ನಿಮ್ಮ ಜಿಲ್ಲೆಯಿಂದ 2019ರಲ್ಲಿ ಭಾರೀ ಸದ್ದು ಮಾಡಿದ ಸುದ್ದಿಗಳಿವು

2019 ಮುಗಿದು 2020ಕ್ಕೆ ನಾವೇಲ್ಲಾ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಒಮ್ಮೆ ಕಳೆಯ ದಿನಗಳತ್ತ ತಿರುಗಿ ನೋಡಿದಾಗ ಎಷ್ಟೇಲ್ಲಾ ಘಟನೆಗಳು ಆಗಿ ಹೋಗಿವೆ ಎನ್ನಿಸದೇ ಇರದು. ಅದರಂತೆ 2019 ರಲ್ಲಿ ವಿವಿಧ ಜಿಲ್ಲೆಗಳಿಂದ ಹೆಚ್ಚು ಸದ್ದು ಮಾಡಿದ ಸುದ್ದಿಗಳು ಇಲ್ಲಿದೆ. 

Recap 2019 Major News in Karnataka Districts

ಬೆಂಗಳೂರು [ಡಿ.30]: 2019 ಕಳೆದು 2020ಕ್ಕೆ ನಾವೆಲ್ಲಾ ಕಾಲಿಡುತ್ತಿದ್ದೇವೆ. ಹೊಸ ವರ್ಷದತ್ತ ಮುಖಮಾಡುತ್ತಿರುವ ನಾವು ಒಮ್ಮೆ 2019ರಲ್ಲಿ ನಡೆದ ಘಟನೆಗಳು ವಿಚಾರಗಳ ಬಗ್ಗೆ ನೆನಪು ಮಾಡಿಕೊಂಡಲ್ಲಿ ಎಷ್ಟೆಲ್ಲಾ ಸ್ಮೃತಿಯಲ್ಲಿ ಬಂದು ಹೋಗುತ್ತದೆ. ಈರುಳ್ಳಿ ಬೆಲೆ ಇಳಿಕೆ, ಕರ್ನಾಟಕ ಪ್ರವಾಹ, ಇನ್ಸ್ ಪೆಕ್ಟರ್ ನಿಧನ, ರಾಜಕೀಯ ಸೇರಿದಂತೆ ವಿವಿಧ ಸುದ್ದಿಗಳು ಜಿಲ್ಲೆಯಿಂದ ಸದ್ದು ಮಾಡಿದ್ದವು. 

ಅದರಂತೆ 2019ರಲ್ಲಿ ನಡೆದ ಪ್ರಮುಖ ಘಟನೆಗಳು ಸುವರ್ಣ ನ್ಯೂಸ್ ಡಾಟ್ ಕಾಂ ನಲ್ಲಿಯೂ ಕೂಡ ಹೆಚ್ಚು ಸದ್ದು ಮಾಡಿವೆ. 2019ರಲ್ಲಿ ಸದ್ದು ಮಾಡಿದ ಪ್ರಮುಖ 10 ಸುದ್ದಿಗಳು ಇಲ್ಲಿದೆ. 

ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ನಿಧನ : ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಓರ್ವರು ಅನಾರೋಗ್ಯದಿಂದ ಕರ್ತವ್ಯದಲ್ಲಿದ್ದ ವೇಳೆಯೇ ನಿಧನರಾಗಿದ್ದು ಈ ಸುದ್ದಿಯು ಹೆಚ್ಚು ಸದ್ದು ಮಾಡಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಈ ಘಟನೆ ನಡೆದಿತ್ತು. 

ಬೆಂಗಳೂರು : ಅಪಘಾತ ಮಾಡಿದ್ದ ಆರ್‌ಟಿಒ ಇನ್ಸ್‌ಪೆಕ್ಟರ್‌ ಸಾವು...

ಹಾವಿಗೆ ಮುತ್ತುಕೊಟ್ಟ ವ್ಯಕ್ತಿ : ಶಿವಮೊಗ್ಗದಲ್ಲಿ ಹಾವಿಗೆ ವ್ಯಕ್ತಿಯೋರ್ವ ಮುತ್ತುಕೊಟ್ಟಿದ್ದು, ಈ ವಿಚಾರ ಎಲ್ಲೆಡೆ ವೈರಲ್ ಆಗಿತ್ತು. ಈ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. 

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು...

ಅಜ್ಜಿ ಮನೆಗೆ ಅಕ್ರಮ ಪ್ರವೇಶ : ಶಿವಮೊಗ್ಗದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ನೆರೆ ಉಂಟಾದಾಗ ವೃದ್ಧೆಯೋರ್ವರಿಗೆ ಸರ್ಕಾರದಿಂದ ನೀಡಲಾದ ಮನೆಗೆ ಮತ್ತೋರ್ವ ಮಹಿಳೆ ಅಕ್ರಮವಾಗಿ ಪ್ರವೇಶಿಸಿದ್ದು, ಬಳಿ ಮತ್ತೆ ಅಜ್ಜಿಗೆ ಮರಳಿ ಮನೆ ಕೊಡಿಸಲಾಗೊತ್ತು. 

ಶಿವಮೊಗ್ಗ : ಸಿಎಂ ಕೊಟ್ಟ ಮನೆ ಗೃಹಪ್ರವೇಶ ಮಾಡಿದ್ದ ಗಂಗಮ್ಮಜ್ಜಿಗೆ ಕಾದಿತ್ತು ಶಾಕ್

ಸ್ವಾಮೀಜಿ ಭವಿಷ್ಯದಿಂದ ಆತಂಕ : ಕೋಡಿ ಮಠದ ಸ್ವಾಮೀಜಿಗಳು ನುಡಿದ ಭವಿಷ್ಯದಿಂದ ಹುಣಸೂರು ಅಭ್ಯರ್ಥಿ ಆತಂಕಗೊಂಡಿದ್ದ ಸುದ್ದಿ ಸದ್ದು ಮಾಡಿತ್ತು. ಆದರೆ ಈ ಕ್ಷೇತ್ರದಲ್ಲಿ ಬಳಿಕ ಗೆದ್ದು ಬೀಗಿದ್ದು ಅವರೇ.

ಕಾಂಗ್ರೆಸ್ ಅಭ್ಯರ್ಥಿಗೆ ನಡುಕ ಹುಟ್ಟಿಸಿದೆ ಕೋಡಿ ಮಠದ ಭವಿಷ್ಯ...

23 ಕೋಟಿ ಲಾಟರಿ : ದಕ್ಷಿಣ ಕನ್ನಡದ ಯುವಕನೋರ್ವ  ಆನ್ ಲೈನ್ ನಲ್ಲಿ ಅಬುದಾಬಿಯಲ್ಲಿ ಲಾಟರಿ ಖರೀದಿಸಿ 23 ಕೋಟಿ ಬಹುಮಾನ ಗೆದ್ದಿದ್ದ. 

ಸುಳ್ಯದ ಯುವಕನಿಗೆ ಹೊಡೆಯಿತು 23 ಕೋಟಿ ರು. ಬಂಪರ್ ಲಾಟರಿ

ಡ್ರೈವರ್ ಚಾಲೇಂಜ್ : ಕಾರು ಚಾಲಕನೋರ್ವ ಟ್ರಾಫಿಕ್ ಪೊಲೀಸರಿಗೆ ಚಾಲೇಂಜ್ ಮಾಡಿದ್ದ ಸುದ್ದಿಯು ಸಖತ್ ವೈರಲ್ ಆಗಿತ್ತು. ಬಳಿಕ ಆತನನ್ನು ಪೊಲೀಸರು  ಬಂಧಿಸಿದ್ದರು. 

ಟ್ರಾಫಿಕ್ ಪೊಲೀಸರಿಗೆ ಸೆಲ್ಫಿ ವಿಡಿಯೋ ಸವಾಲು ಹಾಕಿದ್ದ ಚಾಲಕ ಸೆರೆ.

ಜೆಡಿಎಸ್ ಕಾರ್ಯಕರ್ತನ ತರಾಟೆ : ಜೆಡಿಎಸ್ ಕಾರ್ಯಕರ್ತನೇ ಗೌಡರ ಕುಟುಂಬದ ಬಗ್ಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಇವರೆಂತ ಕಳ್ಳನ್ ಮಕ್ಳು'..? ದೇವೇಗೌಡ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ...

ಮನ್ಮುಲ್ ಸುದ್ದಿ ಸದ್ದು : ಮಂಡ್ಯ ಜಿಲ್ಲೆಯಲ್ಲಿ ನಡೆದ ಹಾಲು ಒಕ್ಕೂಟದ ಚುನಾವಣೆಯೂ ರಾಜಕೀಯ ಸಾಕಷ್ಟು ಸದ್ದಾಗಿದ್ದು, ರಾಜಕೀಯ ನಾಯಕರ ನಡುವೆ ಸಾಕಷ್ಟು ಪೈಪೋಟಿಯಾಗಿತ್ತು. 

JDSಗೆ ದೊಡ್ಡ ಆಘಾತ : ಇಬ್ಬರ ಅನರ್ಹತೆಗೆ ಮುಂದಾದ ರಾಜ್ಯ ಸರ್ಕಾರ...

ಈರುಳ್ಳಿ ಬೆಲೆ : ಈ ಬಾರಿ ಈರುಳ್ಳಿ ಬೆಲೆಯು ಹೆಚ್ಚು ಸದ್ದು ಮಾಡಿದ ಸುದ್ದಿ. ಈರುಳ್ಳಿ ದರ ಏರಿಕೆ ಗಗನಮುಖಿಯಾಗಿ ಸಾಗಿದ್ದು, ಎಲ್ಲೆಡೆ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. 

ದಿಢೀರ್ ಭಾರೀ ಕುಸಿತವಾಯ್ತು ಈರುಳ್ಳಿ ಬೆಲೆ : ಈಗೆಷ್ಟು...

ಬೆಲೆ ಇಳಿಕೆ : ಗದಗ ಮಾರುಕಟ್ಟೆಗೆ ಟರ್ಕಿ ಈರುಳ್ಳಿ ಬಂದಾಗ ಬೆಲೆ ದಿಢೀರ್ ಇಳಿಕೆಯಾಗಿತ್ತು. 

ಈರುಳ್ಳಿ ಬೆಲೆಯಲ್ಲಿ ಭಾರಿ ಕುಸಿತ : ಮತ್ತಷ್ಟು ಇಳಿಯಲಿದೆ...

Latest Videos
Follow Us:
Download App:
  • android
  • ios