ಅರೆ..ಹೀಗೂ ಮಾಡ್ತಾರಾ.ಬೆಂಗಳೂರಿನಲ್ಲಿ ಬಾಡಿಗೆ ಮನೆಗಾಗಿ ಕಿಡ್ನಿ ಮಾರಾಟಕ್ಕಿಟ್ಟ ವ್ಯಕ್ತಿ!
ಬೆಂಗಳೂರಲ್ಲಿ ಮನೆ ಹುಡುಕೋದು ಸುಲಭದ ಕೆಲಸವಲ್ಲ. ಅದರಲ್ಲೂ ಬ್ಯಾಚುಲರ್ಸ್‌ಗೆ ಮನೆ ಹುಡುಕೋದು ಅಂದ್ರೆ ಜೀವಾನೇ ಬಾಯಿಗೆ ಬರುತ್ತೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಸಿಲಿಕಾನ್ ಸಿಟಿಯಲ್ಲಿ ಮನೆ ಗಿಟ್ಟಿಸೋಕೆ ಹೊಸ ಟ್ರಿಕ್ ಯೂಸ್ ಮಾಡಿದ್ದಾರೆ. ಅದೇನು ?
ಬೆಂಗಳೂರು: ಬೆಂಗಳೂರಲ್ಲಿ ಸ್ವಂತ ಮನೆ ಇರುವವರಿಗಿಂತ ಬಾಡಿಗೆ ಮನೆಗಳಲ್ಲಿ ಇರುವವರ ಸಂಖ್ಯೆಯೇ ಅಧಿಕವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯದ ಜನ ಕೆಲಸ ಅರಸಿ ಇಲ್ಲಿಗೆ ಬರುವುದರಿಂದ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಆದರೆ ಮನೆಯನ್ನು ಹುಡುಕೋದು ಮಾತ್ರ ಕಷ್ಟ. ಮಾತ್ರವಲ್ಲ, ಇಂದಿನ ದಿನಗಳಲ್ಲಿ ಎಲ್ಲವೂ ದುಬಾರಿಯಾಗಿದೆ. ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳು, ವಸ್ತ್ರ, ತೈಲ ಬೆಲೆ, ಇಂಧನ ಬೆಲೆ ಎಲ್ಲದರ ಬೆಲೆ ಗಗನಕ್ಕೇರುತ್ತಿದೆ. ಹೀಗಿರುವಾಗ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಮಧ್ಯಮ ವರ್ಗದವರು, ಬಡವರು ಕಡಿಮೆ ಬೆಲೆಗೆ ಬಾಡಿಗೆ ಮನೆ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಕೊವಿಡ್ ನಂತರ ಮನೆ ಮಾಲೀಕರು ಬಾಡಿಗೆ ದರ, ಅಡ್ವಾನ್ಸ್ ಅನ್ನು ದುಪ್ಪಟ್ಟು ಮಾಡಿದ್ದಾರೆ. ಇದನ್ನು ಟೀಕಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಿಡ್ನಿ ಮಾರಾಟಕ್ಕಿದೆ ಎಂದು ಪೋಸ್ಟರ್ ಹಾಕಿರುವ ವ್ಯಕ್ತಿ
ವ್ಯಕ್ತಿಯೊಬ್ಬ 'ನನ್ನ ಕಿಡ್ನಿ ಮಾರಾಟಕ್ಕಿದೆ, ಆ ಹಣದಿಂದ ನಾನು ಮನೆ ಅಡ್ವಾನ್ಸ್ ಪೇ ಮಾಡುತ್ತೇನೆ' ಎಂದು ಬರೆದು ಪೋಸ್ಟರ್ ಅಂಟಿಸಿದ್ದಾನೆ. ಈ ಪೋಸ್ಟ್ನಿಂದ ಬೆಂಗಳೂರಿನಲ್ಲಿ ಮನೆ ಬಾಡಿಗೆ (Rent home) ಹುಡುಕುವವರ ಗೋಳಾಟ ಹೇಗಿರುತ್ತದೆ ಎಂಬ ವಿಚಾರ ವೈರಲ್ ಆಗಿದೆ.ಬೆಂಗಳೂರಿನಂತಹ ಬೃಹತ್ ಸ್ಮಾರ್ಟ್ ಸಿಟಿಗಳಲ್ಲಿ ವಾಸ ಮಾಡ್ಬೇಕಂದ್ರೆ ಕೈತುಂಬಾ ಹಣವಿರಬೇಕು. ಕಡಿಮೆ ವೇತನ (Salary) ಪಡೆಯುವವರ ಕಷ್ಟ ಕೇಳೋದೇ ಬೇಡ. ಮನೆ ಬಾಡಿಗೆ ಕಟ್ಟುವಷ್ಟರಲ್ಲೇ ಬಹುಪಾಲು ಸಂಬಳ ಮುಗಿದುಹೋಗುತ್ತದೆ. ಇದೇ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ (Social media) ಚರ್ಚೆಯ ವಿಷಯವಾಗಿದೆ. ಅದಕ್ಕೆ ಮುಖ್ಯವಾಗಿ ಕಾರಣವಾಗಿದ್ದು ವೈರಲ್ ಆದ ಈ ಪೋಸ್ಟರ್ ಮತ್ತು ಟ್ವೀಟ್.
ಹುಡುಗಿ ಸಿಗದಿದ್ರು ಓಕೆ ಮನೆ ಬೇಕು: ಬಾಡಿಗೆ ಮನೆ ಹುಡುಕಲು ಡೇಟಿಂಗ್ ಆಪ್ ಮೊರೆ ಹೋದ ಯುವಕ
ಮನೆಯ ಡೆಪಾಸಿಟ್‌ಗಾಗಿ ಎಡ ಕಿಡ್ನಿಯನ್ನು ಮಾರಾಟ ಮಾಡುತ್ತೇನೆ ಎಂದ ವ್ಯಕ್ತಿ
ರಮ್ಯಖ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗೆ ಹಣ ಠೇವಣಿ ಇಡಲು ವ್ಯಕ್ತಿಯು ತಮ್ಮ ಎಡ ಕಿಡ್ನಿ ಮಾರಾಟ (Kidney for sale) ಮಾಡುವುದಾಗಿ ಪೋಸ್ಟರ್ ನಲ್ಲಿ ತಿಳಿಸಿದ್ದಾರೆ. ಇದು ತಮಾಷೆಯೆನಿಸಿರೂ ಹೆಚ್ಚು ಹಣ ಪೀಕುವ ಮನೆ ಮಾಲೀಕರನ್ನು ವ್ಯಂಗ್ಯ ಮಾಡಲಾಗಿದೆ. ಬಾಡಿಗೆ ಮನೆಗಾಗಿ ಡೆಪಾಸಿಟ್ ಹಣ ಪಡೆಯಲು ತನ್ನ ಎಡ ಕಿಡ್ನಿಯನ್ನು ಮಾರಾಟ ಮಾಡುವುದಾಗಿ ವ್ಯಕ್ತಿ ಪೋಸ್ಟರ್ ಅಂಟಿಸಿದ್ದಾರೆ.
ಈ ಪೋಸ್ಟರ್ ಹಾಕಿರುವ ವ್ಯಕ್ತಿ ಬೆಂಗಳೂರಿನ ಇಂದಿರಾ ನಗರ ಸುತ್ತಮುತ್ತ ಮನೆ ಹುಡುಕುತ್ತಿರುವುದಾಗಿ ಹೇಳಿದ್ದಾರೆ. ನನಗೆ ಮನೆ ಮಾಲೀಕರು ಕೇಳುತ್ತಿರುವಷ್ಟು ಹಣ ಕೊಡಲು ಸಾಧ್ಯವಾಗುತ್ತಿಲ್ಲವಾದ ಕಾರಣ ಈ ರೀತಿ ಪೋಸ್ಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಬಾಡಿಗೆ ಮನೆಯ ಡೆಪಾಸಿಟ್ ಕಟ್ಟಲು ಹಣ ಬೇಕು ಎಂದು ಬರೆದಿದ್ದಾನೆ. ಅಲ್ಲದೇ ಆ ಪೋಸ್ಟರ್ ನಲ್ಲಿ ಕ್ಯೂಆರ್ ಕೋಡ್ ಸಹ ಇಡಲಾಗಿದೆ. ಈ ಪೋಸ್ಟರ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಮತ್ತು ಡೆಪಾಸಿಟ್ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ಗಂಡ ಬಾಡಿಗೆಗಿದ್ದಾನೆ ಎಂದು ಜಾಹೀರಾತು ನೀಡಿದ ಹೆಂಡ್ತಿ!
ಟ್ವೀಟ್ ಕೊನೆಯಲ್ಲಿ 'ನಾನ್ ತಮಾಷೆ ಮಾಡಿದೆ, ಯಾರಿಗಾದ್ರೂ ಮನೆ ಗೊತ್ತಿದ್ರೆ ತಿಳಿಸಿ' ಎಂದು ಬರೆದು ಈ ವ್ಯಕ್ತಿ ಚಮಕ್ ನೀಡಿದ್ದಾನೆ. ಒಟ್ಟಾರೆ ಬೆಂಗಳೂರಲ್ಲಿ ಮನೆ ಬಾಡಿಗೆಗೆ ಹುಡುಕುವವರ ಗೋಳಾಟ ಈ ವೈರಲ್ ಫೋಟೋದಿಂದ ಇನ್ನಷ್ಟು ಚರ್ಚೆಗೆ ಕಾರಣವಾಗ್ತಿದೆ.