ಬಾರ್‌ನಲ್ಲಿ ವಿಸ್ಕಿ ಕುಡಿಯಲು ಜನ ಮುಗಿ ಬೀಳುತ್ತಾರೆ. ಈ ಬಾರ್‌ಗೆ ಬಂದವರೆಲ್ಲಾ ವಿಸ್ಕಿ ಆರ್ಡರ್ ಮಾಡುತ್ತಾರೆ. ಇದು ಚಿತ್ರ ವಿಚಿತ್ರ ಬಾರ್, ಕುಡುಕರನ್ನು ಆಕರ್ಷಿಸುವ ಈ ಬಾರ್‌ನಲ್ಲಿ ಏನಿದೆ? ವಿಸ್ಕಿ ವಿಶೇಷ ಏನು?

ಪ್ರತಿಯೊಬ್ಬ ಮದ್ಯ ಪ್ರಿಯನಿಗೆ ಫೇವರಿಟ್ ಬಾರ್ ಅನ್ನೋದು ಇದ್ದೇ ಇರುತ್ತೆ. ಪ್ರತಿ ಗ್ರಾಮ, ಊರು, ಪಟ್ಟಣ, ಸಿಟಿಗಳಲ್ಲಿ ಆಸಕ್ತಿಗೆ ತಕ್ಕಂತೆ ವಿಶೇಷ ಬಾರ್‌ಗಳಿರುತ್ತದೆ. ಈ ಪೈಕಿ ಒಬ್ಬೊಬ್ಬರಿಗೆ ಒಂದೊಂದು ಇಷ್ಟವಾಗುತ್ತೆ. ಆದರೆ ಇಲ್ಲೊಂದು ವಿಚಿತ್ರ ಬಾರ್ ಇದೆ. ಈ ಬಾರ್‌ನಲ್ಲಿ ವಿಸ್ಕಿ ಕುಡಿಯಲು ಜನ ಮುಗಿಬೀಳುತ್ತಾರೆ, ಕ್ಯೂ ನಿಲ್ಲುತ್ತಾರೆ. ಟೇಬಲ್ ಬುಕ್ ಮಾಡುತ್ತಾರೆ. ಜನರ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬಾರ್ ಮಾಲೀಕರು ಗ್ರಾಹಕರ ಮೇಲೆ ದಂಡ ವಿಧಿಸಲು ಆರಂಭಿಸಿದ್ದಾರೆ. ಈ ವಿಚಿತ್ರ ಬಾರ್‌ನಲ್ಲಿ ವಿಸ್ಕಿ ಕುಡಿಯಲು ಜನ ಓಡೋಡಿ ಬರಲು 1920ರ ಕತೆಯೊಂದು ಹೆಣೆದುಕೊಂಡಿದೆ.

ಗ್ಲಾಸ್‌ನಲ್ಲಿ ಕೊಡುವ ವಿಸ್ಕಿಯಲ್ಲಿ ಏನಿದೆ?

ಈ ಬಾರ್ ಕೆನಾಡಾದ ಡಾಸನ್ ಸಿಟಿಯ ಯುಕಾನ್‌ನಲ್ಲಿದೆ. ಇದರ ಹೆಸರು ಸೌರ್ಡೋ ಸಲೂನ್ ಬಾರ್. ಇಲ್ಲಿ ನೀಡುವ ಸೌರ್‌ಟೋ ಕಾಕ್‌ಟೇಲ್ ವಿಸ್ಕಿ ಅತ್ಯಂತ ಜನಪ್ರಿಯ. ಪ್ರಪಂಚದ ಹಲವು ಮದ್ಯ ಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ. ಬಳಿಕ ಸೌರ್‌ಟೋ ಕಾಕ್‌ಟೇಲ್ ವಿಸ್ಕಿಯ ಒಂದೊಂದೇ ಗುಟುಕು ಏರಿಸಿ ತೇಲಾಡುತ್ತಾರೆ. ಈ ವಿಸ್ಕಿಯಲ್ಲಿ ಮಾನವನ ರಿಯಲ್ ಕಾಲಿನ ಬೆರಳು ಹಾಕಿ ಕೊಡುತ್ತಾರೆ. ವಿಸ್ಕಿ ಜೊತೆ ಮಾನನವ ರಿಯಲ್ ಕಾಲಿನ ಬೆರಳು ಇರುತ್ತೆ. ಜನರು ಈ ವಿಸ್ಕಿಯನ್ನು ಒಂದು ಹನಿ ಬಿಡದಂತೆ ಕುಡಿಯುತ್ತಾರೆ.

ಸೌರ್‌ಟೋ ಕಾಕ್‌ಟೇಲ್ ವಿಸ್ಕಿ ವಿಶೇಷತೆ

ಇದು ಕಾಕ್‌ಟೇಲ್ ವಿಸ್ಕಿ. ಇದರ ಮಹತ್ವದ ಅರಿಯಲು 1920ರಲ್ಲಿ ನಡದೆ ಘಟನೆಯೊಂದು ತಿಳಿದುಕೊಳ್ಳಬೇಕು. ಲೂಯಿ ಮತ್ತು ಓಟೋ ಲಿಂಕನ್ ಸಹೋದರರು ಕೆನಡಾದ ತೀವ್ರ ಹಿಮಬಿರುಗಾಳಿಯಲ್ಲಿ ಸಿಲುಕಿಕೊಂಡಿದ್ದರು. ಈ ಹಿಮಗಾಳಿಯಲ್ಲಿ ಲೂಯಿ ಕಾಲು ಬೆರಳು ಹೆಪ್ಪುಗಟ್ಟಿ ಸಮಸ್ಯೆಯಾಗಿತ್ತು. ಇಡೀ ದೇಹಕ್ಕೆ ಸಮಸ್ಯೆಯಾಗುವುದು ತಡೆಯಲು ಕೊಡಲಿಯಿಂದ ಕಾಲಿನ ಬೆರಳು ಕತ್ತರಿಸಿದ್ದರು. ಈ ಕತ್ತರಿಸಿದ ಬೆರಳನ್ನು ಆಲ್ಕೋಹಾಲ್ ಜಾರ್‌ನಲ್ಲಿಟ್ಟು ಸಂರಕ್ಷಿಸಲಾಗಿತ್ತು. 50 ವರ್ಷ ಬಳಿಕ ಮನೆ ಸ್ವಚ್ಚಗೊಳಿಸುವಾಗ ಮದ್ಯದ ಜಾರ್‌ನಲ್ಲಿ ಸಂರಕ್ಷಿಸಿದ್ದ ಕಾಲಿನ ಬೆರಳು ನೋಡಿದ್ದಾರೆ. ಕ್ಯಾಪ್ಟನ್ ಡಿಕ್ ಸ್ಟೀವೆನ್ಸ್ ಈ ಜಾರ್‌ನ್ನು ಡಾಸನ್ ಸಿಟಿಯ ಸ್ಥಳೀಯ ಬಾರ್‌ಗೆ ನೀಡಿದ್ದಾರೆ. ಈ ಬಾರ್ 50 ವರ್ಷದ ಹಿಂದಿನ ಸೀಕ್ರೆಟ್ ಬಯಲು ಮಾಡಿತು. ಬಳಿಕ ಇದನ್ನೇ ಮೂಲವಾಗಿಟ್ಟುಕೊಂಡು ಸೌರ್‌ಟೋ ಕಾಕ್‌ಕೇಲ್ ಆರಂಭಿಸಿತು.

8 ಬೆರಳು ಬದಲಾವಣೆ

ಸೌರ್‌ಟೋ ಕಾಕ್‌ಟೇಲ್ ಆರ್ಡರ್ ಮಾಡಿದರೆ ಗ್ಲಾಸಿನಲ್ಲಿ ರಿಯಲ್ ಕಾಲಿನ ಬೆರಳು ಹಾಕಿ ನೀಡುತ್ತಾರೆ. ಮದ್ಯ ಪ್ರಿಯರು ವಿಸ್ಕಿ ಕುಡಿದು ಕಾಲಿನ ಬೆರಳನ್ನು ಗ್ಲಾಸಿನಲ್ಲೇ ಬಿಡಬೇಕು. ಕೆಲ ಸಂದರ್ಭಗಳಲ್ಲಿ ಮದ್ಯ ಪ್ರಿಯರು ಈ ಕಾಲಿನ ಬೆರೆಳು ಎಸ್ಕೇಪ್ ಮಾಡಿದ್ದಾರೆ. ಹೀಗೆ 8 ಬಾರಿ ಕಾಲಿನ ಬೆರಳು ಬದಲಿಸಲಾಗಿದೆ.

1980ರಲ್ಲಿ ಓರ್ವ ಉದ್ಯಮಿ ತನ್ನ 13ನೇ ಪೆಗ್‌ ಅಮಲಿನಲ್ಲಿ ಬೆರಳನ್ನು ನುಂಗಿಬಿಟ್ಟಿದ್ದ. ಬಳಿಕ ಬೆರಳು ಕಳುವಾದರೆ, ನಾಪತ್ತೆಯಾದರೆ ದುಬಾರಿ ದಂಡ ವಿಧಿಸುವ ಸಂಪ್ರದಾಯ ಆರಂಭಗೊಂಡಿತು. 2 ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ. ಇನ್ನು ಸೌರ್‌ಟೋ ಕಾಕ್‌ಟೇಲ್ ಕುಡಿಯುವಾಗ ಕಾಲಿನ ಬೆರಳು ತುಟಿಗಳನ್ನು ಮುಟ್ಟಬೇಕು. ಬಳಿಕ ಅಸ್ವಾದಿಸಿ ಕುಡಿಯಬೇಕು. ಹೀಗೆ ಕುಡಿಯುವ ಶ್ರೇಷ್ಟರಿಗೆ ಕ್ಲಬ್ ಸದಸ್ಯತ್ವ ನೀಡಲಾಗುತ್ತದೆ. ಜೊತೆಗೆ ಪ್ರಮಾಣಪತ್ರ ನೀಡಲಾಗುತ್ತದೆ.