ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ; ಮನೆಯಲ್ಲೇ ಇದೆ ಮದ್ದು

ಗರ್ಭಿಣಿಯರಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯ. ಆದರೆ, ಬಹಳಷ್ಟು ಮಹಿಳೆಯರು ಮುಜುಗರದಿಂದ ಈ ಬಗ್ಗೆ ಹೇಳಿಕೊಳ್ಳದೆ ಅನುಭವಿಸುತ್ತಿರುತ್ತಾರೆ. ಇಂಥವರು ಮನೆಯ ಆಹಾರದಲ್ಲಿ ಇದನ್ನು ಶಮನ ಮಾಡಿಕೊಳ್ಳಬಹುದು. 

remedies for constipation during pregnancy

ಪ್ರಗ್ನೆನ್ಸಿ ಎಂದ ಮೇಲೆ ಒಂದಿಲ್ಲಾ ಒಂದು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದಿದ್ದೇ. ಅದರಲ್ಲೂ ಮಲಬದ್ಧತೆ ಸಾಮಾನ್ಯ. ಆದರೆ, ಈ ಹಂತದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಎಂದು ಔಷಧಗಳನ್ನು ತೆಗೆದುಕೊಳ್ಳುವುದು ಅಷ್ಟು ಸೂಕ್ತವಲ್ಲ. ಆದರೆ, ಇದಕ್ಕೆ ಆಹಾರದ ಮೂಲಕವೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. 

ಇಷ್ಟಕ್ಕೂ ಪ್ರಗ್ನೆನ್ಸಿಯಲ್ಲಿ ಮಲಬದ್ಧತೆಗೆ ಕಾರಣಗಳೇನು ಗೊತ್ತಾ?

- ಪ್ರಗ್ನೆನ್ಸಿಯಲ್ಲಿ ಹಾರ್ಮೋನ್‌ಗಳಲ್ಲಿ ಹಲವು ಬದಲಾವಣೆಗಳಾಗುತ್ತವೆ. ಪ್ರೊಜೆಸ್ಟೆರೋನ್ ಹಾರ್ಮೋನ್ ವಿಪರೀತ ಹೆಚ್ಚಾಗಿ ಬಿಡುಗಡೆಯಾಗುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ.

ಪ್ರಸವದ ನಂತರ ಶೇಪ್ ಬರಲು ಹೀಗ್ ಮಾಡಿ....

- ಇನ್ನು ಬಹಳಷ್ಟು ಗರ್ಭಿಣಿಯರಿಗೆ ಪ್ರಗ್ನೆನ್ಸಿಯಲ್ಲಿ ವಾಕರಿಕೆ ಸಾಮಾನ್ಯ. ಆಹಾರ, ನೀರು ಏನು ಕಂಡರೂ ವಾಕರಿಕೆಯಾದರೆ ಯಾವುದನ್ನೂ ಸರಿಯಾಗಿ ತಿನ್ನಲಾಗುವುದಿಲ್ಲ. 

- ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆಂದು ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರ ಊಟ ಉಪಹಾರದಲ್ಲಿ ವ್ಯತ್ಯಾಸವಾಗುತ್ತದೆ. ಇದೂ ಕೂಡಾ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು.

- ಗರ್ಭಿಣಿ ಮಹಿಳೆಯರಿಗೆ ವೈದ್ಯರು ಐರನ್ ಟ್ಯಾಬ್ಲೆಟ್ ತೆಗೆದುಕೊಳ್ಳಲು ಹೇಳುತ್ತಾರೆ. ಇವೂ ಕೂಡಾ ಮಲಬದ್ಧತೆಗೆ ಕಾರಣವಾಗುತ್ತವೆ. 

ಮಲಬದ್ಧತೆ ಸಮಸ್ಯೆಯು ಒಂಥರಾ ಕಿರಿಕಿರಿ ತರುತ್ತದೆ. ಆದರೆ ಇದನ್ನು ಡಯಟ್ ಹಾಗೂ ಲೈಫ್‌ಸ್ಟೈಲ್‌ನಿಂದಲೇ  ಸರಿ ಮಾಡಿಕೊಳ್ಳಬಹುದು. ಇವುಗಳಲ್ಲಿ ಕೆಲವು ನಿಮಗೆ ತಕ್ಷಣ ಪರಿಹಾರ ನೀಡಿದರೆ, ಮತ್ತೆ ಕೆಲವು ನಿಧಾನವಾಗಿ ಮಲಬದ್ಧತೆ ಸಮಸ್ಯೆ ನೀಗಿಸುತ್ತವೆ. 

ಮೊಟ್ಟೆ, ಪಾಲಕ್ ಹೆಚ್ಚಿಸುತ್ತೆ ಬಾಣಂತಿ, ಬಾಲೆ ಝಲಕ್...

1. ನಿಂಬೆಹಣ್ಣು

ಬೆಹಣ್ಣು ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ಜೊತೆಗೆ ಅದು ದೇಹದಿಂದ ಟಾಕ್ಸಿನ್‌ಗಳನ್ನು ಹಾಗೂ ಜೀರ್ಣವಾಗದ ಆಹಾರವನ್ನು ಹೊರಹಾಕಲು ಸಹಕರಿಸುತ್ತದೆ. ಬೆಚ್ಚಗಿನ ನೀರಿಗೆ ನಿಂಬೆಹಣ್ಣು ಸೇರಿಸಿ ಸೇವಿಸಿದರೆ ಮಲಬದ್ಧತೆಯೂ ಸರಿಯಾಗಿತ್ತದೆ. ಪ್ರಗ್ನೆನ್ಸಿಯಲ್ಲಿ ಕಂಡುಬರುವ ಸಂಕಟಕ್ಕೂ ಸ್ವಲ್ಪ ರಿಲೀಫ್ ಸಿಕ್ಕುತ್ತದೆ.

2. ನೀರು

ಸಾಮಾನ್ಯವಾಗಿ ಪ್ರತಿಯೊಬ್ಬರೂ ಹೆಚ್ಚು ನೀರು ಕುಡಿಯಬೇಕು. ಅದರಲ್ಲೂ ಗರ್ಭಿಣಿಯರು ಉಳಿದವರಿಗಿಂತ ಹೆಚ್ಚು ನೀರು ಕುಡಿಯುವುದು ಅಗತ್ಯ. ಕನಿಷ್ಠ ಪಕ್ಷ 10 ಗ್ಲಾಸ್ ನೀರಾದರೂ ಕುಡಿಯಲೇಬೇಕು. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

3. ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣಿನಲ್ಲಿ ಫೈಬರ್ ಹಾಗೂ ವಿಟಮಿನ್ ಸಿ ಅಧಿಕವಾಗಿರುತ್ತದೆ. ಮಲಬದ್ಧತೆಗೆ ಪ್ರಮುಖ ಕಾರಣವೇ ಫೈಬರ್ ಕೊರತೆ. ದಿನಕ್ಕೆ ಕನಿಷ್ಟ 30 ಗ್ರಾಂ ಫೈಬರ್ ದೇಹ ಸೇರಿದರೆ ಮಲಬದ್ಧತೆ ಹತ್ತಿರ ಸುಳಿಯುವುದಿಲ್ಲ. ಕಿತ್ತಳೆಯೊಂದಿಗೆ ದ್ರಾಕ್ಷಿಯನ್ನೂ ಸೇರಿಸಿ ಸೇವಿಸಿ. 

ಪ್ರಗ್ನೆನ್ಸಿ ಕುರಿತ ಈ ನಂಬಿಕೆಗಳು ನಿಜವಲ್ಲ!

4. ಪುನರ್ಪುಳಿ ಶರಬತ್ತು

ಮಲಬದ್ಧತೆಗೆ ಪುನರ್ಪುಳಿ ಶರಬತ್ತು ಬಹಳ ಪರಿಣಾಮಕಾರಿ ಔಷಧ. ದಿನಕ್ಕೆ 5 ಬಾರಿ ಈ ಜ್ಯೂಸ್ ಸೇವಿಸಿ. ಈ ಶರಬತ್ತಿಗೆ ನಿಂಬೆಹಣ್ಣನ್ನು ಕೂಡಾ ಸೇರಿಸಿಕೊಳ್ಳಬಹುದು. 

5. ಇಸ್ಪಾಗುಳ/ ಇಸಬ್‌ಗೋಲ್

ಭಾರತದಾದ್ಯಂತ ಮಲಬದ್ಧತೆ ಸಮಸ್ಯೆಗೆ ಇಸಬ್‌ಗೋಲ್ ಜನಪ್ರಿಯ ಪರಿಹಾರ. ಇಸಬ್‌ಗೋಲನ್ನು ನೀರಿನಲ್ಲಿ ನೆನೆಸಿ ಕೆಲ ಸಮಯದ ಬಳಿಕ ನಿಂಬೆರಸ, ಉಪ್ಪು ಸೇರಿಸಿ ಜ್ಯೂಸ್ ಮಾಡಿಕೊಂಡು ಕುಡಿಯಿರಿ. ಇದು ಗಟ್ಟಿಯಾದ ಮಲವನ್ನು ಮೃದುಗೊಳಿಸುತ್ತದೆ. ಆದರೆ, ನೀವು ಬಿಪಿ ಅಥವಾ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿದ್ದರೆ ಇಸಬ್‌ಗೋಲ್ ಸೇವನೆ ಬೇಡ. 

6. ಮಸಾಜ್

ಪ್ರಗ್ನೆನ್ಸಿ ಆರಂಭದಲ್ಲಿ ಮಲಬದ್ಧತೆ ತಪ್ಪಿಸಿಕೊಳ್ಳಲಾಗದ ಸಮಸ್ಯೆ. ಹಾಗಂತ ಅದನ್ನು ಅನುಭವಿಸಿಕೊಂಡು ನೆಗ್ಲೆಕ್ಟ್ ಮಾಡಿದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಕಷ್ಟವಾಗಬಹುದು. ಹೊಟ್ಟೆಯನ್ನು ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡುವುದರಿಂದ ಸ್ವಲ್ಪ ರಿಲೀಫ್ ಸಿಗಬಹುದು. ಮಸಾಜನ್ನು ಕ್ಲಾಕ್‌ವೈಸ್ ಆಗಿ ಮಾಡಿ. ಪ್ಲಾಸೆಂಟಾ ಕೆಳಗಿದೆ ಎಂದರೆ ಮಸಾಜ್ ಬೇಡ. 

7. ರಿಫ್ಲೆಕ್ಸಾಲಜಿ

ಹಲವಾರು ಸಮಸ್ಯೆಗಳಿಗೆ ರಿಫ್ಲೆಕ್ಸಾಲಜಿ ಸುಲಭ ಪರಿಹಾರ ನೀಡುತ್ತದೆ. ಕೈ ಹಾಗೂ ಕಾಲಿನ ಕೆಲ ನಿರ್ದಿಷ್ಟ ಪಾಯಿಂಟ್‌ಗಳನ್ನು ಒತ್ತುವುದರಿಂದ ಸಮಸ್ಯೆ ನೀಗಿಸಬಹುದು. ಅಂಗಾಲಿನ ಮೇಲ್ಭಾಗ ಹಾಗೂ ಅಂಗೈಯ ಮಧ್ಯಭಾಗ ಹಾಗೂ ಸುತ್ತಲೂ ಒತ್ತಿಕೊಳ್ಳುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇಲ್ಲವೇ ಬಾಟಲೊಂದನ್ನು ಕೆಳಗೆ ಹಾಕಿಕೊಂಡು ಅದನ್ನು ಕಾಲಿನಲ್ಲಿ ಒತ್ತಿ ಹಿಂದೆ ಮುಂದೆ ಮಾಡುವುದರಿಂದಲೂ ಕಾಲಿಗೆ ಪ್ರೆಶರ್ ಸಿಕ್ಕುತ್ತದೆ. 

ಮನೆಮದ್ದುಗಳಿಗೆ ಮಲಬದ್ಧತೆ ನಿವಾರಣೆಯಾಗಲಿಲ್ಲವೆಂದರೆ ಮಾತ್ರ ವೈದ್ಯರನ್ನು ಕಾಣಲು ತಡ ಮಾಡಬೇಡಿ. 

Latest Videos
Follow Us:
Download App:
  • android
  • ios