ಕರ್ನಾಟಕಕ್ಕೆ ಇಂದು ಮಹತ್ವದ ದಿನ. ಸುಮಾರು 5 ಕೋಟಿ ಮತದಾರರು ಪ್ರಜಾತಂತ್ರದ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ, ಮಹತ್ವದ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತಿದ್ದಾರೆ. ಪ್ರಜಾತಂತ್ರದ ಹಬ್ಬ ಹೇಗೆ ನಡೆಯುತ್ತಿದೆ ಎಂಬುದರ ಸಮಗ್ರ ನೋಟ ಇಲ್ಲಿದೆ.....
ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಪುತ್ರ ಡಾ. ಯತೀಂದ್ರ ಜೊತೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ.

ಮತದಾನ ಮಾಡಿದ ಬಳಿಕ ಸಚಿವ ರಾಮಲಿಂಗ ರೆಡ್ಡಿ ಹಾಗೂ ಪುತ್ರಿ ಸೌಮ್ಯ ರೆಡ್ಡಿ

ಕುಟುಂಬ ಸದಸ್ಯರೊಂದಿಗೆ ಬಂದು ಮತ ಚಲಾಯಿಸಿದ ಸಚಿವ ಡಿ.ಕೆ.ಶಿವಕುಮಾರ್


ಆಮಿಷಕ್ಕೆ ನೀಡಿದ್ದ ಹಣವನ್ನು ದೇವರ ಹುಂಡಿಗೆ ಹಾಕಿದ ಗ್ರಾಮಸ್ಥರು
ಏನೇ ಆಗಲಿ, ಕರ್ತವ್ಯ ನಿಭಾಯಿಸಿಯೇ ಸಿದ್ಧ! ಬಸ್ಸೊಳಗೆ ಸೀಟು ಬಿಡಿ, ನಿಲ್ಲಲು ಜಾಗವಿಲ್ಲ. ಕೊನೆಗೆ ಬಸ್ಸಿನ ಟಾಪಿನಲ್ಲೇ ಕೂತು ಮತಹಾಕಲು ಹೊರಟ ದಾವಣಗೆರೆ ಯುವಕ ಇಮ್ತಿಯಾಜ್ ಬೇಗ್. ಮತದಾರನಿಗೆ ಸಲಾಂ!

ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ತುಮಕೂರಿನ ಹೆಗ್ಗೆರೆ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು

ಪತ್ನಿ ಸಮೇತರಾಗಿ ಮತ ಚಲಾಯಿಸಿದ ಅನಿಲ್ ಕುಂಬ್ಳೆ
Scroll to load tweet…
ಆಂಬುಲೆನ್ಸ್ ನಲ್ಲಿ ಬಂದು ಮತ ಚಲಾಯಿಸಿದ ಅಭ್ಯರ್ಥಿ
ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಯದುವೀರ್ ಒಡೆಯರ್
ಮತ ಹಾಕಿದ ಮದು ಮಗಳು
ಮತದಾನಕ್ಕೂ ಮುನ್ನ ಶ್ರೀರಾಮುಲುವಿನಿಂದ ಪೂಜೆ
