ಬದಲಾಗಿದೆ ಬೆಂಗಳೂರು, ಬಾಡಿಗೆ ಮನೆ ಪಡೆಯಲು ನಿಮ್ಮಲಿರಬೇಕು ಈ ಪದವಿ!
ಕೆಲಸ, ವಿದ್ಯಾಭ್ಯಾಸ, ವ್ಯಾಪಾರ ಸೇರಿದಂತೆ ಹಲವು ಕಾರಣಗಳಿಗೆ ಬೆಂಗಳೂರಿಗೆ ಆಗಮಿಸುವವರ ಸಂಖ್ಯೆ ಹೆಚ್ಚೇ ಇದೆ. ಬಂದವರು ಪಿಜಿ, ಬಾಡಿಗೆ ಮನೆ ಹುಡುಕಿ ಜೀವನ ಕಟ್ಟಿಕೊಳ್ಳುತ್ತಾರೆ. ಆದರೆ ಬೆಂಗಳೂರಲ್ಲಿ ಇದೀಗ ಬಾಡಿಗೆ ಮನೆ ಪಡೆಯುವುದು ಅಂದುಕೊಂಡಷ್ಟು ಸುಲಭವಲ್ಲ. ನೀವು ವೆಜ್ಜೋ, ನಾನ್ ವೆಜ್ಜೋ, ನಿಮ್ಮ ವಿಳಾಸ ಕೊಡಲಬೇಕು. ಇವು ಒಕೆಯಾದರೆ ಬಾಡಿಗೆ ಮನೆ ಸಿಗುತ್ತೆ ಅಂದುಕೊಂಡರೆ ತಪ್ಪು, ಮನೆ ಸಿಗಬೇಕಾದರೆ ನಿಮ್ಮಲ್ಲಿ ಈ ಪದವಿ ಇರಬೇಕು
ಬೆಂಗಳೂರು(ನ.27): ವಿಶ್ವದ ಅತೀ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ಇಲ್ಲಿ ಬಂದವರಿಗೆ ಒಂದು ಉದ್ಯೋಗ, ವಿದ್ಯಾರ್ಥಿಗಳಿಗೆ ಶಿಕ್ಷಣ, ವ್ಯಾಪಾರಿಗಳೆ ವಹಿವಾಟಿಗೆ ಬರವಿಲ್ಲ. ಹೀಗಾಗಿ ದೇಶ ಹಾಗೂ ವಿಶ್ವದ ಹಲವು ರಾಷ್ಟ್ರಗಳಿಂದ ಬೆಂಗಳೂರಿಗೆ ಆಗಮಿಸುವವರ ಸಂಖ್ಯೆ ಜಾಸ್ತಿ. ಹೀಗೆ ಬಂದವರು ಇಲ್ಲಿ ಮನೆ ಖರೀದಿಸುತ್ತಾರೆ, ಬಾಡಿಗೆ ಮನೆ ಪಡೆಯುತ್ತಾರೆ, ಇಲ್ಲಾ ಪಿಜಿ, ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ಬದುಕು ಕಟ್ಟಿಕೊಳ್ಳುತ್ತಾರೆ. ಕೊರೋನಾ ಬಳಿಕ ಬೇಕಾದಷ್ಟು ಮನೆಗಳು ಖಾಲಿ ಇದೆ. ಸುಲಭವಾಗಿ ಮನೆ ಬಾಡಿಗೆಗೆ ಸಿಗಲಿದೆ ಅಂದುಕೊಂಡರೆ ತಪ್ಪು. ಕಾರಣ ವಿಳಾಸ, ಕುಲ ಗೋತ್ರ, ವೆಜ್ ನಾನ್ ವೆಜ್ ಎಲ್ಲಾ ಮಾಹಿತಿಗಳು ಮನೆ ಮಾಲೀಕರಿಗೆ ಒಕೆಯಾದರೆ ಸಾಕಾಗಲ್ಲ, ನೀವು ಐಐಟಿ ಅಥವಾ ಐಐಎಂ ಪದವೀಧರರಾಗಿರಬೇಕು.
ಮನೆ ಬಾಡಿಗೆ ಪಡೆಯಲು ಹಾಗೂ ಐಐಟಿ ಅಥವಾ ಐಐಎಂ ಪಧವಿಗೂ ಏನು ಸಂಬಂಧ ಅಂತೀರಾ? ಸಂಬಂಧ ಇದೆ. ಇದೀಗ ಬೆಂಗಳೂರಿನ ಮನೆ ಮಾಲೀಕರು ನಿಮ್ಮ ಪದವಿ ನೋಡಿ ಬಾಡಿಗೆ ಮನೆ ನೀಡುತ್ತಿದ್ದಾರೆ. ಹೌದು, ಪ್ರಿಯಾಂಶ್ ಜೈನ್ ಅನ್ನೋ ವ್ಯಕ್ತಿ ಬೆಂಗಳೂರಿನ ಇಂದಿರಾನಗರ, ಹೆಚ್ಎಎಲ್, ದೊಮ್ಮಲೂರು ಭಾಗದಲ್ಲಿ ಬಾಡಿಗೆ ಮನೆ ನೋಡುತ್ತಿದ್ದಾರೆ. ಇದಕ್ಕಾಗಿ ಎಜೆಂಟ್‌ಗಳನ್ನು ಸಂಪರ್ಕಿಸಿದ್ದಾರೆ.
ವಿರಾಟ್-ಅನುಷ್ಕಾ ಹೊಸ ಮನೆಯ ಬಾಡಿಗೆ ಎಷ್ಟು ಗೊತ್ತಾ?
ಸಾಮಾನ್ಯವಾಗಿ ಮನೆ ಬಾಡಿಗೆಗೆ ಬೇಕು ಎಂದಾಗ ಕೇಳುವ ಮೊದಲ ಪ್ರಶ್ನೆ ಬ್ಯಾಚಲರ್? ಅಥಾವ ಫ್ಯಾಮಿಲಿ. ಈ ಪರೀಕ್ಷೆಯಲ್ಲಿ ಪಾಸ್ ಆದರೆ ಮರು ಪ್ರಶ್ನೆ ವೆಜ್ ಅಥವಾ ನಾನ್ ವೆಜ್? ಈ ಪರೀಕ್ಷೆಯಲ್ಲಿ ಪಾಸ್ ಆದರೆ, ಬಳಿಕ ವಿಳಾಳ, ಮನೆ ಬಾಡಿಗೆ, ಅಡ್ವಾನ್ಸ್ ವಿಚಾರಗಳು ಚರ್ಚೆಯಾಗುತ್ತದೆ. ಆದರೆ ಪ್ರಿಯಾಂಶ್ ಜೈನ್‌ಗೆ ಅಚ್ಚರಿಯಾಗಿದೆ. ಕಾರಣ ಈ ಪ್ರಶ್ನೆಗಳ ಬದಲು ಮನೆ ಬಾಡಿಗೆ ನೀಡುವ ಎಜೆಂಟ್ ಲಿಂಕ್ಡ್‌ಇನ್ ಫ್ರೊಫೈಲ್ ಕೇಳಿದ್ದಾರೆ. ಇಷ್ಟೇ ಅಲ್ಲ ಎನು ಮಾಡುತ್ತೀದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಪ್ರಿಯಾಂಶ್ ಜೈನ್ ತಾನು ಅಲಾಲ್ಶಿಯನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಶುದ್ಧ ಸಸ್ಯಾಹಾರಿ ಎಂದಿದ್ದಾರೆ. ಯಾವ ಕಾಲೇಜಿನಲ್ಲಿ ಓದಿದ್ದೀರಿ ಎಂದು ಮರು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಪ್ರಿಯಾಂಶ್ ಜೈನ್ ತಾವು ವಿಐಟಿ ವೆಲ್ಲೋರ್ ಎಂದು ಉತ್ತರಿಸಿದ್ದಾರೆ.
ಮರು ಕ್ಷಣವೇ ಎಜೆಂಟ್ ನಿಮ್ಮ ಫ್ರೋಫೈಲ್ ಸರಿ ಹೊಂದುತ್ತಿಲ್ಲ ಎಂದು ಮನೆ ಬಾಡಿಗೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಅಚ್ಚರಿಗೊಂಡ ಪ್ರಿಯಾಂಶ್ ಜೈನ್ ಕಾರಣ ಕೇಳಿದ್ದಾರೆ. ಯಾವ ಕಾರಣಕ್ಕೆ ತರಿಸ್ಕರಿಸಿದ್ದೀರಿ? ಮನೆ ಮಾಲೀಕರು ಏನು ಬಯಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಎಜೆಂಟ್ ನೀವು IIT, IIM, CA ISB ಪದವೀದರರಾಗಿರಬೇಕು ಎಂದು ಚಾಟ್ ಅಂತ್ಯಗೊಳಿಸಿದ್ದಾರೆ.
ಮನೆ ಬಾಡಿಗೆ ಪಾವತಿಗೆ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದ್ರೆ ಜೇಬಿಗೆ ಬೀಳುತ್ತೆ ಹೆಚ್ಚುವರಿ ಹೊರೆ
ಈ ಕುರಿತು ಸ್ವತಃ ಪ್ರಿಯಾಂಶ್ ಜೈನ್ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ದೊಮ್ಮಲೂರು, ಇಂದಿರಾನಗರ, ಹೆಚ್ಎಎಲ್ ಭಾಗದಲ್ಲಿ ಮನೆ ಇದ್ದರೆ ತಿಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು ಐಟಿ ಬಿಟಿ ಸಿಟಿ. ಹಾಗಂತ ಇಲ್ಲಿರುವ ಎಲ್ಲರೂ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿಲ್ಲ. ಇನ್ನು ಇಲ್ಲಿರುವ ಎಲ್ಲರು ಐಐಟಿ, ಐಐಎಂನಲ್ಲಿ ಓದುತ್ತಿಲ್ಲ ಎಂದು ಕೆಲವರು ಪ್ರತಿಕ್ರಿಯೆಸಿದ್ದಾರೆ.