ಅಡುಗೆಮನೆಗೆ ಸಂಬಂಧಿಸಿದ ಈ ತಪ್ಪು ಅಭ್ಯಾಸಗಳು ನಿಮಗೂ ಇವೆಯೇ?

ಕಿಚನ್ ಕೂಡಾ ಬಹುತೇಕರಿಗೆ ಪ್ರಯೋಗಾಲಯ. ಅಲ್ಲಿ ಕೆಲವರು ತಾವೇ ಪ್ರಯೋಗ ಮಾಡಿ ಮಾಡಿ ಸರಿಯೆನಿಸಿದ್ದನ್ನು ಉಳಿಸಿಕೊಂಡರೆ ಮತ್ತೆ ಕೆಲವರು ಅಮ್ಮ ಹೇಳಿದ ಅಭ್ಯಾಸಗಳಿಗೆ ಜೋತು ಬೀಳುತ್ತಾರೆ. ಆದರೆ, ಈ ಅಭ್ಯಾಸಗಳಲ್ಲಿ ಕೆಲವೊಮ್ಮೆ ತಪ್ಪುಗಳು ಕೂಡಾ ನುಸುಳಿಕೊಂಡು ಬಿಡುತ್ತವೆ. ಅವು ಯಾವೆಲ್ಲ ಗೊತ್ತಾ? 

6 mistakes you do in  kitchen and how to correct them

ಕೆಲವೊಂದು ವಿಷಯಗಳು ಹಾಗೆಯೇ, ನಾವು ಕಲಿತದ್ದೇ ಸರಿ ಎನಿಸುತ್ತದೆ. ಅಜ್ಜಿಯ ಕಾಲದಿಂದಲೂ ಅದನ್ನು ಹಾಗೇ ಮಾಡಿಕೊಂಡು ಬರಲಾಗಿತ್ತು. ನಾವೂ ಅದನ್ನೇ ಕಲಿತು ನಡೆಸಿಕೊಂಡು ಹೋಗುತ್ತಿರುತ್ತೇವೆ. ಅಡುಗೆಮನೆಗೆ ಸಂಬಂಧಿಸಿದ ವಿಷಯಗಳಲ್ಲೂ ಕೆಲವೊಂದು ಹೀಗೇ ಆಗಿರುತ್ತದೆ. ಆದರೆ ಬಹುತೇಕರು ರೂಢಿಸಿಕೊಂಡಿರುವ ಈ ಕೆಲವು ಅಭ್ಯಾಸಗಳು ತಪ್ಪು. ಏಕೆ, ಹೇಗೆ ಹಾಗೂ ಸರಿಯಾದ ಅಭ್ಯಾಸ ಯಾವುದು ತಿಳ್ಕೋಬೇಕಾ... ಮುಂದೆ ಓದಿ.

1. ತಪ್ಪಾದ ಎಣ್ಣೆಯ ಬಳಕೆ

ಎಣ್ಣೆ ಅಂದ್ರೆ ಎಣ್ಣೆ ಅಷ್ಟೇ, ಅಡುಗೆ ಮಾಡೋಕೆ ಯಾವ್ದೋ ಒಂದು ಎಣ್ಣೆ ಹಾಕಿದ್ರಾಯ್ತು ಅಂದುಕೊಂಡ್ರೆ ಅದು ನಿಮ್ಮ ತಪ್ಪು ಕಲ್ಪನೆ. ಯಾವುದೇ ಎಣ್ಣೆ ಹಾಕಿದ್ರೂ ಊಟ ಅದೇ ರುಚಿ ಬರೋದು ಸುಳ್ಳು. ವರ್ಜಿನ್ ಆಲಿವ್ ಆಯಿಲ್ ಹೆಲ್ದೀ ಹಾಗೂ ವೆಜಿಟೇಬಲ್ ಆಯಿಲ್ ಕೂಡಾ.

ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ, ಯಾವುದಕ್ಕೆ ಒಳಿತು?

ಸಲಾಡ್‌ಗಳ ಡ್ರೆಸಿಂಗ್‌ಗೆ ಹೇಳಿ ಮಾಡಿಸಿದ್ದು. ಹಾಗಂಥ ಬೇಯಿಸಲು, ಹುರಿಯಲು, ಕರಿಯಲು ಅದೇ ಎಣ್ಣೇ ಬಳಸಿದ್ರೆ ಡಿಸಾಸ್ಟರ್ ಆದೀತು. ಅಲ್ಲದೆ, ಅದು ಆರೋಗ್ಯಕ್ಕೆ ಕೂಡಾ ಒಳ್ಳೆಯದಲ್ಲ. ಹಾಗೆಯೇ ಸಾಸಿವೆ ಎಣ್ಣೆ ಕೂಡಾ ಊಟದ ರುಚಿ ಕೆಡಿಸಬಹುದು. ಅಡುಗೆಗೆ ಹೇಳಿ ಮಾಡಿಸಿದ್ದು, ಕೊಬ್ಬರಿ ಎಣ್ಣೆ ಹಾಗೂ ಕಡ್ಲೆಕಾಯಿ ಎಣ್ಣೆ. ಒಗ್ಗರಣೆಗಂತೂ ಕೊಬ್ಬರಿ ಎಣ್ಣೆಯೇ ಬೆಸ್ಟ್. 

2. ನಿಮ್ಮ ಕಬ್ಬಿಣದ ಕಾವಲಿಯನ್ನು ಸೋಪಿನಿಂದ ತೊಳೆಯುವುದು

ಬಹುತೇಕ ಭಾರತೀಯರು ಈ ತಪ್ಪನ್ನು ಮಾಡಿ ನಂತರ ಪಶ್ಚಾತ್ತಾಪ ಪಡುತ್ತಾರೆ. ಏಕೆಂದರೆ ಸೋಪಿನಿಂದ ಉಜ್ಜಿ ತೊಳೆಯುವುದರಿಂದ ಕಾವಲಿಯ ಮೇಲಿನ ಕೋಟಿಂಗ್ ಹೋಗಿ ಕಾವಲಿ ತುಕ್ಕು ಹಿಡಿಯುತ್ತದೆ. ಇದನ್ನು ಸ್ವಲ್ಪ ಬಿಸಿನೀರು ಹಾಗೂ ಸ್ಪಾಂಜ್ ಬಳಸಿ ಸ್ವಚ್ಛಗೊಳಿಸಿ.

ಬ್ಲೀಚ್‌ ಬಳಸಿ ಆದ್ರೆ ಈ ರೀತಿ ಅಲ್ಲ!

ನಂತರ ಕಾವಲಿಗೆ ವೆಜಿಟೇಬಲ್ ಆಯಿಲ್ ಹಚ್ಚಿ ಐದು ನಿಮಿಷ ಸ್ಟೌವ್ ಮೇಲೆ ಮೀಡಿಯಂ ಫ್ಲೇಮ್‌ನಲ್ಲಿಡಿ. ಬಳಿಕ ಸ್ಟೌವ್ ಆರಿಸಿ, ಕಾವಲಿ ತಣ್ಣಗಾದ ನಂತರ ಎಣ್ಣೆಯನ್ನು ಟಿಶ್ಯೂ ಪೇಪರ್ ಅಥವಾ ಬಟ್ಟೆಯಿಂದ ಒರೆಸಿ ತೆಗೆದು ಕಾವಲಿಯನ್ನು ಒಣಜಾಗದಲ್ಲಿಡಿ.

3. ತರಕಾರಿ ಹಾಗೂ ಹಣ್ಣುಗಳನ್ನು ಸರಿಯಾಗಿ ತೊಳೆಯದಿರುವುದು

ಈಗಿನ ಬ್ಯುಸಿ ಕೆಲಸದ ಮಧ್ಯೆ ಅಥವಾ ಉದಾಸೀನದ ಕಾರಣದಿಂದಾಗಿ ಬಹುತೇಕರು ತರಕಾರಿ ಹಾಗೂ ಹಣ್ಣುಗಳನ್ನು ಸ್ವಲ್ಪ ನೀರಿನಲ್ಲಿ ಹಿಡಿದು ತೊಳೆದೆವೆಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. ಆದರೆ, ಅವುಗಳನ್ನು ಬೆಳೆಸಲು ಬಳಸುವ ರಾಶಿಗಟ್ಟಲೆ ರಾಸಾಯನಿಕ ಹೋಗಲು ಚೂರು ನೀರಿನ ಶಾಸ್ತ್ರ ಸಾಲುವುದಿಲ್ಲ.

ಹಣ್ಣು, ತರಕಾರಿ ಮೇಲಿನ ಬಿಲ್ ಕೋಡನ್ನು ಇಗ್ನೋರ್ ಮಾಡ್ಬೇಡಿ!

ಬದಲಿಗೆ ಅವನ್ನು ಉಪ್ಪು ನೀರಿನಲ್ಲಿ ಅಥವಾ ಬಿಸಿ ನೀರಿನಲ್ಲಿ ಅದ್ದಿಟ್ಟು ಚೆನ್ನಾಗಿ ತಿಕ್ಕಿ ತೊಳೆಯಬೇಕು. ಇಲ್ಲದಿದ್ದಲ್ಲಿ ರಾಸಾಯನಿಕ ರಹಿತವಾಗಿ ಬೆಳೆದ ಆರ್ಗ್ಯಾನಿಕ್ ತರಕಾರಿ ಹಾಗೂ ಹಣ್ಣುಗಳನ್ನೇ ತರುವುದು ಅಭ್ಯಾಸ ಮಾಡಿಕೊಳ್ಳುವುದು ಸಹ ಒಳ್ಳೆಯದೇ. 

4. ಟೊಮ್ಯಾಟೋವನ್ನು ಫ್ರಿಡ್ಜ್‌ನಲ್ಲಿಡುವುದು

ಬಹುತೇಕ ಮನೆಗಳಲ್ಲಿ ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಫ್ರಿಡ್ಜ್‌ನಿಂದ ಹೊರಗೆ ಇಡುತ್ತಾರೆ. ಆದರೆ, ಟೊಮ್ಯಾಟೋವನ್ನು ಮಾತ್ರ ಬೇಗ ಕೆಡದಿರಲಿ ಎಂದು ಫ್ರಿಡ್ಜ್‌ನಲ್ಲಿಡುತ್ತಾರೆ.

ಮಾಮೂಲಿ ಇಡ್ಲಿ ತಿಂದು ಬೇಜಾರಾದ್ರೆ ಇಲ್ಲಿದೆ ಟೊಮೆಟೋ ಇಡ್ಲಿ

ಆದರೆ, ಫ್ರಿಡ್ಜ್‌ನ ತಂಪಿನಲ್ಲಿ ಟೊಮ್ಯಾಟೋ ತನ್ನ ಫ್ಲೇವರ್ ಕಳೆದುಕೊಂಡು ಅಡಿಗೆಗೆ ರುಚಿ ಕೊಡುವುದಿಲ್ಲ. ಟೊಮ್ಯಾಟೋವನ್ನು ಕೂಡಾ ಹೊರಗೆಯೇ ಇಡುವುದು ಜಾಣತನ.

5. ನಾನ್ ಸ್ಟಿಕ್ ಪ್ಯಾನ್ಗೆ ಸ್ಟೇನ್‌ಲೆಸ್ ಸ್ಟೀಲ್ ಸೌಟಿನ ಬಳಕೆ

ಬಾಣಲೆಯಲ್ಲಿ ಅಡಿಗೆ ಮಾಡುವಾಗ ಬಹುತೇಕರು ಗಡಿಬಿಡಿಯಲ್ಲಿ ಕೈಗೆ ಸಿಕ್ಕ ಸೌಟು, ಸೆಟಗ ಬಳಸುತ್ತಾರೆ. ಆದರೆ, ನಾನ್ ಸ್ಟಿಕ್ ಹಾಗೂ ಸೆರಾಮಿಕ್  ಬಾಣಲೆಗಳಿಗೆ ಸ್ಟೀಲ್ ಸೌಟಿನ ಬಳಕೆ ತಪ್ಪು ಮಾತ್ರವಲ್ಲ ಅಪಾಯಕಾರಿ ಕೂಡಾ.

ಮನೆಮಂದಿಯ ಆರೋಗ್ಯ ಕಾಪಾಡುವ ಅಡುಗೆ ಕೋಣೆಯ ವಾಸ್ತು; ಎಲ್ಲಿ ಏನಿದ್ದರೆ ಮಸ್ತ್?

ನಾನ್ ಸ್ಟಿಕ್ ಪಾತ್ರೆಯ ಮೇಲೆ ಟೆಫ್ಲಾನ್ ಕೋಟಿಂಗ್ ಹೊಡೆದಿರಲಾಗುತ್ತದೆ. ಇವು ಹಾಗೆಯೇ ಸಿಕ್ಕಾಪಟ್ಟೆ ಅನಾರೋಗ್ಯಕಾರಿ. ಅಂಥದರಲ್ಲಿ ಸ್ಟೀಲ್ ಸೌಟು ಹಾಕಿ ಅದನ್ನು ಕೆರೆದರೆ ಈ ಟೆಫ್ಲಾನ್ ಆಹಾರದಲ್ಲಿ ಸೇರಿಕೊಳ್ಳುತ್ತದೆ. ಇದು ವಿಷಕಾರಿಯಾಗಿದ್ದು, ಈ ಅಭ್ಯಾಸವನ್ನು ಮೊದಲು ಬಿಡಬೇಕು.

6. ಹರ್ಬ್‌ಗಳನ್ನು ಫ್ರಿಡ್ಜ್‌ನಲ್ಲಿಟ್ಟು ಕೊಲೆ ಮಾಡುವುದು

ತಾಜಾ ಔಷಧೀಯ ಎಲೆಗಳನ್ನು ಪ್ಲ್ಯಾಸ್ಟಿಕ್ ಬ್ಯಾಗಿಗೆ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ಕೆಲ ದಿನಗಳಲ್ಲಿ ಅವು ಒಣಗಿ ಸುಕ್ಕಾಗಿ ಸಾವನ್ನಪ್ಪುತ್ತವೆ.

ಅಡುಗೆಮನೆ ನಿಭಾಯಿಸುವುದೇನೂ ಕಷ್ಟವಲ್ಲ ಬಿಡ್ರಿ....

ಅದರ ಬದಲಿಗೆ ನಿಮ್ಮ ಮನೆಯಲ್ಲಿ ವಾಸ್‌ನಲ್ಲಿ ಹೂವನ್ನಿಡುವಂತೆ ಜಾರ್‌ನಲ್ಲಿ ನೀರು ಹಾಕಿ ಅದರಲ್ಲಿ ತುಳಸಿ, ಪುದೀನಾ, ದೊಡ್ಡಪತ್ರೆ ಮುಂತಾದ ಔಷಧೀಯ ಎಳೆಗಳನ್ನು ಕಾಂಡ ಸಮೇತ ಇಟ್ಟರೆ ಯಾವಾಗ ಬಳಸಿದರೂ ಅವು ಆಗಷ್ಟೇ ಗಿಡದಿಂದ ತೆಗೆದಂತೆ ಫ್ರೆಶ್ ಆಗಿರುತ್ತವೆ. ಇನ್ನು ಕೊತ್ತಂಬರಿ ಸೊಪ್ಪನ್ನು ಲೂಸಾದ ಕವರ್‌ನಲ್ಲಿ ಹಾಕಿ ಮೇಲಿನಿಂದ ರಬ್ಬರ್‌ಬ್ಯಾಂಡ್ ಹಾಕಿಡಿ.

Latest Videos
Follow Us:
Download App:
  • android
  • ios