ಪಿರಿಯಡ್ಸ್ ಎಂದ ಕೂಡಲೇ ಅದೆಲ್ಲಾ ಸಾಮಾನ್ಯ ತಾನೇ ಎಲ್ಲರಿಗೂ ಒಂದೇ ರೀತಿ ಆಗೋಗಿಲ್ಲ. ಕೆಲವೊಂದು ಸೂಕ್ಷ್ಮ ಅಂಶಗಳ ಬಗ್ಗೆ ಎಲ್ಲರೂ ಅರಿತು ಕೊಂಡಿರುವುದು ಮುಖ್ಯ.

  • ಯಾರು ಹೆಚ್ಚು ಹೆಚ್ಚು ವ್ಯಾಯಾಮ ಅಥವಾ ದೈಹಿಕ ಶ್ರಮ ಹಾಕುತ್ತಾರೋ ಅವರ ಋತುಸ್ರಾವ ಬೇಗ ನಿಲ್ಲುವ ಸಾಧ್ಯತೆ ಇರುತ್ತದೆ. ಮಹಿಳಾ ಕ್ರೀಡಾಪಟುಗಳು ಹಾಗೂ ಕೆಲವು ಡ್ಯಾನ್ಸರ್‌‌ಗಳು ಹೆಚ್ಚೆಚ್ಚು ಕಠಿಣ ವ್ಯಾಯಾಮ ಮಾಡುವುದರಿಂದ ಋತುಸ್ರಾವ ಬೇಗ ನಿಲ್ಲಬಹುದು.
  • ಪಿರಿಯಡ್ಸ್ ವೇಳೆ ಬಹಳಷ್ಟು ಮಹಿಳೆಯರಿಗೆ ಸ್ತನಗಳ ನೋವು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ಸ್ ಬದಲಾವಣೆಯಾಗುವುದರಿಂದ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ, ಅತೀವ ನೋವು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.
  • ಆಹಾರ ಸೇವಿಸದ ಮಹಿಳೆಯರೂ ಋತುಸ್ರಾವದ ಸಮಸ್ಯೆ ಎದುರಿಸುತ್ತಾರೆ. ಜೊತೆಗೆ ಹೊಟ್ಟೆ ನೋವೂ ಕಾಮನ್.
  • ಯಾವುದೇ ಮಹಿಳೆಯರಿಗೆ ಮಲಬದ್ಧತೆ ಸಮಸ್ಯೆ ಇದ್ದರೆ, ಪಿರಿಯಡ್ಸ್‌ ವೇಳೆ ಹೆಚ್ಚು ಸೊಂಟನೋವು ಕಾಣಿಸಿಕೊಳ್ಳುತ್ತದೆ.
  • ಥೈರಾಯ್ಡ್‌ ಸಮಸ್ಯೆ, ಅತಿಯಾದ ಬೊಜ್ಜು, ಗರ್ಭನಿರೋಧಕ ಮಾತ್ರೆಗಳ ಸೇವನೆ, ಹಾರ್ಮೋನ್‌ ಅಸಮತೋಲನ ಹಾಗೂ ಮತ್ತಿತರ ದೈಹಿಕ ಸಮಸ್ಯೆಗಳಿಂದಲೂ ಋತುಚಕ್ರದಲ್ಲಿ ಏರುಪೇರಾಗುತ್ತದೆ.