ವಿಶ್ವದ 8 ಬೆತ್ತಲೆ ಬೀಚ್‌ಗಳು: ಇಲ್ಲಿ ನಗು ಬಿಟ್ಟು ಬೇರೆನೂ ತೊಡಂಗಿಲ್ಲ!
ವಿಶ್ವದಲ್ಲಿ ಬೆತ್ತಲೆಯಾಗಿಯೇ ವಿಸಿಟ್ ಮಾಡಬೇಕಾದ ಬೀಚ್‌ಗಳಿವೆ ಎಂದರೆ ನಂಬುತ್ತೀರಾ? ಹೌದು ಇದು ಕೊಂಚ ಕಷ್ಟವಾದರೂ ನಂಬಲೇಬೇಕಾದ ವಿಚಾರ. ಇಲ್ಲಿ ನೀವು ನಗುವೊಂದನ್ನು ಬಿಟ್ಟು ಬೇರೇನನ್ನೂ ಧರಿಸುವಂತಿಲ್ಲ. ಇಂತಹ 8 ಬೀಚ್‌ಗಳ ವಿವರ ಇಲ್ಲಿದೆ.
ಬೀಚ್ ಅಂದ್ರೆ ಯಾರಿಗಿಷ್ಟ ಹೇಳಿ? ಸಮುದ್ರದ ಬದಿಯಲ್ಲಿ ಕುಳಿತಾಗ ಸಿಗುವ ಆ ನೆಮ್ಮದಿಯೇ ಬೇರೆ, ಮನಸ್ಸಿಗೆ ಅದೇನೋ ಖುಷಿ. ಒಂದೆಡೆ ಅಲೆಗಳ ಅಬ್ಬರವಾದರೆ, ಮತ್ತೊಂದೆಡೆ ಬೀಸುವ ಗಾಳಿ ಇವೆಲ್ಲವೂ ಮನಸ್ಸಿಗೆ ಮುದ ನೀಡುತ್ತದೆ. ಇದಕ್ಕಾಗೇ ಹಲವಾರು ಮಂದಿ ಬೀಚ್ ಪಿಕ್ನಿಕ್ ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಇಷ್ಟೇ ಅಲ್ಲದೇ, ಸೂರ್ಯನ ಕಿರಣಗಳಿಂದ ಸಿಗುವ ವಿಟಮಿನ್ ಥೆರಪಿಗಾಗಿಯೂ ಬೀಚ್ ಬದಿಯ ಚಿಕಿತ್ಸಾ ಕೇಂದ್ರಕ್ಕೆ ಬಹುತೇಕ ಮಂದಿ ಭೇಟಿ ನೀಡುತ್ತಾರೆ ಆದರೆ ನಿಮಗೆ ಗೊತ್ತಾ ಜಗತ್ತಿನಲ್ಲಿ ನೀವು ಬಟ್ಟೆ ಧರಿಸದೆಯೇ ವಿಸಿಟ್ ಮಾಡಬಹುದಾದ ಕೆಲವು ಬೀಚ್‌ಗಳಿವೆ. ಬಟ್ಟೆ ಧರಿಸದೆಯೇ? ಇದು ಹೇಗಾಗುತ್ತೆ? ಅಂದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ನೀವು ಬಟ್ಟೆ ಧರಿಸದೆಯೇ ವಿಸಿಟ್ ಮಾಡಬೇಕಾದ 8 ಬೀಚ್‌ಗಳ ವಿವರ. ಇಲ್ಲಿ ನೀವಿಲ್ಲಿ 'ನಗು'ವೊಂದನ್ನು ಬಿಟ್ಟು ಬೇರೇನನ್ನೂ ಧರಿಸುವಂತಿಲ್ಲ.
1. ಕ್ಯಾಪ್ ಡ್ಯಾಗ್ಡೆ(Cap d’Agde), ಫ್ರಾನ್ಸ್:
ಫ್ರಾನ್ಸ್‌ನಲ್ಲಿರುವ ಕ್ಯಾಪ್ ಡ್ಯಾಗ್ಡೆ ಕೇವಲ ನೇಚರಿಸ್ಟ್ ಬೀಚ್ ಅಲ್ಲ, ಬದಲಾಗಿ ಇದೊಂದು ಸಿಟಿಯಾಗಿದೆ. ಇಲ್ಲಿ ನೀವು ಶಾಪಿಂಗ್ ಮಾಡಬೇಕಾದರೆ ಬೆತ್ತಲಾಗಿಯೇ ಹೋಗಬೇಕು. ಡಿನ್ನರ್ ಮಾಡಲೂ ಬಟ್ಟೆಗಳನ್ನು ಧರಿಸದೆ ಹೋಗಬೇಕು. ಬಹುಶಃ ಇದು ಇಡೀ ವಿಶ್ವದಲ್ಲಿರುವ ಏಕೈಕ ನ್ಯೂಟ್ರಿಸ್ಟ್ ಸಿಟಿ. ನೀವಿಲ್ಲಿ ಹೋಗಬೇಕಾದರೆ ಎಲ್ಲಾ ಸಂಕೋಚ, ನಾಚಿಕೆಯನ್ನು ಬದಿಗಿಟ್ಟು ಹೋಗಬೇಕಾಗುತ್ತದೆ.
2.ಹೆಡೋನಿಸಂ II(Hedonism II), ಜಮೈಕಾ:
ಹೆಡೋನಿಸಂ II, ಇದು ಪ್ರಾಥಮಿಕವಾಗಿ ಇದೊಂದು ಜಮೈಕಾದ ನೆಗ್ರಿಲ್‌ನಲ್ಲಿರುವ ನಗ್ನ ರೆಸಾರ್ಟ್ ಆಗಿದೆ. ಇಲ್ಲಿರುವ ಕೆರೆಬಿಯನ್ ಸಮುದ್ರದ ಸೌಂದರ್ಯವನ್ನು ಆಹ್ವಾದಿಸಬೇಕಾದರೆ ನೀವು ಬಟ್ಟೆಗಳನ್ನು ಧರಿಸದೆಯೇ ಎಂಟ್ರಿ ಕೊಡಬೇಕಾಗುತ್ತದೆ. ಇಷ್ಟೇ ಅಲ್ಲದೇ ಈ ರೆಸಾರ್ಟ್ ತನ್ನ ಗ್ರಾಹಕರ ಮನರಂಜನೆಗಾಗಿ ಹಲವಾರು ಚಟುವಟಿಕೆಗಳನ್ನೂ ಆಯೋಜಿಸುತ್ತದೆ. ಆದರೆ ಬೆತ್ತಲಾಗಿರರಲು ನೀವು ಮಾನಸಿಕವಾಗಿ ಸಿದ್ಧರಾಗಿದ್ದೀರೆಂದಾರೆ ಮಾತ್ರ ಒಳ ಪ್ರವೇಶಿಸಲು ಇಲ್ಲಿ ಅವಕಾಶ ನೀಡಲಾಗುತ್ತದೆ.
3. ಪ್ಯಾರಡೈಸ್ ಬೀಚ್(Paradise Beach), ಗ್ರೀಸ್:
ಸನ್ ಬಾಥಿಂಗ್ ಅಥವಾ ವಿಟಮಿನ್ ಥೆರಪಿಗಾಗಿ ಬಟ್ಟೆ ತೆಗೆದಿರಿಸುವುದು ಅಥವಾ ಬೆಳದಿಂಗಳ ರಾತ್ರಿ ಹೆಜ್ಜೆ ಹಾಕುವುದು ಬೇರೆ ವಿಚಾರ. ಆದರೆ ಪ್ಯಾರಡೈಸ್ ಬೀಚ್‌ನಲ್ಲಿ ನೀವು ಹೀಗೇ ಮಾಡಬೇಕಾಗುತ್ತದೆ. ತನ್ನ ಹೆಸರಿಗೆ ತಕ್ಕಂತೆ ಇಲ್ಲಿಗೆ ಪ್ರವೇಶಿಸಲು ಬಟ್ಟೆ ಧರಿಸದೇ ಹೋಗಬೇಕಾಗುತ್ತದೆ. ಆದರೆ ಇಲ್ಲಿ ಯಾವ ಯಾವ ಪ್ರದೇಶದಲ್ಲಿ ಬಟ್ಟೆಗಳನ್ನು ಧರಿಸಬೇಕು ಹಾಗೂ ಧರಿಸಬಾರದು ಎಂದು ಸೂಚಿಸುವ ಬೋರ್ಡ್ ಗಳ ಮೇಲೆ ಗಮನವಿಟ್ಟುಕೊಳ್ಳುವುದು ಅತಿ ಅಗತ್ಯ.
ಇಲ್ಲಿ ಗಂಡಾಗಿ ಹುಟ್ಟಿ ಹೆಣ್ಣಾಗಿ ಬೆಳೆಯುತ್ತಾರೆ
4. ಸಮುರಾಯಿ ಬೀಚ್(Samurai Beach), ಆಸ್ಟ್ರೇಲಿಯಾ:
ಹೌದು ಆಸ್ಟ್ರೇಲಿಯಾದ ಸಮುರಾಯಿ ಬೀಚ್‌ನಲ್ಲೂ ಬಟ್ಟೆ ಧರಿಸುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಇದು ಕುಟುಂಬದ ಸದಸ್ಯರೊಂದಿಗೆ ಭೇಟಿ ನೀಡಲು ಸೂಕ್ತವಲ್ಲದ ಬೀಚ್ ಆಗಿದೆ. ಆದರೆ ನ್ಯಾಚುರಿಸಂ ಥೆರಪಿಯನ್ನು ಮಾಡಿಕೊಳ್ಳಲು ಇಚ್ಛಿಸುವವರಿಗೆ ಇದು ಹೇಳಿ ಮಾಡಿಸಿದಂತ ಸ್ಥಳವಾಗಿದೆ. ಏಕಾಂತದಿಂದ ಕೂಡಿರುವ ಈ ಬೀಚ್‌ನ ಅಲೆಗಳು ಮನಸ್ಸಿಗೆ ಮುದ ನೀಡಿದರೆ, ಇಲ್ಲಿನ ಮರಳು ನಯವಾಗಿದೆ.
ಸಾಯೋದ್ರಲ್ಲಿ ನೋಡಲೇಬೇಕಾದ ತಾಣಗಳಿವು...
5. ಪ್ರೈಯಾ ದೊ ಪೀನ್ಹೊ(Praia do Pinho), ಬ್ರೆಜಿಲ್:
ಪ್ರೈಯಾ ದೊ ಪೀನ್ಹೊ ಬಟ್ಟೆ ಧರಿಸದೇ ಹೋಗಲು ಅತ್ಯಂತ ಸೂಕ್ತ ಕಡಲ ತೀರವಾಗಿದೆ. ಗ್ರಾಹಕರ ಮಾಹಿತಿಯ ಗೌಪ್ಯತೆ ಕಾಪಾಡಿಕೊಳ್ಳುವ ಹಾಗೂ ನೈತಿಕ ಮಾನದಂಡಗಳಿರುವ ಬೀಚ್‌ಗಳಲ್ಲಿ ಇದು ಒಂದಾಗಿದೆ. ಬಟ್ಟೆ ತೆಗೆದಿರಿಸಲು ಇಷ್ಟವಿಲ್ಲದವರಿಗೆಂದೇ ಇಲ್ಲಿ ಕೆಲ ಕ್ಯಾಂಪ್ ಸೈಟ್‌ಗಳನ್ನು ನಿರ್ಮಿಸಲಾಗಿದ್ದು, ಇದು ನಿಮಗೆ ರಿಟ್ಫ್ ನೀಡಲಿದೆ. ಹೀಗಾಗಿ ಮೊದಲ ಬಾರಿಗೆ ಬಟ್ಟೆ ಧರಿಸದೆ ಬೀಚ್ ಗೆ ಭೇಟಿ ನೀಡುವ ವ್ಯಕ್ತಿ ನೀವಾದರೆ, ಇಲ್ಲಿಗೆ ತೆರಳುವುದು ಅತಿ ಸೂಕ್ತ.
6. ಹ್ಯಾನ್ಲನ್ಸ್ ಪಾಯಿಂಟ್(Hanlan’s Point), ಕೆನಡಾ:
ಹ್ಯಾನ್ಲನ್ಸ್ ಪಾಯಿಂಟ್ ಬೀಚ್ ನಲ್ಲಿ ನಿಮಗೆ ಆಯ್ಕೆಗಳಿದ್ದು, ಇಲ್ಲಿ ಬಟ್ಟೆಗಳನ್ನು ಧರಿಸಲಿಚ್ಛಿಸುವವರಿಗೂ ಸ್ವಾತಂತ್ರ್ಯವಿದೆ. ಕೆನಡಾದ ಅತ್ಯಂತ ಪ್ರಸಿದ್ಧ ಕಡಲ ತೀರವಾದ ಇದು ಸಲಿಂಗಿಗಳಿಗೆ ಅತ್ಯಂತ ಪ್ರಿಯವಾದ ಸ್ಥಳವಾಗಿದೆ ಹಾಗೂ ಸನ್ ಬಾಂಥಿಂಗ್ ಮಾಡಲೂ ಸೂಕ್ತ ಸ್ಥಳವಾಗಿದೆ. ಇಲ್ಲಿ ನೀವು ಬಿಕಿನಿ ಧರಿಸಲಿಚ್ಛಿಸುತ್ತೀರೋ ಅಥವಾ ಬರ್ತ್ ಡೇ ಸೂಟ್ ಧರಿಸುತ್ತೀರೋ ಎಂದು ನಿರ್ಧರಿಸುವ ಸ್ವಾತಂತ್ರ್ಯ ನಿಮಗಿದೆ.
7. ಇಲಿಯಾ ಬೀಚ್(Elia Beach), ಗ್ರೀಸ್:
ಗ್ರೀಸ್ ನ ಇತರ ಸಮುದ್ರಗಳಿಗೆ ಹೋಲಿಸಿದರೆ ಇಲಿಯಾ ಬೀಚ್ ಜನಸಂದಣಿ ಕಡಿಮೆ ಇರುವ ಕಡಲ ತೀರವಾಗಿದೆ. ಇಲ್ಲಿ ಬಟ್ಟೆ ಧರಿಸಬೇಕೋ/ ಧರಿಸಬಾರದೋ ಎಂದು ನಿರ್ಧರಿಸುವ ಸ್ವಾತಂತ್ರ್ಯವೂ ನಿಮಗಿದೆ. ಇಲ್ಲಿ ಕುಟುಂಬ ಸದಸ್ಯರೊಂದಿಗೂ ನೀವು ವಿಸಿಟ್ ಮಾಡಬಹುದಾಗಿದೆ.
8. ಗನ್ನಿಸನ್ ಬೀಚ್(Gunnison Beach), ಅಮೆರಿಕಾ:
ಗನ್ನಿಸನ್ ಬೀಚ್ ನ್ಯೂ ಜರ್ಸಿಯಲ್ಲಿರುವ ಏಕೈಕ 'ನ್ಯೂಡ್ ಬೀಚ್' ಆಗಿದೆ. ಇನ್ನು ಇಲ್ಲಿಗೆ ಬೇಟಿ ನೀಡುವವರಿಗೆ ಬಟ್ಟೆ ಧರಿಸಬೇಕೋ/ ಧರಿಸಬಾರದೋ ಎಂದು ನಿರ್ಧರಿಸುವ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಇದು ನ್ಯೂಟ್ರಿಸ್ಟ್ ಹಾಗೂ ಸನ್ ಬಾಥಿಂಗ್ ಗಾಗಿ ಬಹಳಷ್ಟು ಪ್ರಸಿದ್ಧಿ ಪಡೆದಿದೆ.
ದೇವಿಯ ಯೋನಿಗಿಲ್ಲ ನಡೆಯುತ್ತೆ ವಿಶೇಷ ಪೂಜೆ
ಹಾಟ್ ಬಲೂನ್ ರೈಡ್‌ಗಿದು ಬೆಸ್ಟ್ ಪ್ಲೇಸ್
ಭಾರತದಲ್ಲಿ ನೋಡಲೇಬಾಕದ ವಿಚಿತ್ರ ತಾಣಗಳಿವು..