kitchen tips : ಮನೆಯಲ್ಲಿ ಸಿಲಿಂಡರ್‌ ಖಾಲಿಯಾಗಿದೆ ಅನ್ನೋ ಟೆನ್ಷನ್‌ ಬೇಡ. ಮನೆಯಲ್ಲಿ  ಇಂಡಕ್ಷನ್‌ ಕುಕ್‌ಟಾಪ್‌ ಇದ್ರೂ ನೀವು ಚಪಾತಿ ತಯಾರಿಸ್ಬಹುದು. ಸ್ಮಾಟ್‌ ಅಡುಗೆ ಟಿಪ್ಸ್‌ ಇಲ್ಲಿದೆ. 

ಸಿಲಿಂಡರ್ ಸಮಸ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಿದೆ. ಕ್ಯೂನಲ್ಲಿ ನಿಂತ್ರೂ ಸಿಲಿಂಡರ್ ಸಿಗ್ತಿಲ್ಲ. ಒಂದ್ಕಡೆ ಅನೇಕ ಹೊಟೇಲ್ ಬಾಗಿಲು ಮುಚ್ಚಿದ್ರೆ ಇನ್ನೊಂದ್ಕಡೆ ಜನಸಾಮಾನ್ಯರು ಮನೆಯಲ್ಲಿ ಇರೋ ಅಲ್ಪಸ್ವಲ್ಪ ಸಿಲಿಂಡರ್ ಹೇಗೆ ಕಾಪಾಡಿಕೊಳ್ಳೋದು ಎನ್ನುವ ಟೆನ್ಷನ್ ನಲ್ಲಿದ್ದಾರೆ. ಗ್ಯಾಸ್ ಬಳಸದೆ ಮಾಡೋ ಅಡುಗೆ ಮೊರೆ ಹೋಗ್ತಿದ್ದಾರೆ. ಈ ಎಲ್ಲದರ ಮಧ್ಯೆ ಇಂಡಕ್ಷನ್ ಗೆ ಬೇಡಿಕೆ ಹೆಚ್ಚಾಗಿದೆ. ನಿಮ್ಮ ಮನೆಯಲ್ಲೂ ಇಂಡೆಕ್ಷನ್ ಇದ್ರೆ ಅದ್ರಲ್ಲೇ ಚಪಾತಿ ಮಾಡ್ಬಹುದು. ಹೇಗೆ ?

ಇಂಡೆಕ್ಷನ್ ನಲ್ಲಿ ಸುಲಭವಾಗಿ ಮಾಡಿ ರೊಟ್ಟಿ

ಇಂಡಕ್ಷನ್ ಕುಕ್ಟಾಪ್ ನಲ್ಲಿ ನೀವು ಸುಲಭವಾಗಿ ಚಪಾತಿ ಮಾಡ್ಬುದು. ಇಂಡೆಕ್ಷನ್ ನಲ್ಲಿ ಉರಿ ಇರೋದಿಲ್ಲ. ಅದು ಪಾತ್ರೆಯನ್ನು ಬಿಸಿ ಮಾಡಿ ಆಹಾರವನ್ನು ಬಿಸಿ ಮಾಡುತ್ತೆ. ಹಾಗಾಗಿ ಇದ್ರಲ್ಲಿ ಮಾಡುವ ಚಪಾತಿ ಗಟ್ಟಿಯಾಗುತ್ತೆ ಅಂತ ಅನೇಕರು ನಂಬ್ತಾರೆ. ನಿಮ್ಮ ನಂಬಿಕೆ ಸುಳ್ಳು. ನೀವು ಇಂಡೆಕ್ಷನ್ ಕುಕ್ ಟಾಪ್ ನಲ್ಲಿ ಆರಾಮವಾಗಿ ಚಪಾತಿ ಮಾಡ್ಬಹುದು. ಇದಕ್ಕೆ ನೀವು ಹೀಟ್ ಸೆಟ್ ಮಾಡೋದು ಮುಖ್ಯ.

ಚಪಾತಿಯನ್ನು ಆರಂಭದಿಂದಲೇ ಹೆಚ್ಚಿನ ಉರಿಯಲ್ಲಿ ಬೇಯಿಸಿದ್ರೆ ಅದ್ರ ಹೊರ ಭಾಗ ಉರಿಯುತ್ತದೆಮ ಒಳ ಭಾಗ ಹಾಗೆ ಉಳಿಯುತ್ತದೆ. ಹಾಗಾಗಿ ನೀವು ಹೀಟ್ ಹೇಗೆ ಸೆಟ್ ಮಾಡ್ತೀರಾ ಎಂಬುದನ್ನು ಗಮನಿಸಬೇಕು. ಇದ್ರ ಜೊತೆ ರೊಟ್ಟಿ ಹಿಟ್ಟು ಕೂಡ ಇಂಪಾರ್ಟೆಂಟ್.

 ಆ ಸೀಕ್ರೆಟ್‌ ಪದಾರ್ಥದಿಂದಲೇ, ತಟ್ಟೆ ಇಡ್ಲಿ ಬಾಯಲ್ಲಿಟ್ರೆ ಬೆಣ್ಣೆಯಂತೆ ಕರಗುತ್ತೆ!

ಹೊಟೇಲ್ ನಲ್ಲಿ ತಯಾರಿಸಿದಂತೆ ಮೃದುವಾದ ರೊಟ್ಟಿ ಅಥವ ಚಪಾತಿ ತಯಾರಿಸಲು ಹಿಟ್ಟನ್ನು ಹದವಾಗಿ ಮಿಕ್ಸ್ ಮಾಡಬೇಕು. ಒಂದು ಬಟ್ಟಲಿಗೆ 2 ಕಪ್ ಗೋಧಿ ಹಿಟ್ಟನ್ನು ಹಾಕಿ, ಅದಕ್ಕೆ ಸ್ವಲ್ಪ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಬೇಕು. ಚಪಾತಿ ಅತಿ ಗಟ್ಟಿ ಇಲ್ಲವೇ ಅತಿ ಮೆದುವಾಗದಂತೆ ನೋಡಿಕೊಳ್ಳಿ. ಹಿಟ್ಟಿಗೆ ನೀರು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ ನಂತ್ರ ಅದನ್ನು 5-10 ನಿಮಿಷಗಳ ಕಾಲ ಹಾಗೆ ಬಿಡಿ. ಹಿಟ್ಟು ಮಿಕ್ಸ್ ಮಾಡಿದ ನಂತ್ರ ಅದನ್ನು ಹಾಗೆ ಕೆಲಕಾಲ ಬಿಡುವುದು ಬಹಳ ಮುಖ್ಯ. ನಂತ್ರ ಹಿಟ್ಟಿನ ಸಣ್ಣ ಉಂಡೆ ಮಾಡಿ ಲಟ್ಟಿಸಿ. ಎಲ್ಲ ಕಡೆ ಅದು ಸರಿಯಾಗಿ ಹರಡುವಂತೆ ನೋಡಿಕೊಳ್ಳಿ. ಒಂದು ಕಡೆ ದಪ್ಪವಾಗಿದ್ದರೆ ಇಂಡಕ್ಷನ್ ನಲ್ಲಿ ಸರಿಯಾಗಿ ಬೇಯುವುದಿಲ್ಲ.

ನೀವು ಇಂಡೆಕ್ಷನ್ ನಲ್ಲಿ ನೇರವಾಗಿ ಬೇಯಿಸಬಹುದು. ಮೊದಲು ಇಂಡೆಕ್ಷನ್ ಪ್ಯಾನ್ ಬಿಸಿ ಮಾಡಿ. 160-180°C ಅಥವಾ 600-800W ಗೆ ಮೊದಲೇ ಬಿಸಿ ಮಾಡಿ. ಇಂಡೆಕ್ಷನ್ ಬಿಸಿ ಮಾಡದೆ ಹಸಿ ಚಪಾತಿಯನ್ನು ಇಡಬೇಡಿ. ಇದ್ರಿಂದ ಅದು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂಡಕ್ಷನ್ ನಲ್ಲಿ ಹಾಕಿದ ಚಪಾತಿ ಸ್ವಲ್ಪ ಬೇಯುತ್ತಿದ್ದಂತೆ ಅದನ್ನು ತಿರುವಿಹಾಕಿ. ಬಿಸಿಯನ್ನು ನೀವು ಸುಮಾರು 180°C ಗೆ ಇರಿಸಿ. ಎರಡೂ ಬದಿಗಳು ಲಘುವಾಗಿ ಕಂದು ಬಣ್ಣಕ್ಕೆ ಬಂದ ನಂತ್ರ ತಾಪಮಾನವನ್ನು ಸ್ವಲ್ಪ 200-220°C ಗೆ ಹೆಚ್ಚಿಸಿ. ನಂತ್ರ ಬಟ್ಟೆಯಿಂದ ಲಘುವಾಗಿ ರೊಟ್ಟಿಯನ್ನು ಒತ್ತಿ.

ಬೇಸಿಗೆಯಲ್ಲಿ ಗಿಡಗಳು ಬಾಡದೆ, ರಾಶಿ ರಾಶಿ ಹೂವು ಬಿಡಲು ಈ ಪದಾರ್ಥ

ನೇರ ಶಾಖಕ್ಕೆ ಒಡ್ಡಿಕೊಂಡಾಗ ಮಾತ್ರ ರೊಟ್ಟಿ ಉಬ್ಬುತ್ತೆ ಅಂತ ನಾವು ನಂಬ್ತೇವೆ. ಆದ್ರೆ ಇಂಡಕ್ಷನ್ ಕುಕ್ಕರ್ ಬಳಸಿ ಕೂಡ ನೀವು ರೊಟ್ಟ ಉಬ್ಬಿಸ್ಬಹುದು. ರೊಟ್ಟಿ ಉಬ್ಬಿ ಮೇಲೆ ಬರ್ತಿದ್ದಂತೆ ಅದನ್ನು ತೆಗೆದು, ತುಪ್ಪ ಸವರಿ ಸ್ವಚ್ಛವಾದ ಬಟ್ಟೆ ಅಥವಾ ಬಾಕ್ಸ್ ನಲ್ಲಿ ಹಾಕಿಡಿ. ಪ್ಯಾನ್ ಬಳಸ್ತಿದ್ದರೆ ಇಂಡಕ್ಷನ್ ಕುಕ್ಕರ್ ಗೆ ದಪ್ಪ ಪ್ಯಾನ್ ಬಳಸಿ. ತೆಳುವಾದ ಪ್ಯಾನ್ ನಲ್ಲಿ ರೊಟ್ಟಿ ಬೇಗ ಕಪ್ಪಾಗುತ್ತದೆ.