ಹಾಟ್ ಏರ್ ಬಲೂನ್ ರೈಡ್‌ಗೆ ಬೆಸ್ಟ್ ತಾಣಗಳಿವು...

ದಿನದಿಂದ ದಿನಕ್ಕೆ ಜನರಲ್ಲಿ ಟೂರಿಗೆ ಹೋಗುವ ಆಸಕ್ತಿ ಹೆಚ್ಚುತ್ತಿವೆ. ವಿವಿಧ ಸಾಹಸ ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳುವ ಹುಚ್ಚು ಹೆಚ್ಚುತ್ತಿದೆ. ಇಂಥ ವಿಶೇಷ ಆಸಕ್ತಿ ಇರೋರಿಗೆ ಇವು ಹೇಳಿ ಮಾಡಿಸಿದ ಜಾಗಗಳು...

Best 6 places for hot balloon ride

ಹಾಟ್ ಏರ್ ಬಲೂನ್ ರೈಡ್ ವಿದೇಶದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇತ್ತೀಚಿಗೆ ಭಾರತದಲ್ಲಿಯೂ ಖ್ಯಾತವಾಗುತ್ತಿದೆ. ಈ ಸಾಹಸಮಯ ರೈಡ್ ಅನ್ನು ಎಂಜಾಯ್ ಮಾಡುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ನಿಮಗೂ  ಹಾಟ್ ಏರ್ ಬಲೂನ್ ರೈಡ್ ಮಾಡಿ, ರಮಣೀಯ ಭೂ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಇರಾದೆ ಇದ್ದರೆ, ಈ ತಾಣಗಳು ಬೆಸ್ಟ್....

ಮಹಾರಾಷ್ಟ್ರದ ಲೋನಾವಾಲಾ: ಇಲ್ಲಿ ರೈಡಿಂಗ್ ಜೊತೆಗೆ ಸುಂದರವಾದ ಹಸಿರು ತುಂಬಿದ ಬೆಟ್ಟ, ಗುಡ್ಡಗಳು, ನದಿ ಜಲಪಾತವಲ್ಲದೇ, ಹಲವಾರು ಸುಂದರ ದೃಶ್ಯಗಳೂ ಕಾಣ ಸಿಗುತ್ತವೆ. 
ಎತ್ತರ : 4000 ಅಡಿ , ಸಮಯ : 60 ನಿಮಿಷ, ದರ : 6000-12000 ರೂಪಾಯಿ/ವ್ಯಕ್ತಿಗೆ. 

ಕರ್ನಾಟಕದ ಹಂಪಿ: ಈ ರೈಡಿಂಗ್ ಎಂಜಾಯ್ ಮಾಡಲು ಮತ್ತೊಂದು ಉತ್ತಮ ತಾಣ ಹಂಪಿ. ಇಲ್ಲಿ ನೀವು ಹಂಪಿಯ ಸುಂದರವಾದ ದೃಶ್ಯ, ಗುಹೆಗಳು, ಮಂದಿರವನ್ನು ನೋಡುತ್ತಾ ಎಂಜಾಯ್ ಮಾಡಬಹುದು. 
ಎತ್ತರ : 5000 ಅಡಿ , ಸಮಯ : 60 ನಿಮಿಷ, ದರ : 8000-12000 ರೂಪಾಯಿ/ವ್ಯಕ್ತಿಗೆ 

ಹರಿಯಾಣದ ದಮ್ ದಮ ಲೇಕ್: ಇದು ಪಿಕ್‌ನಿಕ್ ಸ್ಪಾಟ್ ಆಗಿದ್ದು, ಅಲ್ಲಿ ನೀವು ಏರ್ ಬಲೂನ್ ರೈಡ್ ಮಾಡಬಹುದು. 
ಎತ್ತರ : 5000 ಅಡಿ , ಸಮಯ : 60 ನಿಮಿಷ, ದರ : 9000-13000 ರೂಪಾಯಿ ವ್ಯಕ್ತಿಗೆ. 

ರಾಜಸ್ಥಾನ: ಇದು ಕೋಟೆ ಹಾಗೂ ಮರುಭೂಮಿಗಾಗಿ ಮಾತ್ರವಲ್ಲ. ಬದಲಾಗಿ ಹಾಟ್ ಏರ್ ಬಲೂನ್ ರೈಡಿಗೂ ಪರ್ಫೆಕ್ಟ್ ತಾಣ. 
ಎತ್ತರ : 4000 ಅಡಿ , ಸಮಯ : 60 ನಿಮಿಷ, ದರ : 6000-12000 ರೂಪಾಯಿ/ವ್ಯಕ್ತಿಗೆ.  

ಉತ್ತರ ಪ್ರದೇಶ: ಕಡಿಮೆ ಖರ್ಚಿನಲ್ಲಿ ಈ ರೈಡ್ ಮಾಡಬೇಕೆಂದರೆ ಉತ್ತರ ಪ್ರದೇಶಕ್ಕೆ ತೆರಳಿ. ಇಲ್ಲಿ ತಾಜ್ ಮಹಲನ್ನು ಸಂಗಾತಿ ಜತೆಯಾಗಿ ಹಾರಾಡುತ್ತ ನೋಡಬಹುದು. ಸಂಗಾತಿಗೆ ಸರ್ಪ್ರೈಸ್ ಕೊಡುವ ಪ್ಲಾನ್ ಇದ್ದರೆ ಇಲ್ಲಿಗೆ ತೆರಳಿ. 
ಎತ್ತರ : 500 ಅಡಿ , ಸಮಯ : 15-20 ನಿಮಿಷ, ದರ :500-750 ರೂಪಾಯಿ ವ್ಯಕ್ತಿಗೆ. 

ಗೋವಾ: ಇಲ್ಲಿ ವಾಟರ್ ಸ್ಪೋರ್ಟ್ಸ್ ಮಾತ್ರವಲ್ಲದೇ, ಏರ್ ಬಲೂನ್ ರೈಡ್ ಇದೆ. ಇದರಲ್ಲಿ ರೈಡ್ ಮಾಡುತ್ತ ಗೋವಾದ ಸುಂದರವಾದ ತಾಣಗಳು ಹಾಗು ಬೀಚ್‌ಗಳನ್ನೂ ನೋಡಬಹುದು. 
ಎತ್ತರ : 4000 ಅಡಿ , ಸಮಯ : 60 ನಿಮಿಷ, ದರ : 14000  ರೂಪಾಯಿ ವ್ಯಕ್ತಿಗೆ. 
 

Latest Videos
Follow Us:
Download App:
  • android
  • ios