ಬೆಂಗಳೂರಲ್ಲಿ ಬಾಡಿಗೆಗೆ ಮನೆ ಕೊಡೋಕೆ ಲಿಂಕ್ಡ್​ಇನ್ ಪ್ರೊಫೈಲ್ ಕೇಳಿದ ಓನರ್, ಪೋಸ್ಟ್ ವೈರಲ್

ಬೆಂಗಳೂರಲ್ಲಿ ಮನೆ ಹುಡುಕೋದು ಅಷ್ಟು ಸುಲಭವದ ಕೆಲಸವೇನಲ್ಲ. ಹುಡುಕಿದವರಿಗಷ್ಟೇ ಗೊತ್ತು ಅದರ ಕಷ್ಟ. ಅದರಲ್ಲೂ ಬ್ಯಾಚುಲರ್ಸ್‌ ಅಂದ್ರೆ ಹೇಳೋದೇ ಬೇಡ. ಯಾರೂ ಮನೆ ಕೊಡಲ್ಲ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿಗೆ ಬೆಂಗಳೂರಿನಲ್ಲಿ ಮನೆ ಬಾಡಿಗೆ ಬೇಕಂದ್ರೆ ಲಿಂಕ್ಡ್​ಇನ್ ಪ್ರೊಫೈಲ್ ಕೊಡಬೇಕು ಎಂದು ಓನರ್ ಹೇಳಿದ್ದಾರೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗ್ತಿದೆ.

Bengaluru house owner asks for tenants LinkedIn profile for rent, WhatsApp message goes viral Vin

ಬೆಂಗಳೂರಿಗೆ ಹಲವು ರಾಜ್ಯಗಳಿಂದ ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಜನರು ಬಂದು ಸೇರುತ್ತಾರೆ. ಆದರೆ ಈ ಮಹಾನಗರದಲ್ಲಿ ಮನೆ ಹುಡುಕುವುದು ಅಷ್ಟು ಸುಲಭದ ಕೆಲಸವಲ್ಲ. ಜನರು ಎಲ್ಲೆಲ್ಲಿಂದಲೋ ಬರುವ ಕಾರಣ ಮನೆ ಮಾಲೀಕರು ಸಹ ಕಣ್ಣುಮುಚ್ಚಿ ಮನೆ ಬಾಡಿಗೆಗೆ ಕೊಡಲಾಗುವುದಿಲ್ಲ. ಅವರ ಕುರಿತಾಗಿ ವಿಚಾರಿಸಬೇಕಾಗುತ್ತದೆ. ಇಲ್ಲದಿದ್ದರೆ ಯಾವುದಾದರೂ ದುಷ್ಕೃತ್ಯ ಎಸಗಿದರೆ ಅದಕ್ಕೆ ಮನೆ ಮಾಲೀಕರೇ ಹೊಣೆಯಾಗಬೇಕಾಗುತ್ತದೆ. ಅದರಲ್ಲೂ ಬ್ಯಾಚುಲರ್ಸ್ ಅಂದ್ರೆ ಮನೆ ಕೊಡೋಕೆ ಮಾಲೀಕರು ಹಿಂದೇಟು ಹಾಕ್ತಾರೆ. ಬಾಡಿಗೆದಾರರ ಧರ್ಮ, ಲಿಂಗ, ವೈವಾಹಿಕ ಸ್ಥಿತಿಯ ಬಗ್ಗೆ ವಿಚಾರಿಸಿಕೊಳ್ತಾರೆ. ಇದನ್ನೆಲ್ಲಾ ಕೇಳೋದು ಸರಿ. ಆದ್ರೆ ಬೆಂಗಳೂರಿನ ಮನೆ ಮಾಲೀಕರೊಬ್ಬರು ಮನೆ ಹುಡುಕುತ್ತಿದ್ದ ವ್ಯಕ್ತಿಯ ಲಿಂಕ್ಡ್‌ಇನ್ ಪ್ರೊಫೈಲ್‌ನ್ನು ಕೇಳಿದ್ದಾರೆ.

ಲಿಂಕ್ಡ್‌ಇನ್ ಪ್ರೊಫೈಲ್‌ ಕೇಳಿದ ಬೆಂಗಳೂರಿನ ಮನೆ ಮಾಲೀಕರು
ಬೆಂಗಳೂರಿನ ಮನೆ ಮಾಲೀಕರು ಬಾಡಿಗೆದಾರರ ಲಿಂಕ್ಡ್‌ಇನ್ ಪ್ರೊಫೈಲ್‌ನ್ನು ಕೇಳಿದ್ದಾರೆ. ಈ ವಾಟ್ಸಾಪ್ ಸಂದೇಶ ಎಲ್ಲೆಡೆ ವೈರಲ್ ಆಗಿದೆ
ಇತ್ತೀಚೆಗೆ, ಬಾಡಿಗೆಗೆ ಮನೆಯನ್ನು ಹುಡುಕುತ್ತಿರುವಾಗ ಮಾಲೀಕರು ಬಾಡಿಗೆದಾರರ (Tenant) ಲಿಂಕ್ಡ್‌ಇನ್ ಪ್ರೊಫೈಲ್‌ಗಾಗಿ ಕೇಳಿದ್ದಾರೆ ಎಂದು ಬಾಡಿಗೆದಾರನು ತನ್ನ ವಾಟ್ಸಾಪ್ ಚಾಟ್‌ಗಳ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ಮಾಲೀಕರ (Owner) ವಿಲಕ್ಷಣ ಬೇಡಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಡಿಗೆದಾರರು, 'ಇಂದಿರಾನಗರ @peakbengaluru ಮನೆ ಹುಡುಕಾಟದ 12ನೇ ದಿನ' ಎಂದು ಪೋಸ್ಟ್‌ ಬರೆದಿದ್ದಾರೆ.

ಅರೆ..ಹೀಗೂ ಮಾಡ್ತಾರಾ.ಬೆಂಗಳೂರಿನಲ್ಲಿ ಬಾಡಿಗೆ ಮನೆಗಾಗಿ ಕಿಡ್ನಿ ಮಾರಾಟಕ್ಕಿಟ್ಟ ವ್ಯಕ್ತಿ! 

ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಗೌತಮ್ ಎಂಬುವರು ಮನೆ ಹುಡುಕಲು ಹೊರಟಾಗ, ಮನೆ ಮಾಲೀಕರೊಬ್ಬರು ನಿಮ್ಮ ಲಿಂಕ್ಡ್ ಇನ್ ಪ್ರೊಫೈಲ್ ಕೊಡಿ ಹಾಗೂ ನಿಮ್ಮ ಬಗ್ಗೆ ಕಿರು ಪರಿಚಯವಿರುವ ಲೇಖನ ಕೊಡಿ ಎಂದು ಥೇಟ್ ಕೆಲಸ ಕೊಡುವ ಕಂಪನಿಯವರಂತೆ ಕೇಳಿದ್ದಾರೆ. ತಮ್ಮ ಈ ಅನುಭವವನ್ನು ಅವರು ಟ್ವೀಟ್ ಮಾಡಿದ್ದು, ಅದಕ್ಕೆ ಸ್ಪಂದಿಸಿರುವ ಅನೇಕರು, ಹೌದು ನಮಗೂ ಇಂಥದ್ದೇ ಅನುಭವ ಆಗಿದೆ ಎಂದು ಹೇಳಿದ್ದಾರೆ.

ಗೌತಮ್ ಎನ್ನುವರು ತಮ್ಮ ಲಿಂಕ್ಡ್​ಇನ್​ ಪ್ರೊಫೈಲ್ ಕೇಳಿದ ಬ್ರೋಕರ್‌ನೊಂದಿಗೆ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಾರ್ಚ್ 16 ರಂದು ಇಬ್ಬರು ಬ್ರೋಕರ್‌ಗಳೊಂದಿಗಿನ ಎರಡು ವಾಟ್ಸಾಪ್‌ ಚಾಟ್ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿದ್ದಾರೆ.​ ಇಂದಿರಾ ನಗರದಲ್ಲಿ ಎರಡು ಬೆಡ್​ರೂಮ್​ (Two BHK) ಮನೆ ಹುಡುಕುತ್ತಿದ್ದ ಗೌತಮ್ ಬ್ರೋಕರ್​ನೊಂದಿಗೆ ಚಾಟ್ ಮಾಡಿದ್ದಾರೆ. ಚಾಟ್​ನಲ್ಲಿ ಬ್ರೋಕರ್​ ಲಿಂಕ್ಡ್‌ಇನ್ ಪ್ರೊಫೈಲ್ ಲಿಂಕ್​ ಕಳುಹಿಸುವಂತೆ ಹೇಳಿದ್ದಾನೆ. ಅದರಂತೆ ಗೌತಮ್​ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್ ಶೇರ್ ಮಾಡಿದ್ದಾರೆ. ಅಲ್ಲದೇ ಮತ್ತೊಂದು ಮನೆ ಮಾಲೀಕರೊಬ್ಬರು ನಿಮ್ಮ ಬಗ್ಗೆ ಸ್ವಲ್ಪ ಬರೆದು ಕಳುಹಿಸಿ ಎಂದು ಗೌತಮ್​ಗೆ ಹೇಳಿದ್ದಾರೆ.

ಬದಲಾಗಿದೆ ಬೆಂಗಳೂರು, ಬಾಡಿಗೆ ಮನೆ ಪಡೆಯಲು ನಿಮ್ಮಲಿರಬೇಕು ಈ ಪದವಿ!

ಸ್ಟಾರ್ಟ್‌ಅಪ್ ಉದ್ಯೋಗಿಗಳಿಗೂ ಮನೆ ಸಿಗುವುದಿಲ್ಲ ಎಂದು ವ್ಯಕ್ತಿ ಟ್ವೀಟ್
ಈ ವಾಟ್ಸಾಪ್‌ ಚಾಟ್‌ನ್ನು ಗೌತಮ್​ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್​ ಆಗಿದೆ. ಇದಕ್ಕೆ 900 ಲೈಕ್ಸ್, 50 ರೀಟ್ವೀಟ್‌ ಆಗಿದ್ದು, 49 ಕಮೆಂಟ್​ಗಳು ಬಂದಿವೆ. ಹಲವು ಮಂದಿ ತಮಗೂ ಇಂಥಾ ಅನುಭವ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಗುರ್‌ಗಾಂವ್‌ನಲ್ಲೂ ಬಾಡಿಗೆದಾರರು ಪ್ರೊಫೈಲ್ ಕಳುಹಿಸಬೇಕು. ಒಳ್ಳೆ ಸಂಬಳ, ಉದ್ಯೋಗಿಯಲ್ಲದಿದ್ದರೆ ಮನೆ ಸಿಗುವುದಿಲ್ಲ. ಸ್ಟಾರ್ಟ್‌ಅಪ್ ಉದ್ಯೋಗಿಗಳಿಗೂ ಮನೆಗಳು ಸಿಗುವುದಿಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ವೈರಲ್ ಆಗ್ತಿರೋ ಮನೆ ಮಾಲೀಕರ ಡಿಮ್ಯಾಂಡ್‌ಗೆ ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿ 'ಬೆಂಗಳೂರಿನಲ್ಲಿ ಜೀವನ ಮಾಡಬೇಕೆಂದರೆ ಯಾವುದಾದರೂ ಕಂಪನಿಯಲ್ಲಿ ಉದ್ಯೋಗ ಮಾಡಬೇಕು. ಅದಕ್ಕಾಗಿ, ಕಂಪನಿಯ ಸಂದರ್ಶನಗಳಲ್ಲಿ ಪಾಸ್ ಆಗಬೇಕು. ಆನಂತರ ಮನೆ ಮಾಲೀಕರ ಇಂಟರ್ ವ್ಯೂಗಳಲ್ಲಿ ಪಾಸ್ ಆಗಬೇಕು' ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios