Smriti Mandhana and Palash Muchhal Wedding New Date: ಟೀಮ್‌ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಅವರ ವೈಯಕ್ತಿಕ ಜೀವನವು ಪ್ರಸ್ತುತ ಸುದ್ದಿಯಲ್ಲಿದೆ. ಪಲಾಶ್ ಮುಚ್ಚಲ್ ಅವರೊಂದಿಗಿನ ಅವರ ವಿವಾಹದ ಬಗ್ಗೆ ವಿವಿಧ ಚರ್ಚೆಗಳು ನಡೆಯುತ್ತಿವೆ. 

ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಮತ್ತು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರ ವಿವಾಹವು ಸಾಕಷ್ಟು ಚರ್ಚೆಯಲ್ಲಿತ್ತು. ಮದುವೆಯ ಸಂಗೀತ್‌ ಮತ್ತು ಗೋರಂಟಿ ಧರಿಸಿದ ಫೋಟೋಗಳು ಮತ್ತು ವೀಡಿಯೊಗಳು ಸೋಶಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದ್ದ ಹೊತ್ತಿನಲ್ಲಿಯೇ ಅವರ ಮದುವೆ ನಿಂತು ಹೋಗಿತ್ತು. ಸ್ಮೃತಿ ಮಂಧನಾ ಅವರ ತಂದೆಯ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಘೋಷಣೆ ಮಾಡಲಾಗಿತ್ತು.

ಮದುವೆಗೆ ಬಂದಿದ್ದ ಅತಿಥಿಗಳು ಹಾಗೆಯೇ ವಾಪಸ್‌ ಆಗಿದ್ದರು. ಮದುವೆಗೆ ಮಾಡಿದ್ದ ಎಲ್ಲಾ ಸಿದ್ಧತೆಗಳನ್ನು ತೆಗೆದುಹಾಕಲಾಯಿತು. ಅದರ ನಂತರ, ಪಲಾಶ್ ಅವರು ಕೆಲವು ಹುಡುಗಿಯರ ಸಂಗ ಬೆಳೆಸಿದ್ದ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗುತ್ತಿದ್ದವು. ಇನ್ನೂ ಕೆಲವು ವರದಿಗಳ ಪ್ರಕಾರ ಮದುವೆ ಆಗುವಂತೆ ಪಲಾಶ್‌ ಮುಚ್ಚಲ್‌, ಸ್ಮೃತಿ ಮಂಧನಾ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದೂ ಹೇಳಲಾಗಿತ್ತು. ಪಲಾಶ್ ಅವರ ನಿಜವಾದ ಮುಖ ಅವರ ಮುಂದೆ ಹೊರಬಂದ ನಂತರವೇ ಸ್ಮೃತಿ ಮಂಧಾನ ಅವರು ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದಾರೆ ಎಂದು ತಿಳಿಸಲಾಗಿತ್ತು. ಸ್ಮೃತಿ ಮಂಧಾನ ಅವರ ತಂದೆ ಮಾತ್ರವಲ್ಲದೆ ಪಲಾಶ್ ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಯಿತು.

ಪಲಾಶ್ ಮತ್ತು ಸ್ಮೃತಿ ಮಂಧಾನ ಯಾವಾಗ ಮದುವೆಯಾಗುತ್ತಾರೆಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂಧಾನ ನವೆಂಬರ್ 23 ರಂದು ವಿವಾಹವಾಗಬೇಕಿತ್ತು. ಹಳದಿ, ಮೆಹೆಂದಿ ಮತ್ತು ಸಂಗೀತ ವಿಧಿವಿಧಾನಗಳು ಈಗಾಗಲೇ ಮುಗಿದಿದ್ದವು. ಪಲಾಶ್‌ ಮುಚ್ಚಲ್‌, ಸ್ಮೃತಿ ಮಂಧನಾಗೆ ಮೋಸ ಮಾಡಿದ್ದಾರೆ ಎನ್ನುವಂಥ ಆರೋಪಗಳ ನಡುವೆ ಒಂದು ಪೋಸ್ಟ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ ಸ್ಮೃತಿ ಮತ್ತು ಪಲಾಶ್‌ ಮುಚ್ಚಲ್‌ ಅವರ ವಿವಾಹದ ಬಗ್ಗೆ ಅನ್ನೋದು ಪ್ರಮುಖ ವಿಚಾರವಾಗಿದೆ.

ಸ್ಮೃತಿ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹ ಮುಂದೂಡಲ್ಪಟ್ಟ ಒಂದು ವಾರದ ನಂತರ, ಈವೆಂಟ್ ಕಂಪನಿ ಕ್ರಯೋನ್ಸ್ ಎಂಟರ್ಟೈನ್ಮೆಂಟ್ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದೆ. ಈ ಪೋಸ್ಟ್ ಮೂಲಕ, ಅವರು ಪಲಾಶ್ ಮತ್ತು ಸ್ಮೃತಿ ಮಂಧಾನ ಅವರ ವಿವಾಹದ ಬಗ್ಗೆ ದೊಡ್ಡ ಸುಳಿವುಗಳನ್ನು ನೀಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಪಲಾಶ್ ಮತ್ತು ಸ್ಮೃತಿ ಮಂಧಾನ ಅವರ ಹೆಸರುಗಳನ್ನು ಉಲ್ಲೇಖಿಸದಿದ್ದರೂ, ಈ ಕಂಪನಿಯು ಸ್ಮೃತಿ ಮಂಧಾನ ಮತ್ತು ಪಲಾಶ್ ಅವರ ವಿವಾಹದ ಬಗ್ಗೆಯೇ ಜನರಿಗೆ ತಿಳಿಸುತ್ತಿದೆ ಅನ್ನೋದನ್ನು ಅರ್ಥ ಮಾಡಿಕೊಂಡಿದ್ದಾರೆ.

ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಪೋಸ್ಟ್‌ ಮಾಡಿದ್ದೇನು?

"ಜೀವನದ ಪ್ರತಿಯೊಂದು ಪಂದ್ಯದಲ್ಲೂ ನಾವು ಅಂತಿಮ ಗೆರೆಯನ್ನು ದಾಟುವುದಿಲ್ಲ, ಆದರೆ ಕ್ರೀಡಾ ಮನೋಭಾವ ಯಾವಾಗಲೂ ಮುಖ್ಯ. ನಮ್ಮ ತಂಡವು ಸಂತೋಷ ಮತ್ತು ಹೆಮ್ಮೆಯಿಂದ ಶ್ರಮಿಸಿತು ಮತ್ತು ಅದು ಖಂಡಿತವಾಗಿಯೂ ಉಲ್ಲೇಖಕ್ಕೆ ಅರ್ಹವಾಗಿದೆ. ಚಾಂಪಿಯನ್‌ಗಳೇ, ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇವೆ, " ಎಂದು ಈವೆಂಟ್ ಕಂಪನಿ ತನ್ನ ಪೋಸ್ಟ್‌ನಲ್ಲಿ ಹೇಳಿದೆ. ಈ ಪೋಸ್ಟ್ ಸ್ಮೃತಿ ಮತ್ತು ಪಲಾಶ್ ಅವರ ವಿವಾಹ ಶೀಘ್ರದಲ್ಲಿಯೇ ನಡೆಯಬಹುದು ಎನ್ನುವ ಸೂಚನೆ ಎನ್ನುವ ಅರ್ಥದಲ್ಲಿ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.