ಪ್ರಾಣ ಒತ್ತೆಯಿಟ್ಟು ಇನ್ನೊಬ್ಬರ ಜೀವ ಕಾಪಾಡಿದವರಿಗೆ ಕನ್ನಡಪ್ರಭ-ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ

ತಮ್ಮ ಪ್ರಾಣ ಲೆಕ್ಕಿಸದೆ ಹೋರಾಡಿ ಇನ್ನೊಬ್ಬರ ಪ್ರಾಣ ರಕ್ಷಣೆ ಮಾಡಿದವರಿಗೆ ಶೌರ್ಯ ಪ್ರಶಸ್ತಿ/  ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ವತಿಯಿಂದ ಸನ್ಮಾನ/ ಡಿಸೆಂಬರ್ 21, ಶನಿವಾರ ಪ್ರಶಸ್ತಿ ಪ್ರದಾನ

Suvarna News and Kannada Prabha Presents Shourya Prashasti Bravery Awards

ಬೆಂಗಳೂರು[ಡಿ. 20] ಜೀವನ್ಮರಣ ಹೋರಾಟದಲ್ಲಿರುವ ವ್ಯಕ್ತಿಗಳ ನೆರವಿಗೆ ಧಾವಿಸಿ, ಅಸಾಮಾನ್ಯ ಸಾಹಸ ಮೆರೆದವರ ಶೌರ್ಯವನ್ನು ಗೌರವಿಸಲಿಕ್ಕೆಂದೇ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಮಾಧ್ಯಮ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಶೌರ್ಯ ಪ್ರಶಸ್ತಿ ನೀಡುತ್ತಾ ಬಂದಿದೆ.

ಸುವರ್ಣ ನ್ಯೂಸ್ - ಕನ್ನಡ ಪ್ರಭ ಸಂಸ್ಥೆಯು ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿಯನ್ನು [CSR] ಆದ್ಯತೆ ಮೇರೆ ನಿಭಾಯಿಸಿಕೊಂಡು ಬಂದಿದೆ. 

ಪ್ರತೀ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಅಸಮಾನ್ಯ ಕನ್ನಡಿಗ ಪ್ರಶಸ್ತಿ, ಮಹಿಳೆಯರಿಗೆಂದೆ ಮಹಿಳಾ ಸಾಧಕಿ ಪ್ರಶಸ್ತಿ, ಔದ್ಯಮಿಕ ರಂಗದಲ್ಲಿ ಸಾಧನೆ ಮಾಡಿರುವವರಿಗೆ ಉಜ್ವಲ ಉದ್ಯಮಿ ಪ್ರಶಸ್ತಿಗಳನ್ನು ಕೊಡಮಾಡುತ್ತಾ ಬಂದಿದೆ.

ತಮ್ಮ ಪ್ರಾಣ ಲೆಕ್ಕಿಸದೆ ಮತ್ತೊಬ್ಬರ ಪ್ರಾಣ ರಕ್ಷಣೆಗೆ ಹೋರಾಡಿದ ಮಹನೀಯರನ್ನು ಶೌರ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತಿದೆ. ಪರೋಪಕಾರಕ್ಕಾಗಿಯೇ ಈ ದೇಹ ಇರುವುದು ಎಂಬುದನ್ನು ಸಾಕಾರಗೊಳಿಸುವ ಕರ್ನಾಟಕದ 10 ಶೌರ್ಯವಂತರನ್ನು ತಮ್ಮ ತಮ್ಮ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ತೀರ್ಪುಗಾರರ ತಂಡ ಆಯ್ಕೆ ಮಾಡಿರುತ್ತದೆ.

ಪ್ರವಾಹದ ವೇಳೆ ಎದ್ದು-ಬಿದ್ದು ಆಂಬುಲೆನ್ಸ್‌ಗೆ ದಾರಿ ತೋರಿದ ಬಾಲಕಿನಿಗೆ ಸಲಾಂ

ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 21, ಶನಿವಾರ ಸಂಜೆ ಬೆಂಗಳೂರಲ್ಲಿ ನಡೆಯಲಿದೆ.

ಅತಿಥಿಗಳಾಗಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಸ್. ಭಾಸ್ಕರ ರಾವ್, ನಟ ಧ್ರುವ ಸರ್ಜಾ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭಾಗವಹಿಸಲಿದ್ದಾರೆ.

ಶೌರ್ಯ ಪ್ರಶಸ್ತಿಗಳನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಬೆಂಗಳೂರು ಆಗ್ನೇಯ ವಲಯ ಉಪ ಪೊಲೀಸ್ ಆಯುಕ್ತೆ ಇಶಾ ಪಂತ್, ನಟ-ನಿರ್ದೇಶಕ ರವಿಕಿರಣ್ ಅವರ ತಂಡ ಆಯ್ಕೆ ಮಾಡಿದೆ.

Latest Videos
Follow Us:
Download App:
  • android
  • ios