ಹೆಚ್ಚಾಗಿ ಗರ್ಭಿಣಿಯರಿಗೆ ಹಲವು ಬಯಕೆಗಳಿರುತ್ತವೆ. ತಾವು ದಿನ ಇಷ್ಟಪಟ್ಟು ತಿನ್ನುತ್ತಿದ್ದ ಆಹಾರಗಳು ಬೇಡವೆನಿಸುತ್ತವೆ.  ಯಾವುದೋ ವಿಚಿತ್ರ ವಸ್ತುಗಳು ಇಷ್ಟವಾಗುತ್ತವೆ.  ಹುಣಸೆ ಹುಳಿ ಜೊತೆ ಉಪ್ಪು ಸೇರಿಸಿ ತಿನ್ನೋ ಬಯಕೆ, ಹೊರಗೆಲ್ಲೊ ಹೋಗಿ ಮಣ್ಣು ತಿನ್ನುವ ತವಕ ಬೇರೆ. ಎಲ್ಲರಿಗೂ ಇಂಥದ್ದೇ ಬಯಕೆಗಳು ಪುಟಿದೇಳಬೇಕೆಂದೇನೂ ಇಲ್ಲ. ಒಬ್ಬೊಬ್ಬರದ್ದು ಒಂದೊಂದು ರೀತಿ. 

ಗರ್ಭಿಣಿ ಆಸೆಗಳನ್ನು ತೀರಿಸಲೆಂದೇ ಆಕೆಗೆ ವಿಧ ವಿಧವಾದ ತಿಂಡಿಗಳು ಸಿದ್ಧವಾಗುತ್ತವೆ. ಖಾರ ತಿನಿಸುಗಳನ್ನು ಮಾಡಿ ಸೀಮಂತ ಮಾಡುತ್ತಾರೆ. ಅಷ್ಟಕ್ಕೂ ಗರ್ಭಿಣಿಯರಿಗೆ ಈ ರೀತಿ ಕ್ರೆವಿಂಗ್ ಆಗುವುದೇಕೆ? 

ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ; ಮನೆಯಲ್ಲೇ ಇದೆ ಮದ್ದು

ವಿಶ್ವದಲ್ಲಿ ಸುಮಾರು ಶೇ. 84 ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಬಯಕೆಯಾಗುತ್ತದೆ. ಕೆಲವರು ಒಂದೊಂದು ತಿಂಡಿಗೂ ಪತಿಯನ್ನು ಬಿಡದಂತೆ ಕಾಡುತ್ತಾರೆ. ವಿಜ್ಞಾನ ಹೇಳುವಂತೆ ಶರೀರದಲ್ಲಿ ಯಾವ ಸತ್ವಾಂಶದ, ಪೋಷಕ ತತ್ವದ ಕೊರತೆ ಇರುವುದೋ, ಆ ಅಂಶವುಳ್ಳ ತಿನಿಸನ್ನು ತಿನ್ನುವ ಬಯಕೆ ಬರುತ್ತದೆ. ಅಂದರೆ ಶರೀರದಲ್ಲಿ ಯಾವುದೇ ಒಂದು ಪೋಷಕಾಂಶ ಕಡಿಮೆಯಾದರೆ ಆ ಪೋಷಕಾಂಶ ಹೆಚ್ಚಿರುವ ಆಹಾರ ತಿನ್ನುವ ಬಯಕೆ ಗರ್ಭಿಣಿಯರನ್ನು ಕಾಡುತ್ತದೆ, ಎನ್ನುತ್ತದೆ ಅಧ್ಯಯನ. 

ಇನ್ನು ಕೆಲವೊಂದು ಅಧ್ಯಯನಗಳು ತಿಳಿಸುವಂತೆ ಹಾರ್ಮೋನ್ ಪರಿವರ್ತನೆಯಿಂದ ಫುಡ್ ಕ್ರೆವಿಂಗ್ ಉಂಟಾಗುತ್ತದೆ. ಆಸ್ಟ್ರೋಜನ್ ಮತ್ತು ಪ್ರೊಜೆಸ್ಟೆರೋನ್ ಹಾರ್ಮೋನ್ಸ್ ಪ್ರಭಾವ ಬ್ರೈನ್ ಮೇಲೆ ಉಂಟಾಗುವುದರಿಂದ ತಿನ್ನುವ ಬಯಕೆ ಹೆಚ್ಚುತ್ತದೆ. 

ಪ್ರಸವದ ನಂತರ ಶೇಪ್ ಬರಲು ಹೀಗ್ ಮಾಡಿ....

ಮಣ್ಣು ತಿನ್ನುವಾಸೆ...

ಶರೀರದಲ್ಲಿ ಖನಿಜಾಂಶದ ಕೊರತೆಯಾದಾಗ ಮಣ್ಣು ತಿನ್ನುವ ಬಯಕೆಯಾಗುತ್ತದೆ. ಖನಿಜಾಂಶ ಹೆಚ್ಚಿರುವ ಆಹಾರ ಸೇವಿಸಿದರೆ ಮಣ್ಣೆಲ್ಲ ತಿನ್ನಬೇಕೆಂದು ಅನಿಸುವುದೇ ಇಲ್ಲ. 

ರೆಡ್ ಮೀಟ್ ತಿನ್ನುವ ಬಯಕೆ

ಪ್ರೊಟೀನ್ ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ ಎಂದರ್ಥ. ಹಾಗಂತ ಇದನ್ನು ಹೆಚ್ಚಿಗೆ ಸೇವಿಸುವುದು ಒಳ್ಳೆಯದಲ್ಲ. 

ಚಾಕಲೇಟ್ ತಿನ್ನುವ ಬಯಕೆ

ಮೆಗ್ನೇಷಿಯಂ ಅಂಶ ದೇಹದಲ್ಲಿ ಕಡಿಮೆಯಾದರೆ ಚಾಕಲೇಟ್ ತಿನ್ನಬೇಕೆಂದು ಎನಿಸುತ್ತದೆ. 

ಹುಳಿ, ಮಾವಿನ ಕಾಯಿ 

ವಿಟಮಿನ್ ಸಿ ದೇಹಕ್ಕೆ ಬೇಕಾದಲ್ಲಿ ಹುಳಿ ತಿನ್ನೋ ಬಯಕೆ ಹೆಚ್ಚುತ್ತದೆ. 

ಮೊಟ್ಟೆ, ಪಾಲಕ್ ಹೆಚ್ಚಿಸುತ್ತೆ ಬಾಣಂತಿ, ಬಾಲೆ ಝಲಕ್...

ಉಪ್ಪು ಹೆಚ್ಚಿರೋ ಆಹಾರ

ಆಹಾರದಲ್ಲಿ ಸೋಡಿಯಂ ಕೊರತೆಯಾದರೆ ಉಪ್ಪಿರುವ ಆಹಾರ ಅಥವಾ ಮಸಾಲೆ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸುವ ಬಯಕೆ ಹೆಚ್ಚುತ್ತದೆ. ಇದಲ್ಲದೆ ಗರ್ಭವಾಸ್ಥೆಯಲ್ಲಿ ರಕ್ತ ಹೆಚ್ಚುತ್ತದೆ. ಇದರಿಂದಲೂ ಉಪ್ಪಿನಂಶ ಹೆಚ್ಚು ತಿನ್ನುವ ಬಯಕೆ ಉಂಟಾಗುತ್ತದೆ.  

ಹೆಚ್ಚು ಹೆಚ್ಚು ಸಿಹಿ ತಿನ್ನುವ ಬಯಕೆ

ಚಾಕಲೇಟ್, ಐಸ್ ಕ್ರೀಮ್, ಡೋನಟ್ಸ್ ತಿನ್ನವುದು ಗರ್ಭಿಣಿ ಮಹಿಳೆಯರಿಗೆ ಇಷ್ಟ. ಸಾಮಾನ್ಯವಾಗಿ ಬ್ಲಡ್ ಪ್ರೆಶರ್ ಲೆವಲ್ ನಿಯಮಿತವಾಗಿರಲು ಸಿಹಿ ತಿನ್ನುವ ಬಯಕೆ ಉಂಟಾಗುತ್ತದೆ.