ತುಳುನಾಡಿನ ಜನರ ಕಳೆದ ಹಲವು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಫಲ ಸಿಕ್ಕಿದೆ. ತುಳು ಇದೀಗ ಎರಡನೇ ಭಾಷೆಯಾಗಿ ಮಾಡಲು ತೀರ್ಮಾನ ಮಾಡಲಾಗಿದೆ. ಇಷ್ಟೇ ಅಲ್ಲ ದಕ್ಷಿಣ ಕನ್ನಡ ಹೆಸರು ಬದಲಾವಣೆ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಂಗಳೂರು (ಸೆ.18) ಕರ್ನಾಟಕದಲ್ಲಿ ತುಳು ಭಾಷೆ ಸ್ಥಾನಮಾನಕ್ಕಾಗಿ ಕಳೆದ ಹಲವು ದಶಕಗಳಿಂದ ಹೋರಾಟ ನಡೆದಿದೆ. ಕೊನೆಗೂ ತುಳು ಭಾಷೆಗೆ ಸ್ಥಾನ ಮಾನ ಸಿಕ್ಕಿದೆ. ತುಳುವನ್ನು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಮಾಡಲು ತೀರ್ಮಾನ ಮಾಡಲಾಗಿದೆ. ಈ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಈ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ತುಳು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಹೊರಹೊಮ್ಮಲಿದೆ.

ಕರ್ನಾಟಕ ರಾಜ್ಯದಲ್ಲಿ ಉಡುಪಿ, ದಶ್ರಿಣ ಕನ್ನಡ ಭಾಗದಲ್ಲಿ ತುಳು ಭಾಷೆಗೆ ಸ್ಥಾನ ಮಾನ ಘೋಷಣೆ ಹಿಂದೆಯೇ ಆಗಬೇಕಿತ್ತು. ಆದರೆ ಹಿಂದಿನವರು ಯಾಕೆ ಮಾಡಲಿಲ್ಲ, ಏನಾಯಿತು ಎಂದು ನಾವು ಕೇಳುವುದಿಲ್ಲ. ನಾವು ಬದಕಿನ ಮೇಲೆ ರಾಜಕಾರಣ ಮಾಡಬೇಕು, ಭಾವನೆ ಮೇಲೆ ಅಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಂಗಳೂರಲ್ಲಿ ಸಂಪುಟ ಸಭೆ ಮಾಡುತ್ತೇವೆ. ಈ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಮಾತ್ರವಲ್ಲ, ಸಮಗ್ರ ಕರ್ನಾಟಕ ಅಭಿವೃದ್ಧಿ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆ

ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆ ಮಾಡಬೇಕು ಅನ್ನೋ ಕುರಿತು ಹಲವು ಚರ್ಚೆಗಳು, ಹೋರಾಟಗಳು ನಡೆದಿದೆ. ಈ ಕುರಿತು ಜನರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡಲು ಡಿಕೆ ಶಿವಕುಮಾರ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹೆಸರನ್ನು ಮಂಗಳೂರು ಜಿಲ್ಲೆಯಾಗಿ ಬದಲಾವಣೆ ಮಾಡಬೇಕು ಎಂಬ ಕೂಗಿಗೆ ಡಿಕೆ ಶಿವಕುಮಾರ್ ಸ್ಪಂದಿಸಿದ್ದಾರೆ.

ಕರಾವಳಿಗೆ 32 ಸಾವಿರ ಕೋಟಿ ರೂಪಾಯಿ ಅನುದಾನ

ಕರಾವಳಿಗೆ ಬರೋಬ್ಬರಿ 32 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಕರಾವಳಿ ಪ್ರವಾಸೋದ್ಯಮ ಸೇರಿದಂತೆ ಸಮಗ್ರ ಅಭಿವದ್ಧಿ ಮಾಡಲಾಗುತ್ತಿದೆ. ಮೆಲೆನಾಡು ಮತ್ತು ಕರಾವಳಿ ಒಳಗೊಂಡಂತೆ ಹೊಸ ಟೂರಿಸಂ ಪಾಲಿಸಿ ಜಾರಿಗೆ ತರಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬಂದರುಗಳ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುತ್ತಿದೆ. ಗುರುಪುರ ನದಿ ದ್ವೀಪಗಳನ್ನು ಪಿಪಿಪಿ ಮಾಡೆಲ್‌ನಲ್ಲಿ ಅಭಿವೃದ್ಧಿ ಪಡಿಸಲಾಗಿದೆ. 125 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಉ ಕನ್ನಡ ಜಿಲ್ಲೆಯ ಕಾರವಾರ ಭಟ್ಕಳ ಅಂಕೋಲ ತಾಲೂಕುಗಳಲ್ಲಿ ಏಳು ದ್ವೀಪಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲು 307 ಕೋಟಿ ಅನುದಾನ ನೀಡಲಾಗಿದೆ. ಕರ್ನಾಟಕ ಒಳನಾಡಿನ ಹಡಗು ಹಾಗೂ ಮೇಲ್ಮನೆ ನಿಯಮಗಳಲ್ಲಿ ಕೆಲವು ಆಕ್ಷೇಪಾರ್ಹ ವಿಚಾರಗಳನ್ನು ತೆಗೆಯಲು ತೀರ್ಮಾನ ಮಾಡಲಾಗಿದೆ. ಮಂಗಳೂರಿನ ಲೈಟ್ ಹೌಸ್ ಸುತ್ತ ಪ್ರವಾಸೋದ್ಯಮ ಮತ್ತು ಆತಿಥ್ಯ ಮೂಲಸೌಕರ್ಯ ಗಳ ಅಭಿವೃದ್ಧಿ ಗಾಗಿ 60 ಕೋಟಿ ಅನುದಾನ ನೀಡಲಾಗಿದೆ.