ಮನೆಯನ್ನು ಬ್ಯಾಕ್ಟೀರಿಯಾಮುಕ್ತಗೊಳಿಸುವುದರಲ್ಲಿ, ಕಲೆ ತೆಗೆಯುವಲ್ಲಿ, ಸ್ವಚ್ಛಗೊಳಿಸುವುದರಲ್ಲಿ ಬ್ಲೀಚ್‌ಗಿಂತ ಪರಿಣಾಮಕಾರಿಯಾದುದು ಇನ್ನೊಂದಿಲ್ಲ. ಆದರೆ ಬ್ಲೀಚ್ ಅಪಾಯಕಾರಿ ಕೆಮಿಕಲ್ ಆಗಿದ್ದು, ಅದನ್ನು ಬಳಸುವಾಗ ಹೆಚ್ಚಿನ ಜಾಗೃತೆ ವಹಿಸುವುದು ಮುಖ್ಯ. 

1. ಬ್ಲೀಚನ್ನು ಬೇರೆ ಕ್ಲೀನರ್ ಜೊತೆ ಮಿಕ್ಸ್  ಮಾಡುವುದು

ಬ್ಲೀಚನ್ನು ಬೇರೆ ಕ್ಲೀನರ್‌ಗಳ ಜೊತೆ ಮಿಕ್ಸ್ ಮಾಡುವುದರಿಂದ ಬ್ಯಾಕ್ಟೀರಿಯಾ ವಿರುದ್ಧ ಹೋರಾಟಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ನಿಮಗೆನಿಸಬಹುದು. ಆದರೆ, ಇತರೆ ಕ್ಲೀನರ್ ಜೊತೆ ಬ್ಲೀಚನ್ನು ಬೆರೆಸುವುದರಿಂದ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಾರಾಷ್ಟ್ರೀಯ ರೆಸಿಡೆನ್ಷಿಯಲ್ ಕ್ಲೀನಿಂಗ್ ಸರ್ವೀಸಸ್ ಒಕ್ಕೂಟದ ಪ್ರಕಾರ ಬ್ಲೀಚನ್ನು ಇವುಗಳ ಜೊತೆಗೆ ಬೆರೆಸಲೇಬಾರದು. 

ಮನೆಯೊಡೆಯನ ವ್ಯಕ್ತಿತ್ವ ಹೇಳೋ ಮನೆ ಎಂಬ ಗೂಡು!

ವಿನೆಗರ್, ಪೈನ್ಸೋಲ್: ಬ್ಲೀಚ್ ಹಾಗೂ ವಿನೆಗರ್ ಅಥವಾ ಪೈನ್ಸೋಲ್ ಬೆರೆಸಿದಾಗ ಕ್ಲೋರಿನ್ ಗ್ಯಾಸ್ ಉತ್ಪಾದನೆಯಾಗುತ್ತದೆ. ಇದು ಉಸಿರಾಟದ ತೊಂದರೆ ಹಾಗೂ ಕಣ್ಣಿನಲ್ಲಿ ತುರಿಕೆ, ಉರಿ ತರಬಹುದು. 

ಅಮೋನಿಯಾ: ಅಮೋನಿಯಾದೊಂದಿಗೆ ಸೇರಿದ ಬ್ಲೀಚ್ ಕ್ಲೋರಮೈನ್ ಹುಟ್ಟು ಹಾಕುತ್ತದೆ. ಇದೂ ಕೂಡಾ ಕ್ಲೋರಿನ್ ಗ್ಯಾಸ್‌ನಂತೆಯೇ ಆದರೂ, ಕಣ್ಣು ಹಾಗೂ ಉಸಿರಾಟದ ಸಮಸ್ಯೆ ಜೊತೆಗೆ ಎದೆನೋವು ತರಬಹುದು.

2. ಬಟ್ಟೆ ಒಗೆವಾಗ ಬ್ಲೀಚ್‌ನ ಅತಿಯಾದ ಬಳಕೆ

ಬ್ಲೀಚ್ ಬಟ್ಟೆಯ ಮೇಲಿನ ಕಲೆಗಳನ್ನು ತೆಗೆದು, ಬಿಳಿ ಬಟ್ಟೆಗಳಿಗೆ ಮತ್ತಷ್ಟು ಹೊಳಪು ನೀಡಬಹುದು. ಆದರೆ, ಅತಿಯಾದರೆ, ಬಟ್ಟೆ ಬಹುಬೇಗ ಹಾಳಾಗುತ್ತದೆ. ಆದ್ದರಿಂದ ಬಟ್ಟೆಗೆ ಬ್ಲೀಚ್ ಬಳಸುವಾಗ ಕೆಲ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. 

- ಬಹುತೇಕ ಬಟ್ಟೆಗಳ ಮೇಲೆ ಬ್ಲೀಚ್ ಸೂಚನೆಗಳಿರುತ್ತವೆ. ಅಲ್ಲಿ ಬ್ಲೀಚ್ ಬಳಸಬೇಡಿ ಅಂತಿದ್ದರೆ ಅಂಥ ಬಟ್ಟೆಗೆ ಬ್ಲೀಚ್ ಬೇಡವೇ ಬೇಡ. 

- ಕೆಲ ಡಿಟರ್ಜೆಂಟ್‌ಗಳಲ್ಲಿ ಬಣ್ಣ ಸುರಕ್ಷತೆ ಕಾಯುವ ಬ್ಲೀಚ್ ಬಳಸಿರುತ್ತಾರೆ. ಅಂದ ಮೇಲೆ ಮೇಲಿನಿಂದ ಮತ್ತಷ್ಟು ಬ್ಲೀಚ್ ಬಳಕೆ ಬೇಡ. ಸಣ್ಣ ಬಟ್ಟೆಯ ಮೇಲೆ ಪ್ರಯೋಗ ಮಾಡಿ, ಬಣ್ಣ ಮಾಸುತ್ತಿಲ್ಲವೆಂದಾದರೆ ಆಗ ಉಳಿದ ಬಟ್ಟೆಗಳಿಗೂ ಬ್ಲೀಚ್ ಬಳಸಬಹುದೆಂದರ್ಥ. 

ಮನೆಮಂದಿಯ ಆರೋಗ್ಯ ಕಾಪಾಡುವ ಅಡುಗೆ ಕೋಣೆಯ ವಾಸ್ತು; ಎಲ್ಲಿ ಏನಿದ್ದರೆ ಮಸ್ತ್?

- ಕಲೆ ಇದ್ದಲ್ಲಿ ಮಾತ್ರ ಬ್ಲೀಚ್ ಬಳಸಿ ತೊಳೆಯುವುದು ಜಾಣತನ.

- ಬಟ್ಟೆಯ ದೊಡ್ಡ ರಾಶಿಗೆ ಬಳಸುವಾಗ ಬ್ಲೀಚ್ ಕಂಟೇನರ್ ಮೇಲಿರುವ ಲೇಬಲ್ ಓದಿ ಎಷ್ಟು ಬಳಸಬೇಕೆಂದು ಜಾಗೃತೆ ವಹಿಸಿ. ವಾಷಿಂಗ್ ಮೆಷಿನ್ ಮ್ಯಾನ್ಯುಯಲ್ ಕೂಡಾ ಓದಿ ಬ್ಲೀಚ್ ಹಾಕಲು ವಿಶೇಷ ಡಿಸ್ಪೆನ್ಸರ್ ಬಳಸಬೇಕೆ ತಿಳಿದುಕೊಳ್ಳಿ. 

3. ಚರಂಡಿಗೆ ಬ್ಲೀಚ್ ಹಾಕುವುದು

ಬ್ಲೀಚನ್ನು ಸಿಂಕ್, ಟಾಯ್ಲೆಟ್, ಅಥವಾ ಮನೆ ಸುತ್ತಮುತ್ತದ ಚರಂಡಿಗೆ ಸುರಿಯುವುದರಿಂದ ಅಲ್ಲಿದ್ದಿರಬಹುದಾದ ಇತರೆ ಏಜೆಂಟ್‌ಗಳ ಜೊತೆ ಮಿಕ್ಸ್ ಆಗಿ ಮನೆಯ ಗಾಳಿಯನ್ನು ಕಲುಷಿತಗೊಳಿಸಬಹುದು. ಜೊತಗೆ ಪೈಪ್ ಬರ್ಸ್ಟ್ ಆಗುವ ಸಾಧ್ಯತೆಯೂ ಇರುತ್ತದೆ.

4. ಮೆಟಲ್ ಮೇಲೆ ಬ್ಲೀಚ್ ಬಳಕೆ

ಕಾಪರ್ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಮೇಲೆ ಬ್ಲೀಚ್ ಬಳಸಬಾರದು. ಬ್ಲೀಚ್‌ನಲ್ಲಿನ ಕೆಮಿಕಲ್ಸ್ ಮೆಟಲ್ ಜೊತೆ ರಿಯಾಕ್ಷನ್ ಆಗಿ, ಕಲೆಗಳನ್ನು ಉಳಿಸಬಹುದು. ಅಥವಾ ಪಾತ್ರೆ ತುಕ್ಕು ಹಿಡಿಯಲೂ ಕಾರಣವಾಗಬಹುದು. ಇದರೊಂದಿಗೆ ತುಕ್ಕು ತೆಗೆಯಲು ಅಮೋನಿಯಾ ಅಥವಾ ಬ್ಲೀಚ್ ಬಳಕೆ ಬೇಡ. 

ಹರಿಯೋ ಜಲಪಾತದ ಫೋಟೋ, ಶೋ ಪೀಸ್ ಮನೆಯಲ್ಲಿದ್ದರೆ.....

5. ಬ್ಲೀಚನ್ನು ಹೆಚ್ಚು ಡೈಲ್ಯೂಟ್ ಮಾಡದಿರುವುದು 

ಜಾಸ್ತಿ ಬ್ಲೀಚ್ ಹಾಕಿದಾಕ್ಷಣ ಬಹಳ ಕ್ಲೀನಾಗಿಬಿಡುತ್ತದೆ ಎಂದೇನಿಲ್ಲ. ನೆಲ, ಸಿಂಕ್, ಟಿವಿ, ಫ್ರಿಡ್ಜ್ ಮತ್ತಿತರೆ ಅಪ್ಲೈಯನ್ಸ್‌ಗಳು ಮುಂತಾದವನ್ನು ಸ್ವಚ್ಛಗೊಳಿಸುವಾಗ 1 ಗ್ಯಾಲನ್ ನೀರಿಗೆ 1 ಕಪ್‌ಗಿಂತ ಹೆಚ್ಚು ಬ್ಲೀಚ್ ಬಳಕೆ ಮಾಡಬಾರದು.