ಮಂಡ್ಯ :  ಇಂದು ಎಲ್ಲೆಡೆ ಚುನಾವಣಾ ಕಣ ರಂಗೇರಿದೆ. ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.  ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿಯೇ ಬಂದು ಮತದಾನ ಮಾಡುತ್ತಿದ್ದಾರೆ. 

ಇನ್ನೊಂದೆಡೆ ಮತದಾರರಿಗೆ  ಅಭ್ಯರ್ಥಿಗಳ ಕಡೆಯಿಂದ ಮತ ಚಲಾಯಿಸಲು ಆಮಿಷ ಒಡ್ಡುತ್ತಿರುವ ಪ್ರಕರಣಗಳೂ ಕೂಡ ಬೆಳಕಿಗೆ ಬಂದಿವೆ. ಮಂಡ್ಯದ ಮದ್ದೂರು ತಾಲೂಕಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಆಮಿಷಕ್ಕೆ ನೀಡಿದ ಹಣವನ್ನು ತಮಗೆ ಬೇಡವೆಂದು ಗ್ರಾಮಸ್ಥರು ದೇವರ ಹುಂಡಿಗೆ ಹಾಕಿದ್ದಾರೆ.  

ಮಲ್ಲನಕುಪ್ಪೆ ಗ್ರಾಮದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ನೀಡಿದ್ದ ಹಣವನ್ನು ಗ್ರಾಮ ದೇವತೆ ದಂಡಿನಮಾರಮ್ಮ ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ. 

ಗ್ರಾಮಸ್ಥರಿಗೆ ಹಂಚಲು ಸ್ಥಳೀಯ ಮುಖಂಡನಿಗೆ ಕಾಂಗ್ರೆಸ್ ನಾಯಕನಿಂದ ಎರಡೂವರೆ ಲಕ್ಷ ಹಣ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.  

ಒಂದು ಲಕ್ಷ ಹಣವನ್ನು ಇರಿಸಿಕೊಂಡು ಉಳಿಕೆ ಒಂದೂವರೆ ಲಕ್ಷ ಹಣವನ್ನು  ನೀಡಿದಕ್ಕೆ ಗ್ರಾಮಸ್ಥರು ಬೇಸರಗೊಂಡು ಈ ರೀತಿ ಮಾಡಿದ್ದಾರೆ.  ಕಡಿಮೆ ಹಣ ನೀಡಿದ್ದಕ್ಕೆ  ಬೇಸರಗೊಂಡು ಹುಂಡಿಗೆ ಹಣ ಹಾಕಿದ್ದಾರೆ.