ಪ್ರಸವದ ನಂತರ ಶೇಪ್ ಬರಲು ಹೀಗ್ ಮಾಡಿ....
ಡೆಲಿವರಿ ನಂತರ ಸ್ತನಪಾನ ಮಾಡಿಸುವುದರಿಂದ ಸ್ತನ ಆಕಾರ ಕಳೆದುಕೊಳ್ಳುತ್ತದೆ ಹಾಗೂ ನೇತಾಡಲು ಆರಂಭಿಸುತ್ತದೆ ಎಂದು ಕೊಂಡಿದ್ದರೆ ಅದು ತಪ್ಪು. ಸ್ತನಪಾನದಿಂದ ತೂಕ ಕಡಿಮೆಯಾಗಿ ಹೊಟ್ಟೆ ಒಳಗೆ ಹೋಗುತ್ತದೆ.
ಒಂಬತ್ತು ತಿಂಗಳ ಗರ್ಭಧಾರಣೆ ನಂತರ ಡಿಲಿವರಿ ಆಗಿ ಮಹಿಳೆಯ ಜೀವನ ಶೈಲಿಯೇ ಸಂಪೂರ್ಣ ಬದಲಾಗುತ್ತದೆ. ಡೆಲಿವರಿ ನಂತರ ಮಹಿಳೆಯರಿಗೆ ಕಾಡುವ ಒಂದು ಮುಖ್ಯ ಸಮಸ್ಯೆ ಎಂದರೆ ತೂಕ ಹೆಚ್ಚುವುದು ಹಾಗೂ ಹೊಟ್ಟೆ ಭಾಗ ನೇತಾಡಲು ಆರಂಭವಾಗುತ್ತದೆ. ಇಂಥ ಸಮಸ್ಯೆ ನಿಮಗೆ ಕಾಡುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ. ಒಂದು ತಿಂಗಳಲ್ಲಿ ಹೊಟ್ಟೆ ಮತ್ತೆ ಮೊದಲಿನ ಆಕಾರಕ್ಕೆ ಬರುತ್ತದೆ.
ಮೊಟ್ಟೆ, ಪಾಲಕ್ ಹೆಚ್ಚಿಸುತ್ತೆ ಬಾಣಂತಿ, ಬಾಲೆ ಝಲಕ್...
- ವಿಪರೀತ ವ್ಯಾಯಾಮ ಮಾಡಬೇಕಾದ ಅಗತ್ಯವಿಲ್ಲ. ಬದಲಾಗಿ ವಾಕ್ ಮಾಡಿ, ಮೊದಲ ದಿನ ಸ್ವಲ್ಪ ನಡೆಯಿರಿ. ನಂತರ ಹೆಚ್ಚು ಹೆಚ್ಚು ನಡೆಯಲು ಆರಂಭಿಸಿ. ಇದರಿಂದ ತೂಕ ಕಡಿಮೆಯಾಗುತ್ತದೆ. ಹೊಟ್ಟೆ ಆಕಾರವು ಚೆನ್ನಾಗಿರುತ್ತದೆ.
- ಪ್ರೆಗ್ನೆನ್ಸಿಯಲ್ಲಿ ತೂಕ ಹೆಚ್ಚಾಗಲು ಕಾರಣ ಕೊಬ್ಬು ತುಂಬಿಕೊಳ್ಳುವುದು. ಅದಕ್ಕಾಗಿ ಹೆಚ್ಚು ಹೆಚ್ಚು ನೀರು ಸೇವಿಸಬೇಕು. ದಿನದಲ್ಲಿ ಕಡಿಮೆ ಎಂದರೆ 10 ಗ್ಲಾಸ್ ನೀರು ಕುಡಿಯುವುದು ಉತ್ತಮ.
- ಪ್ರಸವದ ನಂತರ ಮಹಿಳೆಯರಿಗೆ ಚೆನ್ನಾಗಿ ನಿದ್ರಿಸಲು ಸಾಧ್ಯವೇ ಇಲ್ಲ. ಕಾರಣ ಮಗುವಿಗೆ ಹಾಲುಣಿಸಬೇಕಾಗುತ್ತದೆ. ಆದುದರಿಂದ ಯಾವಾಗ ಸಮಯ ಸಿಗುತ್ತೋ, ಆಗಲೇ ನಿದ್ರಿಸಿ. ಇಲ್ಲವಾದರೆ ಮೆಟಬಾಲಿಸಂ ಮೇಲೆ ಪರಿಣಾಮ ಬೀರುತ್ತದೆ.
- ಸ್ತನ ಆಕಾರ ಕಳೆದುಕೊಳ್ಳುತ್ತದೆ ಎಂದು ಅಂದುಕೊಂಡು ಮಕ್ಕಳಿಗೆ ಹಾಲು ಕೊಡುವುದು ಬಿಡಬೇಡಿ. ಇದರಿಂದ ಹೊಟ್ಟೆ ಕರಗಿ ಸಣ್ಣದಾಗುವ ಚಾನ್ಸ್ ಇದೆ.
ಪ್ರಗ್ನೆನ್ಸಿ ಕುರಿತ ಈ ನಂಬಿಕೆಗಳು ನಿಜವಲ್ಲ!
- ಮಕ್ಕಳಿಗೆ ಹಾಲು ಕೊಡುವುದು ನಿಲ್ಲಿಸಿದ ಮೇಲೆ ನೀವು ತೆಗೆದುಕೊಳ್ಳುವ ಆಹಾರ ಕ್ರಮದಲ್ಲಿ ಬದಲಾವಣೆ ತರಬೇಕು. ಕಡಿಮೆ ಕ್ಯಾಲರಿ ಇರುವ ಆಹಾರ ಹೆಚ್ಚು ಸೇವಿಸಿ. ಜೊತೆಗೆ ವ್ಯಾಯಾಮ ಮಾಡಿದರೆ ಉತ್ತಮ.
- ಹೆಚ್ಚು ಸ್ಟ್ರೆಸ್ ಮಾಡಿಕೊಳ್ಳಬೇಡಿ. ಒತ್ತಡದಿಂದ ತೂಕ ಹೆಚ್ಚುತ್ತದೆ. ತುಂಬಾ ಟೆನ್ಶನ್ ಆದರೆ ಪತಿ ಜೊತೆ, ಮನೆಯವರ ಜೊತೆ ವಿಷಯಗಳನ್ನು ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಿ. ಇದರಿಂದ ನೀವು ಆರೋಗ್ಯದಿಂದರಲು ಸಾಧ್ಯವಾಗುತ್ತದೆ.
ಈ ಕಿವಿಯೋಲೆ ಧರಿಸಿದ್ರೆ ಸಾಕು, ಮಕ್ಕಳಾಗೋ ಚಿಂತೆನೇ ಇಲ್ಲ!