Asianet Suvarna News Asianet Suvarna News

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು

ವ್ಯಕ್ತಿಯೋರ್ವ ಹಾವಿಗೆ ಮುತ್ತು ಕೊಡಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡ ಘಟನೆ ನಡೆದಿದೆ. ತುಟಿಯನ್ನೇ ಹಾವು ಕಚ್ಚಿ ಹರಿದಿದೆ. 

A man tried to kiss a cobra and bitten by the snake
Author
Bengaluru, First Published Dec 26, 2019, 9:50 AM IST
  • Facebook
  • Twitter
  • Whatsapp

ಶಿವಮೊಗ್ಗ (ಡಿ.26): ವ್ಯಕ್ತಿಯೊಬ್ಬ ನಾಗರ ಹಾವಿಗೆ ಮುತ್ತು ಕೊಡಲು ಹೋಗಿ ಅದರಿಂದ ಕಚ್ಚಿಸಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಇತ್ತೀಚೆಗೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಭದ್ರಾವತಿಯ ಸೋನು ಎಂಬಾತ ಹಾವಿನಿಂದ ಕಚ್ಚಿಸಿಕೊಂಡು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯಾಗಿದ್ದಾನೆ. 

ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿತ್ತು. ಈ ವೇಳೆ ಸ್ಥಳೀಯರು ಸೋನು ಎಂಬಾತನನ್ನು ಹಾವು ಹಿಡಿಯಲು ಕರೆಯಿಸಿದ್ದರು.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು...

ಪಾನಮತ್ತನಾಗಿ ಆಗಮಿಸಿದ ಸೋನು ಹಾವನ್ನು ಕೈಯಲ್ಲಿ ಹಿಡಿದ ಬಳಿಕ ಹಾವಿನ ಹೆಡೆಗೆ ಮುತ್ತು ನೀಡಲು ಹೋಗಿದ್ದಾನೆ. ಈ ವೇಳೆ ಹಾವು ಸೋನುವಿನ ತುಟಿಗೆ ಕಚ್ಚಿದೆ. ಆ ಬಳಿಕ ಸ್ಥಳೀಯರು ಸೋನುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Follow Us:
Download App:
  • android
  • ios