ಒಂದು ಕಡೆ ಸಾಲ, ಇನ್ನೊಂದು ಕಡೆ ಕೈಕೊಟ್ಟ ಮಳೆ. ಕಣ್ಮುಂದೆ ಒಣಗಿ ನಿಂತ ಬೆಳೆ.. ಇಂಥ ಪರಿಸ್ಥಿತಿಯಲ್ಲಿ ಸಾಲಗಾರರ ಸಾಲ ಹೇಗೆ ತೀರಿಸಲಿ ಎಂದು ಮನನೊಂದು ದುಡುಕಿನ ನಿರ್ಧಾರಕ್ಕೆ ಬಂದು ಯಾದಗಿರಿ ಜಿಲ್ಲೆಯ ಅನ್ನದಾತ ದುಡುಕಿನ ನಿರ್ಧಾರದಿಂದ ಜೀವ ಕಳೆದುಕೊಂಡ ಘಟನೆ ನಡೆದಿದೆ.

ಯಾದಗಿರಿ(ಸೆ.8): ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿ ರೈತರು ಸಂಕಷ್ಟಪಡುವಂತಾಗಿದೆ ಒಂದು ಬೆಳೆಯುತ್ತಿರುವ ಕೃಷಿ ಸಾಲ, ಮತ್ತೊಂದೆ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿರುವುದು ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅದರ ಪರಿಣಾಮವಾಗಿ ಅನ್ನದಾತರು ಅತಂಕದಿಂದ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಚಿಂತೆಗೀಡುಮಾಡಿದೆ.

ಸಾಲಭಾದೆಗೆ ಜೀವ ಕಳ್ಕೊಂಡ ಯಾದಗಿರಿ ಅನ್ನದಾತ

ಕೃಷಿ ಸಾಲ ತೀರಿಸಲಾಗದೆ ಯಾದಗಿರಿ ರೈತನೋರ್ವ ದುಡುಕಿನ ನಿರ್ಧಾರದಿಂದ ಜೀವ ಕಳೆದುಕೊಂಡ ಘಟನೆ ವಡಿಗೇರಾ ತಾಲೂಕಿನ ಕಾಂಡಂಗೇರಾ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಆಲೂರು(41) ಮೃತ ದುರ್ದೈವಿ.

ಒಂದು ಕಡೆ ಸಾಲ, ಕೈಕೊಟ್ಟ ಮಳೆ, ಕಣ್ಮುಂದೆ ಒಣಗಿನಿಂತ ಬೆಳೆ..!

ಮೃತ ರೈತ ಮಲ್ಲಪ್ಪ ಆಲೂರು ಸುಮಾರು 50 ಎಕರೆಗೂ ಅಧಿಕ ಪ್ರಮಾಣದ ಭೂಮಿ ಲೀಜ್ ಪಡೆದು ಬೆಳೆ ಬೆಳೆದಿದ್ದ. ಅದಕ್ಕಾಗಿ ಬ್ಯಾಂಕ್ ನಲ್ಲಿ 4 ಲಕ್ಷ ಸಾಲ ಮಾಡಿಕೊಂಡಿದ್ದರೆ, 15 ಲಕ್ಷ ಕೈಗಡ ಸಾಲ ಮಾಡಿಕೊಂಡಿದ್ದನೆಂದು ಹೇಳಲಾಗಿದೆ. ಆದರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆದಿದ್ದ ಬೆಳೆ ಎಲ್ಲವೂ ಒಣಗಿ ಹೋದಾಗ ದಿಕ್ಕುತೋಚದಂತಾಗಿದೆ. ಒಂದು ಕಡೆ ಸಾಲಗಾರರು, ಇನ್ನೊಂದು ಕಡೆ ಕೈಕೊಟ್ಟ ಮಳೆ. ಕಣ್ಮುಂದೆ ಒಣಗಿ ನಿಂತ ಬೆಳೆ.. ಇಂಥ ಪರಿಸ್ಥಿತಿಯಲ್ಲಿ ಸಾಲಗಾರರ ಸಾಲ ಹೇಗೆ ತೀರಿಸಲಿ ಎಂದು ಮನನೊಂದು ದುಡುಕಿನ ನಿರ್ಧಾರಕ್ಕೆ ಬಂದು ಅನ್ನದಾತ ಜೀವ ಕಳೆದುಕೊಂಡಿದ್ದಾರೆ.

ವಡಿಗೇರಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ರಾಜ್ಯದಲ್ಲಿ ಬರಗಾಲದಿಂದ ರೈತರು ಪರಿಸ್ಥಿತಿ ಹೇಗೆ ಎಂಬುದು ಇದು ತಾಜಾ ಉದಾಹರಣೆಯಾಗಿದೆ..