ಬೆಂಗಳೂರು[ಡಿ.21]: ಜೀವನ್ಮರಣ ಹೋರಾಟದಲ್ಲಿರುವ ವ್ಯಕ್ತಿಗಳ ನೆರವಿಗೆ ಧಾವಿಸಿ, ಅಸಾಮಾನ್ಯ ಸಾಹಸ ಮೆರೆದವರ ಶೌರ್ಯವನ್ನು ಗೌರವಿಸಲಿಕ್ಕೆಂದೇ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಮಾಧ್ಯಮ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಶೌರ್ಯ ಪ್ರಶಸ್ತಿ ನೀಡುತ್ತಾ ಬಂದಿದೆ.

ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 21, ಶನಿವಾರ ಸಂಜೆ ಬೆಂಗಳೂರಲ್ಲಿ ನಡೆಯಲಿದೆ. ತಮ್ಮ ಪ್ರಾಣ ಲೆಕ್ಕಿಸದೆ ಮತ್ತೊಬ್ಬರ ಪ್ರಾಣ ರಕ್ಷಣೆಗೆ ಹೋರಾಡಿದ ಮಹನೀಯರನ್ನು ಶೌರ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತಿದೆ. ಪರೋಪಕಾರಕ್ಕಾಗಿಯೇ ಈ ದೇಹ ಇರುವುದು ಎಂಬುದನ್ನು ಸಾಕಾರಗೊಳಿಸುವ ಕರ್ನಾಟಕದ 10 ಶೌರ್ಯವಂತರನ್ನು ತಮ್ಮ ತಮ್ಮ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ತೀರ್ಪುಗಾರರ ತಂಡ ಆಯ್ಕೆ ಮಾಡಿರುತ್ತದೆ.

ಅತಿಥಿಗಳಾಗಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಸ್. ಭಾಸ್ಕರ ರಾವ್, ನಟ ಧ್ರುವ ಸರ್ಜಾ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭಾಗವಹಿಸಲಿದ್ದಾರೆ. ಈ ಅತಿಥಿಗಳ ಕುರಿತಾದ ಮಾಹಿತಿ ಹೀಗಿದೆ.

ಪ್ರಾಣ ಒತ್ತೆಯಿಟ್ಟು ಇನ್ನೊಬ್ಬರ ಜೀವ ಕಾಪಾಡಿದವರಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ

ಜಗದೀಶ್ ಶೆಟ್ಟರ್

ಇದು ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ಹೆಸರು, ವ್ಯಕ್ತಿತ್ವ. ಕೈಗಾರಿಕಾ ಸಚಿವರಾಗಿರುವ ಜಗದೀಶ್ ಶಿವಪ್ಪ ಶೆಟ್ಟರ್ ಹುಬ್ಬಳ್ಳಿಯ ಖಡಕ್ ರಾಜಕಾರಣಿ. 1990ರಲ್ಲಿ ಸಕ್ರಿಯ ರಾಜಕೀಯ ಆರಂಭಿಸಿದ ಶೆಟ್ಟರ್ ವಿಪಕ್ಷನಾಯಕರಾಗಿ ಹೆಸರಾದವರು. ಕರುನಾಡಿನ 27ನೇ ಮುಖ್ಯಮಂತ್ರಿಯಾಗಿ ರಾಷ್ಟ್ರದ ಗಮನ ಸೆಳೆದವ್ರು. ಕಂದಾಯ ಸಚಿವರಾಗಿ ಗಮನಾರ್ಹ ಕೆಲಸ ಮಾಡಿದ ಶೆಟ್ಟರ್, ಸ್ಪೀಕರ್ ಆಗಿಯೂ ಜನಪ್ರಿಯವಾಗಿ ಕೆಲಸ ಮಾಡಿದವ್ರು. 

"

ಪ್ರಸ್ತುತ ಬೃಹತ್ ಕೈಗಾರಿಕಾ ಸಚಿವರಾಗಿರುವ ಶೆಟ್ಟರ್, ಬೆಂಗಳೂರಿಂದ ಆಚಗೆ ಕೈಗಾರಿಕೆಗಳನ್ನು ಸ್ಥಾಪಿಸಿ ಎಲ್ಲ ಜಿಲ್ಲೆಗಳಲ್ಲೂ ಉದ್ಯೋಗ, ಉದ್ಯಮ ಸೃಷ್ಟಿಯ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. 

ಧ್ರುವ ಸರ್ಜಾ

ಕನ್ನಡದ ಖ್ಯಾತ ಖಳ ನಟ ಶಕ್ತಿ ಪ್ರಸಾದ್ ಅವ್ರ ಮೊಮ್ಮಗ. ಬಹು ಭಾಷಾ ಸೂಪರ್ ಸ್ಟಾರ್ ಅರ್ಜುನ್ ಸರ್ಜಾ ಅವರ ಸಹೋದರಿಯ ಮಗ. ಅದ್ದೂರಿ ಚಿತ್ರದ ಮೂಲಕ ಕನ್ನಡ ಬೆಳ್ಳಿ ತೆರಗೆ ಎಂಟ್ರಿ ಕೊಟ್ಟ ಧ್ರುವ ಸರ್ಜಾ ಸ್ಯಾಂಡಲ್ವುಡ್ಲ್ಲಿ ಧೂಳೆಬ್ಬಿಸಿದ್ದರು. ನಂತರ ಬಹದ್ದೂರ್, ಭರ್ಜರಿ ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಕೊಟ್ಟ ಧ್ರುವ ಸರ್ಜಾ, ಈಗ ನಂದ ಕಿಶೋರ್ ನಿರ್ದೇಶನದಲ್ಲಿ ಅತಿ ದೊಡ್ಡ ಬಜೆಟ್‌ಲ್ಲಿ ಪೊಗರು ಸಿನಿಮಾ ಮಾಡಿದ್ದಾರೆ.

"

ಸಿನಿಮಾಗಳಲ್ಲಿ ಸಖತ್ ಸೌಂಡ್ ಮಾಡಿ ಕನ್ನಡಿಗರಿಂದ ಆಕ್ಷನ್ ಪ್ರಿನ್ಸ್ ಅನ್ನೋ ಬಿರುದು ಪಡೆದಿದ್ದಾರೆ. ಮೊನ್ನೆಯಷ್ಟೇ ತಮ್ಮ ಬಾಲ್ಯದ ಗೆಳತಿಯೊಂದಿಗೆ ಹೊಸ ಬದುಕಿಗೆ ಹೆಜ್ಜೆ ಹಾಕಿದ ಧೃವ ಸರ್ಜಾ ರವರಿಗೆ ಯಶಸ್ಸೆಂಬುದು ನಿರಂತರವಾಗಿ ಅವರ ಹೆಗಲೇರಲಿ.

ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ಭಾಸ್ಕರ್ ರಾವ್ ಅಂದ್ರೆ ಖಡಕ್ ಪೊಲೀಸ್ ಗಿರಿ ಜೊತೆಗೆ ಸೌಜನ್ಯತೆ, ಮಾನವೀಯತೆ ಮುಖ ಕಣ್ಮುಂದೆ ಬರುತ್ತೆ. ಇವರು ಹುಟ್ಟಿ ಬೆಳೆದದ್ದು ಬೆಂಗಳೂರೇ ಆದ್ರೂ 1990ರಲ್ಲಿ ಐಪಿಎಸ್ ಅಧಿಕಾರಿಯಾಗಿ ಮಂಡ್ಯದಲ್ಲಿ ವೃತ್ತಿ ಜೀವನ ಆರಂಭಿಸಿದ್ರು. ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ,  ಕೊಡಗು, ಬೆಂಗಳೂರು ಗ್ರಾಮಾಂತರದಲ್ಲಿ ಸೇವೆ ಸಲ್ಲಿಸಿದ್ದಾರೆ. 

"

ಕೆಎಸ್ಆರ್ಪಿಯಲ್ಲಿ ಎಡಿಜಿಪಿಯಾಗಿ ಅತಿ ದೊಡ್ಡ ಹೆಜ್ಜೆ ಗುರುತು ಮೂಡಿಸಿದವ್ರು. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಭಾಸ್ಕರ್ರಾವ್, ಡ್ರಗ್ಸ್ ದಂಧೆಗೆ ಫುಲ್ಸ್ಟಾಪ್ ಹಾಕಲು ಮುಂದಾಗಿದ್ದಾರೆ. ರೌಡಿಗಳಿಗೆ ಚುರುಕು ಮುಟ್ಟಿಸಿದ್ದಾರೆ. ಮಹಿಳೆಯರ ಸುರಕ್ಷತೆಗಾಗಿ ಸುರಕ್ಷಾ ಆಪ್ ತಂದು ದೇಶಕ್ಕೆ ಮಾದರಿಯಾಗಿದ್ದಾರೆ. 

ಅಣ್ಣಾಮಲೈ

ಕರ್ನಾಟಕದ  ‘ಸಿಂಗಂ’ ಅಂದ್ರೆ ನೆನಪಾಗೋದು ಅಣ್ಣಾಮಲೈ. 2011ರ ಬ್ಯಾಚ್ನ ಐಪಿಎಸ್ ಅಧಿಕಾರಿ. ಇವರು. ಕಾರ್ಕಳ ಉಪವಿಭಾಗದ ಎಎಸ್ಪಿಯಾಗಿ ವೃತ್ತಿ ಆರಂಭಿಸಿದ್ರು.. 2013ರಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಾಗೂ ಚಿಕ್ಕಮಗಳೂರು ಎಸ್ಪಿಯಾಗಿ ಜನಪ್ರಿಯರಾದ್ರು. ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಜಿಲ್ಲೆಯಲ್ಲಿ ಖಡಕ್ ಅಧಿಕಾರಿ ಎಂದು ಹೆಸರು ಪಡೆದ ಅಣ್ಣಾಮಲೈ ಸಾರ್ವಜನಿಕರ ಪಾಲಿಗೆ ‘ಸಿಂಗಂ’ ಆಗಿದ್ದವರು. 

"

ಅಣ್ಣಾಮಲೈ ಬೆಂಗಳೂರಿಗೆ ಡಿಸಿಪಿಯಾಗಿ ವರ್ಗಾವಣೆ ಆದ ನಂತರ ಸಿಟಿಯಲ್ಲಿ ಮಾಡಿದ ಕೆಲಸ ಬಹಳ. ಅಣ್ಣಾಮಲೈ ಮೂಲತಃ ತಮಿಳುನಾಡಿನ ಕೊಯಮತ್ತೂರಿನವರು. ಕೆಲವೇ ತಿಂಗಳ ಹಿಂದೆ ಅಣ್ಣಾಮಲೈ ಸರ್ಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸದ್ಯ ಸಾಮಾಜಿಕ ಮತ್ತು ರಾಜಕೀಯದತ್ತ ವಾಲುವ ಯೊಚನೆಯಲ್ಲಿರುವ ಅಣ್ಣಾಮಲೈ ನಿರುದ್ಯೋಗ ನಿವಾರಣೆಗೆ ದೊಡ್ಡಕನಸು ಇಟ್ಟುಕೊಂಡಿದ್ದಾರೆ.