ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಯದುವೀರ್ ಒಡೆಯರ್

Yaduveer Wadiyar Voting In Mysore
Highlights

ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಎಲ್ಲೆಡೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಅಂತೆಯೇ ಮೈಸೂರಿನ ಮಹಾರಾಜ  ಯದುವೀರ್ ಒಡೆಯರ್ ಅವರು 30 ನಿಮಿಷ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. 

ಮೈಸೂರು : ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಎಲ್ಲೆಡೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಅಂತೆಯೇ ಮೈಸೂರಿನ ಮಹಾರಾಜ  ಯದುವೀರ್ ಒಡೆಯರ್ ಅವರು 30 ನಿಮಿಷ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. 

ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಒಡೆಯರ್ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.  ಶ್ರೀಕಾಂತ ಕಾಲೇಜಿನಲ್ಲಿ ಇರುವ ಮತಗಟ್ಟೆ148ರಲ್ಲಿ  ಮತದಾನ ಮಾಡಿದ್ದಾರೆ. 

ಮತದಾನ ಬಳಿಕ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಳೆದ ಬಾರಿ ಚುನಾವಣೆಯ ವೇಳೆ ಅಮೇರಿಕದಲ್ಲಿದ್ದೆ. ಅದಕ್ಕು ಹಿಂದಿನ ಚುನಾವಣೆಯಲ್ಲಿ ತಾವು ಮತದಾನ ಮಾಡುವ ವಯಸ್ಸಿನವರಾಗಿರಲಿಲ್ಲ. ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ. 

ಪ್ರಜಾಪ್ರಭುತ್ವದ ಸಾಮಾನ್ಯ ಪ್ರಜೆಯಾಗಿ ಮತಚಲಾಯಿಸಿದ್ದೇನೆ. ನಮ್ಮ ಮತಗಟ್ಟೆಯ ಎಲ್ಲಾ ವ್ಯವಸ್ಥೆಯೂ ಕೂಡ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಪತ್ನಿ ತ್ರಿಷಿಕಾ ಕೂಡ ಮತ ಚಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ.

loader