Asianet Suvarna News Asianet Suvarna News

ವಜೈನಲ್ ಡಿಸ್ಚಾರ್ಜ್‌ಗೆ ಬೇಡ ಚಿಂತೆ, ಆದ್ರೂ ಗೊತ್ತಿರಲಿ ಕೊಂಚ!

ಮಹಿಳೆಯರಿಗೆ ವೈಟ್ ಡಿಸ್ಚಾರ್ಜ್(ಬಿಳಿ ಸ್ರಾವ) ಆಗುವುದು ಸಾಮಾನ್ಯ. ಆದರೆ ಇದರಲ್ಲಿ ಯಾವುದು ಸಾಮಾನ್ಯ, ಯಾವುದು ಅಸಾಮಾನ್ಯ ಅನ್ನೋದನ್ನು ನೀವು ತಿಳಿದುಕೊಳ್ಳಬೇಕು. ಯಾಕೆಂದರೆ ಉತ್ತಮ ಆರೋಗ್ಯಕ್ಕೆ ಈ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. 

Every women Should know about vaginal white discharge
Author
Bangalore, First Published Jun 15, 2019, 10:31 AM IST

ಪಿರಿಯಡ್ಸ್‌ಗೂ ಮುನ್ನ ಅಥವಾ ಪ್ರತಿದಿನ ಬಿಳಿಸ್ರಾವವಾಗುತ್ತಿರುತ್ತದೆ. ಕೆಲವರಿಗೆ ಈ ಬಗ್ಗೆ ಭಯ ಇರುತ್ತದೆ. ಈ ರೀತಿಯಾಗುವುದು ಸರೀನಾ? ತಪ್ಪಾ? ಎಂಬುವುದೇ ಗೊತ್ತಾಗುವುದಿಲ್ಲ. ಈ ವಜೈನಲ್ ಡಿಸ್ಚಾರ್ಜ್ ಬೇರೆ ಬೇರೆ ಬಣ್ಣಗಳಲ್ಲೂ ಇರುತ್ತದೆ. ಅದನ್ನು ನೀವು ತಿಳಿದುಕೊಳ್ಳಬೇಕು. ಯಾಕೆಂದರೆ ಒಂದೊಂದು ಬಣ್ಣ ಒಂದೊಂದು ಅರ್ಥವನ್ನು ಕೊಡುತ್ತದೆ. ಅಂದರೆ ಕೆಲವು ಬಣ್ಣದ ವಜೈನಲ್ ಡಿಸ್ಚಾರ್ಜ್ ರೋಗದ ಪರಿಣಾಮವೂ ಆಗಿರುತ್ತದೆ. 

ಋತುಸ್ರಾವ ಆಗುವ ಮುನ್ನ ಇದೆಲ್ಲಾ ಆಗುತ್ತೆ, ಹೆದರಬೇಡಿ

ದಪ್ಪವಾದ ವೈಟ್ ಡಿಸ್ಚಾರ್ಜ್: ವಜೈನಲ್ ಡಿಸ್ಚಾರ್ಜ್ ದಪ್ಪವಾಗಿದ್ದು, ಬಿಳಿ ಬಣ್ಣದಿಂದ ಕೂಡಿದ್ದರೆ ಅದು ನಾರ್ಮಲ್ ಡಿಸ್ಚಾರ್ಜ್.  ಇದರೊಂದಿಗೆ ತುರಿಕೆ, ಉರಿ ಮತ್ತು ಇರಿಟೇಷನ್‌ನಂಥ ಸಮಸ್ಯೆಗಳು ಕಂಡು ಬಂದರೆ ಅದು ಈಸ್ಟ್ ಇನ್ಫೆಕ್ಷನ್‌ನಿಂದ ಉಂಟಾಗಿರುವ ಸಾಧ್ಯತೆ ಇದೆ. 

ಹಳದಿ ಡಿಸ್ಚಾರ್ಜ್: ಹಳದಿ ಡಿಸ್ಚಾರ್ಜ್ ಸಾಮಾನ್ಯವಲ್ಲ. ಇದು ಬ್ಯಾಕ್ಟಿರಿಯಲ್ ಇನ್ಫೆಕ್ಷನ್ ಅಥವಾ ಸೆಕ್ಸುಯಲ್ ಟ್ರಾನ್ಸ್ ಮಿಟೆಡ್ ಇನ್ಫೆಕ್ಷನ್‌ ಲಕ್ಷಣ. 

ಲೇಟಾಗೇಕೆ ಆಗುತ್ತೆ ಪಿರಿಯಡ್ಸ್?

ಬ್ರೌನ್ ಡಿಸ್ಚಾರ್ಜ್ : ಸರಿಯಾಗಿ ಋತುಸ್ರಾವ ಆಗದಿದ್ದರೆ ಕಂದು ಬಣ್ಣದಲ್ಲಿ ಡಿಸ್ಚಾರ್ಜ್ ಆಗುತ್ತದೆ. ಆದರೆ ನಿರಂತರವಾಗಿ ಕಂದು ಬಣ್ಣದ ಸ್ರಾವ ಆಗುತ್ತಿದ್ದರೆ ಅದು ಸರ್ವಿಕಲ್ ಕ್ಯಾನ್ಸರ್ ಲಕ್ಷಣವಾಗಿರಬಹುದು. ಆದುದರಿಂದ ಈ ಲಕ್ಷಣ ಕಂಡು ಬಂದ ಕೂಡಲೇ ವೈದ್ಯರನ್ನು ಕಂಡು ಪರಿಹಾರ ಕಂಡುಕೊಂಡರೆ ಉತ್ತಮ. 

ಹಸಿರು ಸ್ರಾವ: ಹಸಿರು ಸ್ರಾವವಾದರೆ ಅದನ್ನು ಕಡೆಗಣಿಸಲೇಬೇಡಿ. ಇದು ಬ್ಯಾಕ್ಟಿರಿಯಾ ಇನ್ಫೆಕ್ಷನ್ ಮತ್ತು ಸೆಕ್ಸುಯಲ್ ಟ್ರಾನ್ಸ್ಮಿಟೆಡ್ ಇನ್ಫೆಕ್ಷನ್ ಲಕ್ಷಣ. ಆದುದರಿಂದ ಈ ರೀತಿ ಸ್ರಾವ ಕಂಡು ಬಂದ ಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ. 

ಈಸ್ಟ್ ಇನ್ಫೆಕ್ಷನ್: ಈಸ್ಟ್ ಇನ್ಫೆಕ್ಷನ್ ಉಂಟಾದರೆ ದಪ್ಪವಾದ, ಬಿಳಿ ಸ್ರಾವ , ತುರಿಕೆ, ಕೆಂಪಾಗುವುದು, ಇರಿಟೇಟಿಂಗ್, ಉರಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. 

ಪಿರಿಯಡ್ಸ್ ವೇಳೆ ಕಾಡೋ ಸ್ತನ ನೋವಿಗೆ ಚಿಂತೆ ಬೇಡ...

ಒಟ್ಟಿನಲ್ಲಿ ಯಾವುದೇ ಡಿಸ್ಚಾರ್ಜ್ ಆದರೂ ಕೆಲ ದಿನಗಳ ನಂತರವೂ ಕಂಟ್ರೋಲ್‌ಗೆ ಬಂದಿಲ್ಲವೆಂದರೆ ವೈದ್ಯರನ್ನು ಕಂಡು, ಸೂಕ್ತ ಚಿಕಿತ್ಸೆ ಪಡೆಯುವುದೊಳಿತು.

Follow Us:
Download App:
  • android
  • ios