'ಇವರೆಂತ ಕಳ್ಳನ್ ಮಕ್ಳು'..? ದೇವೇಗೌಡ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ
ಜೆಡಿಎಸ್‌ಗೆ ಇದ್ದ ಮೂರು ಜಿಲ್ಲೆಗಳಲ್ಲೂ ಬಿಜೆಪಿ ಖಾತೆ ತೆರೆದಿದ್ದಾರೆ ಎಂದಾದರೆ ದೇವೇಗೌಡರ ಕುಟುಂಬ ಸರ್ವನಾಶವೇ ಎಂದು ಜೆಡಿಎಸ್ ಕಾರ್ಯಕರ್ತರೊಬ್ಬರು ದೇವೇಗೌಡ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಏಕವಚನದಲ್ಲಿಯೇ ಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿ, ಜೆಡಿಎಸ್ ಸರ್ವನಾಶವಾಗೋದು ಖಚಿತ ಎಂದು ಹೇಳಿದ್ದಾರೆ.
ಮಂಡ್ಯ(ಡಿ.14): ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಜೆಡಿಎಸ್ ಕಾರ್ಯಕರ್ತ ವಾಗ್ದಾಳಿ ನಡೆಸಿದ್ದು, ವಿಡಿಯೋ ವೈರಲ್ ಆಗಿದೆ. ದೇವೇಗೌಡರ ಕುಟುಂಬ ರಾಜಕಾರಣದಿಂದಾಗಿ ಜೆಡಿಎಸ್ ಸರ್ವನಾಶವಾಗುತ್ತಿದೆ ಎಂದು ಕಾರ್ಯಕರ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತ ದೇವೇಗೌಡರ ವಿರುದ್ಧ ಟೀಕಾಪ್ರಹಾರ ನಡೆಸಿದ್ದು, ವಾಗ್ದಾಳಿ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಸನದಲ್ಲಿ ಪ್ರೀತಮ್ ಗೌಡ ಗೆದ್ದಾಗಲೇ ಅಲ್ಲಿ ಜೆಡಿಎಸ್ ಮುಳುಗುತ್ತಿದೆ ಎಂಬುದು ಗೊತ್ತಾಯ್ತು. ಯಡಿಯೂರಪ್ಪ ಅವರು ತಮ್ಮ ಹುಟ್ಟೂರು ಕೆ.ಆರ್.ಪೇಟೆಯಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಸಾಧನೆ ಮಾಡಿದ್ದಾರೆ ಎಂದಿದ್ದಾರೆ.
ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಬಂಪರ್ ಘೋಷಣೆ
ಕೆ.ಆರ್. ಪೇಟೆಯಲ್ಲಿ ಅನರ್ಹನನ್ನು ಜನ ಗೆಲ್ಲಿಸಿದ್ದಾರೆ. ಈ ಗೆಲುವು ದೇವೇಗೌಡರ ಮನೆಯವರು ಎಷ್ಟು ದುರ್ಬಲರಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಜೆಡಿಎಸ್‌ಗೆ ಇದ್ದ ಮೂರು ಜಿಲ್ಲೆಗಳಲ್ಲೂ ಬಿಜೆಪಿ ಖಾತೆ ತೆರೆದಿದ್ದಾರೆ ಎಂದಾದರೆ ದೇವೇಗೌಡರ ಕುಟುಂಬ ಸರ್ವನಾಶವೇ ಎಂದು ಹೇಳಿದ್ದಾರೆ.
ನಾರಾಯಣಗೌಡ ಬಾಂಬೆ ಕಳ್ಳ. ದುಡ್ಡು ಕಿತ್ತುಕೊಳ್ಳಿ ಅಂತ ರೇವಣ್ಣ ಹೇಳುತ್ತಾರೆ. ಇದೇ ಬಾಂಬೆ ಕಳ್ಳನಿಗೆ 2 ಟೈಮ್ ಟಿಕೆಟ್ ಕೊಟ್ಟಿದ್ದಾರಲ್ಲಾ..? ಇವರೆಂತ ಕಳ್ಳನ್ ಮಕ್ಳು ಎಂದು ದೇವೇಗೌಡ ಕುಟುಂಬದವರ ವಿರುದ್ದ ಏಕವಚನದಲ್ಲೇ ಕಾರ್ಯಕರ್ತ ವಾಗ್ದಾಳಿ ನಡೆಸಿದ್ದಾರೆ.
ಕೋಲಾರ: ಸರ್ಕಾರ ಸುಭದ್ರವಾಗ್ತಿದ್ದಂತೆ ಅಲರ್ಟ್ ಆದ ಸಚಿವ ನಾಗೇಶ್
ಯಾರೇ ದುಡ್ಡು ತಂದುಕೊಟ್ಟರೂ ಅವನು ಕಳ್ಳನೋ,ಸುಳ್ಳನೋ ಎಂದು ನೋಡುವುದಿಲ್ಲ. ಸುಮ್ಮನೆ ಟಿಕೆಟ್ ಕೊಡೋದು. ಈ ಜಿಲ್ಲೆಯೊಳಗೆ ಬಿಜೆಪಿ ಖಾತೆ ತೆರೆದಿದ್ದಾರೆ. ಇನ್ನು ಜೆಡಿಎಸ್ ಕಥೆ ಮುಗಿತು. ಇನ್ನು 5 ಕೋಟಿ ಖರ್ಚು ಮಾಡಿದ್ರೆ ಪಾಪ ದೇವರಾಜು ಗೆಲ್ಲುತ್ತಿದ್ದನೇನೋ.. ರೇವಣ್ಣ ಅವರ ಹತ್ತಿರ ದುಡ್ಡು ಇರಲಿಲ್ಲವೇ? ಅವರ ಅಪ್ಪ ಪ್ರಧಾನಿಯಾಗಿದ್ರು, ಕುಮಾರಸ್ವಾಮಿ 2 ಬಾರಿ ಸಿಎಂ ಆಗಿದ್ದು, ರೇವಣ್ಣ 3-4 ಸಲ ಮಿನಿಸ್ಟ್ರಾಗಿದ್ದೋನು. ದೇವೇಗೌಡ್ರ ಮನೆಯಲ್ಲಿ ದುಡ್ಡು ಇರ್ಲಿಲ್ವೇ? ಎಂದು ಪ್ರಶ್ನಿಸಿದ್ದಾರೆ.
"
ದೇವೇಗೌಡರ ಕುಟುಂಬ ಕೊಡುವ ಹಿಂಸೆ ಶಾಸಕರಿಗೆ ತಡಿಯೋದಕ್ಕೆ ಆಗುತ್ತಿಲ್ಲ. ದೇವೇಗೌಡ್ರ ಮನೆಯವರದು ಸ್ವಾರ್ಥ ರಾಜಕಾರಣ. ಮಂಡ್ಯ ಜಿಲ್ಲೆಯಲ್ಲಿ ಬೇರೆಯವರು ಇರಲಿಲ್ವಾ? ನಿಖಿಲ್ ಕುಮಾರಸ್ವಾಮಿಯನ್ನು ಕರೆದುಕೊಂಡು ಬಂದರು. ಬಿಜೆಪಿ ಸರ್ಕಾರ ಇದೆ. ಹಣ ತಂದು ಹಂಚುತ್ತಿದ್ದಾರೆ ಅಂತಾರೆ? ಅವನ ಮಗನ್ ನಿಲ್ಲಿಸಿದ್ದಾಗ ಅಧಿಕಾರಿಗಳೇ ದುಡ್ಡು ಹಂಚಿದ್ರು ಎಂದು ಆರೋಪಿಸಿದ್ದಾರೆ.
ಬೈ ಎಲೆಕ್ಷನ್: 'ಪೊಲೀಸರಿಂದ ಹಣ ವಸೂಲಿ ಮಾಡಿ ಮತದಾರರಿಗೆ ಹಂಚಿದ್ರಾ ಸುಧಾಕರ್'..?
ದೇವೇಗೌಡ್ರು ಬಂದಾಗಲೇ ಸುರೇಶ್ ಗೌಡ ಕಾಲಿಗೆ ಬೀಳಲಿಲ್ಲ. ಯಡಿಯೂರಪ್ಪ ಕಾಲಿಗೆ ಬಿದ್ದಿದ್ದಾರೆ ಅಂದರೆ ಬಿಜೆಪಿಗೆ ಹೋಗ್ತಾರೆ ಅಂತಾನೇ ಅರ್ಥ. ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯರಿಗೂ ಬಿಜೆಪಿಗೆ ಆಸೆಯಾಗಿದೆ. ರಾಜ್ಯದಲ್ಲಿ ಜೆಡಿಎಸ್ ಸರ್ವನಾಶ ಆಗೋದು ಕಟ್ಟಿಟ್ಟ ಬುತ್ತಿ. ಒಕ್ಕಲಿಗರಿಗೆ ದೇವೇಗೌಡ್ರು ಬಿಟ್ರೆ ಯಾರೂ ಇಲ್ವೋ? ಒಕ್ಕಲಿಗರಿಗೆ ಏನ್ ಮಾಡಿದ್ದಾರೆ..? ಎಂದು ಪ್ರಶ್ನಿಸಿದ್ದಾರೆ.
ಈ ರಾಜ್ಯದಲ್ಲಿ ಜಾತಿ ಪದ್ಧತಿಯನ್ನು ತಂದವರೇ ದೇವೇಗೌಡ್ರು. ಕಳ್ಳತನವೋ, ಸುಲಿಗೆನೋ ಮಾಡಿಕೊಂಡು ಸಾವಿರಾರು ಕೋಟಿ ದುಡ್ಡು ಮಡಗಿರೋರಿಗೇ ಟಿಕೆಟ್ ಕೊಡೋದು. ದುಡ್ಡು ಇಟ್ಕೊಂಡು ಏನು ಮಾಡ್ತಾರೆ..? ಸೂರ್ಯ, ಚಂದ್ರ ಇರೋವರೆಗೂ ಬದುಕುತ್ತಾರಾ? ನೆಮ್ಮದಿ ಇಲ್ಲದ ಜೀವನ, ನೆಮ್ಮದಿ ಇಲ್ಲದ ರಾಜಕಾರಣ ಮಾಡಬಾರದು ಎಂದು ದೇವೇಗೌಡ್ರ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೆ ಚುನಾವಣೆ ಕಾವು.