ಮೊಟ್ಟೆ, ಪಾಲಕ್ ಹೆಚ್ಚಿಸುತ್ತೆ ಬಾಣಂತಿ, ಬಾಲೆ ಝಲಕ್...
ಪ್ರೆಗ್ನೆನ್ಸಿ ಸಮಯದಲ್ಲಿ ಮಹಿಳೆಯರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಆದರೆ ಡೆಲಿವರಿ ನಂತರ ಯಾವ ಆಹಾರ ಸೇವಿಸಿದರೆ ಉತ್ತಮ ಅನ್ನೋದು ನಿಮಗೆ ತಿಳಿದಿದೆಯೇ? ಇಲ್ಲಿದೆ ನಿಮಗೊಂದಿಷ್ಟು ಮಾಹಿತಿ ನೀಡುವ ವ್ರೈಟ್ ಅಪ್.
ಗರ್ಭಿಣಿಯಾಗಿರುವಾಗ ಮಹಿಳೆಯರು ತಿನ್ನುವ ಆಹಾರಗಳ ಬಗ್ಗೆ ಎಷ್ಟು ಗಮನ ಹರಿಸುತ್ತೇವೆಯೋ , ಅದೇ ರೀತಿ ಡೆಲಿವರಿ ನಂತರವೂ ಏನು ತಿನ್ನಬೇಕು ಅನ್ನೋದು ಮುಖ್ಯ. ಹೆಚ್ಚಾಗಿ ಡೆಲಿವರಿ ನಂತರ ಮಹಿಳೆಯರು ತಮ್ಮ ಆಹಾರದ ಬಗ್ಗೆ ಗಮನ ಹರಿಸೋದಿಲ್ಲ. ಆದರೆ ತಾಯಿ ಮಗು ಆರೋಗ್ಯದಿಂದ ಇರಲು ಯಾವ ಆಹಾರ ಮುಖ್ಯ ಎಂಬುದನ್ನು ತಿಳಿದು ನೀವು ಸೇವಿಸೋದು ಉತ್ತಮ.
ಪ್ರಗ್ನೆನ್ಸಿ ಕುರಿತ ಈ ನಂಬಿಕೆಗಳು ನಿಜವಲ್ಲ!
ತಾಯಿಯ ಎದೆಹಾಲು ಮಗುವಿಗೆ ಪ್ರಥಮ ಆಹಾರ. ತಾಯಿ ಸೇವಿಸುವ ಆಹಾರ ಎದೆ ಹಾಲಿನ ಜೊತೆ ಸೇರಿಕೊಂಡು ಮಕ್ಕಳನ್ನು ತಲುಪುವ ಕಾರಣ ಸೇವಿಸುವ ಆಹಾರ ಪೌಷ್ಟಿಕಾಂಶದಿಂದ ಕೂಡಿದರೆ ಉತ್ತಮ. ಅದಕ್ಕಾಗಿ ಯಾವೆಲ್ಲಾ ಆಹಾರ ಸೇವಿಸಬೇಕು?
ಓಟ್ಸ್
ಪ್ರೊಟೀನ್ ಮತ್ತು ಫೈಬರ್ ಅಧಿಕವಿರುವ ಓಟ್ಸ್ ದೇಹದಲ್ಲಿ ಕಬ್ಬಿಣಾಂಶದ ಕೊರತೆ ನಿವಾರಿಸುತ್ತದೆ. ಅಮ್ಮನ ನಿಶ್ಯಕ್ತಿಯನ್ನು ಹೋಗಲಾಡಿಸಿ, ಮಗುವೂ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುತ್ತದೆ.
ಮೊಟ್ಟೆ
ಪ್ರಸವದ ನಂತರ ಮಹಿಳೆಯರಿಗೆ ಅಗತ್ಯವಾಗಿ ಪ್ರೊಟೀನ್ ಬೇಕು. ಪ್ರೊಟೀನ್ ಹೆಚ್ಚಿರುವ ಆಹಾರ ಮೊಟ್ಟೆ. ಇದನ್ನು ಸೇವಿಸಿದರೆ ಶರೀರಕ್ಕೆ ಬೇಕಾದ ಎನರ್ಜಿ ಸಿಗುತ್ತದೆ ಹಾಗೂ ವಿಟಮಿನ್ ಡಿ ಕೊರತೆ ದೂರವಾಗುತ್ತದೆ.
ಪಾಲಕ್
ಐರನ್ ಅಂಶ ಹೆಚ್ಚಿರುವ ವಸ್ತುಗಳಲ್ಲಿ ಪಾಲಕ್ ಸೊಪ್ಪು ಕೂಡ ಒಂದು. ಇದಲ್ಲದೆ ವಿಟಮಿನ್ ಎ ಕೂಡ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ. ಬೇಕಾದಲ್ಲಿ ಇದನ್ನು ಜ್ಯೂಸ್ ಮಾಡಿ ಅಥವಾ ಸಲಾಡ್ ಮಾಡಿ ಅಥವಾ ಪಲ್ಯ ಮಾಡಿ ಸೇವಿಸಬಹುದು.
ಈ ಕಿವಿಯೋಲೆ ಧರಿಸಿದ್ರೆ ಸಾಕು, ಮಕ್ಕಳಾಗೋ ಚಿಂತೆನೇ ಇಲ್ಲ!
ಡೈರಿ ಉತ್ಪನ್ನಗಳು
ಡೆಲಿವರಿ ನಂತರ ಹಾಲು ಮತ್ತು ಹಾಲಿನಿಂದ ಮಾಡಿದ ಆಹಾರಗಳನ್ನು ಯಥೇಚ್ಛವಾಗಿ ಸೇವಿಸಿ. ನವಜಾತ ಮಗುವಿಗೆ ಕ್ಯಾಲ್ಸಿಯಮ್ ಅಗತ್ಯ. ಡೈರಿ ಉತ್ಪನ್ನಗಳ ಸೇವನೆ ಮಾಡಿದರೆ ಮೂಳೆ ಸ್ಟ್ರಾಂಗ್ ಆಗುತ್ತದೆ. ಇದರಿಂದ ತಾಯಿ ಮಗು ಇಬ್ಬರೂ ಆರೋಗ್ಯದಿಂದ ಇರಬಹುದು.
ನಟ್ಸ್
ಡೆಲಿವರಿ ನಂತರ ನಟ್ಸ್ ಸೇವಿಸಿದರೆ ಕಾರ್ಬೋಹೈಡ್ರೇಟ್, ವಿಟಮಿನ್ ಈ, ಮೆಗ್ನೇಷಿಯಂ, ಸತು, ಕಾಪರ್, ಫೈಬರ್, ವಿಟಮಿನ್ ಬಿ 2, ಕ್ಯಾಲ್ಸಿಯಮ್, ಪೊಟ್ಯಾಶಿಯಂ ಅಂಶ ಸಿಗುತ್ತವೆ. ಇದು ಡೆಲಿವರಿಯ ನಂತರ ಮಹಿಳೆಯರಿಗೆ ಸಾಮಾನ್ಯವಾಗಿ ಅಗತ್ಯವಾಗಿ ಬೇಕು.