Home Organization Tips: ಮನೆ ತುಂಬೆಲ್ಲಾ ಸಾಮಾನುಗಳು ತುಂಬಿಕೊಂಡು ಕಿರಿಕಿರಿ ಎನಿಸುತ್ತಿದೆಯೇ?, ಕ್ಲೀನ್ ಮಾಡೋಕೆ ಆಗ್ತಿಲ್ವಾ? ಯಾವುದನ್ನು ಎಸೆಯಬೇಕು ಎಂಬ ಗೊಂದಲವಿದೆಯೇ? ಹಾಗಿದ್ದರೆ ಈ '90-90 ನಿಯಮ' ಪಾಲಿಸಿ. ನಿಮ್ಮ ಮನೆ ಕೇವಲ ಕೆಲವೇ ನಿಮಿಷಗಳಲ್ಲಿ ಅಚ್ಚುಕಟ್ಟಾಗಿ ಕಾಣುವುದು ಗ್ಯಾರಂಟಿ.
ಹೆಚ್ಚಿನ ಜನರಿಗೆ ಹಳೆಯ ವಸ್ತುಗಳನ್ನು ಜೋಪಾನವಾಗಿ ಎತ್ತಿಡುವ ಅಭ್ಯಾಸವಿರುತ್ತದೆ. ಅದಕ್ಕೆ ಮನೆಯ ಯಾವುದಾದರೊಂದು ಮೂಲೆಯಲ್ಲಿ ಹಳೆಯ ಒಡೆದ ಡಬ್ಬಿ, ವರ್ಷಗಳಿಂದ ಕೆಟ್ಟು ಬಿದ್ದಿರುವ ರೇಡಿಯೋ, ಲ್ಯಾಂಡ್‌ಲೈನ್ ಫೋನ್ ಅಥವಾ ಹರಿದ ಸೀರೆಗಳ ರಾಶಿಯನ್ನು ನೀವು ನೋಡಿರಬಹುದು. ಈ ವಸ್ತುಗಳು ಯಾವುದೇ ಕೆಲಸಕ್ಕೆ ಬರುವುದಿಲ್ಲ ಎಂದು ನಮಗೆ ತಿಳಿದಿದ್ದರೂ, ಅವುಗಳನ್ನು ಎಸೆಯಲು ನಮಗೆ ಮನಸ್ಸು ಬರುವುದಿಲ್ಲ.
ಇದರ ಹಿಂದೆ ಮಾನಸಿಕ, ಸಾಂಸ್ಕೃತಿಕ ಮತ್ತು ವ್ಯಾವಹಾರಿಕ ಕಾರಣಗಳಿರುತ್ತವೆ. ಕೆಲವೊಮ್ಮೆ ಹಿರಿಯರು ಬಳಸುತ್ತಿದ್ದ ವಸ್ತುಗಳನ್ನು ಅವರ ನೆನಪಿಗಾಗಿ ವರ್ಷಗಟ್ಟಲೆ ಇಟ್ಟುಕೊಳ್ಳುತ್ತೇವೆ. ಹಳೆಯ ಕಾಲದಲ್ಲಿ ವಸ್ತುಗಳು ಸುಲಭವಾಗಿ ಸಿಗುತ್ತಿರಲಿಲ್ಲ, ಆದ್ದರಿಂದ 'ಮರುಬಳಕೆ' ಮಾಡುವುದು ಹಿಂದಿನ ತಲೆಮಾರಿನ ರಕ್ತದಲ್ಲೇ ಇರುತ್ತದೆ. ಆದರೆ, ಈ ಅನಗತ್ಯ ವಸ್ತುಗಳಿಂದ ಮನೆ ತುಂಬಿದಂತೆ ಕಾಣುತ್ತದೆ ಮತ್ತು ಸ್ವಚ್ಛತೆ ಮಾಡಲು ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತದೆ. ಒಂದು ವೇಳೆ ನೀವು ಕೂಡ ಯಾವುದನ್ನು ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ಎಸೆಯಬೇಕು ಎಂಬ ಗೊಂದಲದಲ್ಲಿದ್ದರೆ, ಶಶಾಂಕ್ ಅಲಶಿ ಅವರು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿರುವ ಈ '90-90 ರೂಲ್' ನಿಮಗಾಗಿ ಇದೆ.
ಏನಿದು 90-90 ನಿಯಮ?
ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸಲು ಈ ನಿಯಮವು ನಿಮ್ಮ ಕೆಲಸವನ್ನು 10 ಪಟ್ಟು ಸರಳಗೊಳಿಸುತ್ತದೆ. ಯಾವುದೇ ವಸ್ತುವನ್ನು ಎಸೆಯುವ ಮುನ್ನ ಈ ಎರಡು ಪ್ರಶ್ನೆಗಳನ್ನು ನಿಮ್ಮನ್ನು ನೀವೇ ಕೇಳಿಕೊಳ್ಳಿ:
“ಕಳೆದ 90 ದಿನಗಳಲ್ಲಿ (3 ತಿಂಗಳು) ನಾನು ಈ ವಸ್ತುವನ್ನು ಬಳಸಿದ್ದೇನೆಯೇ?”
"ಮುಂದಿನ 90 ದಿನಗಳಲ್ಲಿ ನಾನು ಇದನ್ನು ಬಳಸುತ್ತೇನೆಯೇ?"
ಒಂದು ವೇಳೆ ಈ ಎರಡೂ ಪ್ರಶ್ನೆಗಳಿಗೆ ನಿಮ್ಮ ಉತ್ತರ 'ಇಲ್ಲ' ಎಂದಾಗಿದ್ದರೆ, ಆ ವಸ್ತು ಖಂಡಿತವಾಗಿಯೂ ಅನಗತ್ಯವಾದುದು ಎಂದರ್ಥ. ಅದನ್ನು ತಕ್ಷಣವೇ ಮನೆಯಿಂದ ಹೊರಹಾಕಿ. ಯಾವುದಾದರೂ ಒಂದು ಪ್ರಶ್ನೆಗೆ ಉತ್ತರ 'ಹೌದು' ಎಂದಿದ್ದರೆ ಮಾತ್ರ ಆ ವಸ್ತುವನ್ನು ಇಟ್ಟುಕೊಳ್ಳಿ.
ಮನೆಯ ಯಾವ ಭಾಗದಿಂದ ಯಾವ ವಸ್ತುಗಳನ್ನು ತೆಗೆದುಹಾಕಬೇಕು?
1) ಲಿವಿಂಗ್ ರೂಂ
ಹಳೆಯ ಪತ್ರಿಕೆಗಳು ಮತ್ತು ಮ್ಯಾಗಜೀನ್‌ಗಳು.
ಕೆಟ್ಟುಹೋದ ರಿಮೋಟ್‌ಗಳು.
ಸಿಕ್ಕುಬಿದ್ದಿರುವ ವೈರ್‌ಗಳು ಮತ್ತು ಹಾಳಾದ ಚಾರ್ಜರ್‌ಗಳು.
ಒಡೆದ ಫೋಟೋ ಫ್ರೇಮ್‌ಗಳು.
ಬಳಕೆಯಾಗದ ಅಲಂಕಾರಿಕ ವಸ್ತುಗಳು.
ಕೊರಿಯರ್ ಬಾಕ್ಸ್‌ಗಳು.
ಎಕ್ಸ್‌ಪೈರ್ ಆದ ಸ್ಯಾನಿಟೈಸರ್ ಮತ್ತು ಸ್ಪ್ರೇಗಳು.
2) ಕಿಚನ್
ಮುಚ್ಚಳವಿಲ್ಲದ ಪ್ಲಾಸ್ಟಿಕ್ ಡಬ್ಬಿಗಳು.
ಬಳಸದೇ ಇರುವ ಹಳೆಯ ಪಾತ್ರೆಗಳು.
ಒಡೆದ ಪ್ಲಾಸ್ಟಿಕ್ ಐಟಂಗಳು.
ಗೀಚು ಬಿದ್ದಿರುವ ಅಥವಾ ಹಾಳಾದ ಪ್ಲಾಸ್ಟಿಕ್ ತಟ್ಟೆ/ಬಟ್ಟಲುಗಳು."
ಬಳಕೆಯ ಅವಧಿ ಮುಗಿದ (Expired) ಮಸಾಲೆ ಪದಾರ್ಥಗಳು.
ಪೇಪರ್ ಬ್ಯಾಗ್‌ಗಳು ಮತ್ತು ಹಳೆಯ ಸಾಸ್ ಪ್ಯಾಕೆಟ್‌ಗಳು.
ಬಳಸದೇ ಇರುವ ಬಾಟಲಿಗಳು.
3) ಬೆಡ್‌ರೂಂ
ಕಳೆದ 3 ತಿಂಗಳಿಂದ ಧರಿಸದ ಹಳೆಯ ಬಟ್ಟೆಗಳು.
ಜೋಡಿಯಿಲ್ಲದ ಒಂದೇ ಒಂದು ಸಾಕ್ಸ್.
ಹರಿದ ಬೆಡ್ ಶೀಟ್ ಮತ್ತು ತಲೆದಿಂಬಿನ ಕವರ್‌ಗಳು.
ಎಕ್ಸ್‌ಪೈರ್ ಆದ ಪರ್ಫ್ಯೂಮ್ ಮತ್ತು ಡಿಯೋಡರೆಂಟ್.
ವರ್ಷಗಳಿಂದ ಬಳಸದ ಹಳೆಯ ಹ್ಯಾಂಡ್ ಬ್ಯಾಗ್‌ಗಳು.
ಬಳಸದ ಟೋಪಿ ಮತ್ತು ಟೀ ಶರ್ಟ್‌ಗಳು.
4) ಬಾತ್‌ರೂಂ
ಬಳಕೆಯ ಅವಧಿ ಮುಗಿದ ಕ್ರೀಮ್, ಲೋಷನ್ ಮತ್ತು ಸನ್‌ಸ್ಕ್ರೀನ್.
ಹಳೆಯ ರೇಜರ್ ಮತ್ತು ಟ್ರಿಮ್ಮರ್.
ಖಾಲಿಯಾದ ಶಾಂಪೂ ಬಾಟಲಿ ಅಥವಾ ಸಣ್ಣದಾಗಿ ಉಳಿದಿರುವ ಸೋಪು.
ಹಾಳಾದ ಟವೆಲ್.
ಒಡೆದ ಬಕೆಟ್ ಮತ್ತು ಮಗ್‌ಗಳು.
ಹಳೆಯ ಟೂತ್ ಬ್ರಷ್.
ಬಳಸದೇ ಇರುವ ಹೇರ್ ಸ್ಟೈಲಿಂಗ್ ಪರಿಕರಗಳು.