ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯು (ITBP) 21 ಹೆಡ್ ಕಾನ್ಸ್‌ಟೇಬಲ್ (ಮೋಟಾರ್ ಮೆಕ್ಯಾನಿಕ್) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. 12ನೇ ತರಗತಿ ಪಾಸಾದ 18 ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತರು ಅಕ್ಟೋಬರ್ 27, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ (ITBP) ಖಾಲಿ ಇರುವ 21 ಹೆಡ್ ಕಾನ್ಸ್‌ಟೇಬಲ್ (ಮೋಟಾರ್ ಮೆಕ್ಯಾನಿಕ್) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಉದ್ಯೋಗ ವಿವರ:

ನೇಮಕಾತಿ ಸಂಸ್ಥೆ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP)

ಹುದ್ದೆಯ ಹೆಸರು: ಹೆಡ್ ಕಾನ್ಸ್‌ಟೇಬಲ್ (ಮೋಟಾರ್ ಮೆಕ್ಯಾನಿಕ್)

ಒಟ್ಟು ಖಾಲಿ ಹುದ್ದೆಗಳು: 21

ವೇತನ ಶ್ರೇಣಿ: 25,500 ರಿಂದ 81,100

ಉದ್ಯೋಗ ಸ್ಥಳ ಅಖಿಲ ಭಾರತ

ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ (10+2) ಪೂರ್ಣಗೊಳಿಸಿರಬೇಕು.

ವಯೋಮಿತಿ:

ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಹೊಂದಿರಬೇಕು.

ಅರ್ಜಿ ಶುಲ್ಕದ ವಿವರ

ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ: 100 ರು.

ಎಸ್‌ಸಿ/ಎಸ್‌ಟಿ/ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ

ಪಾವತಿ ವಿಧಾನ: ಆನ್‌ಲೈನ್ (ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್)

ಆಯ್ಕೆ ಪ್ರಕ್ರಿಯೆ: ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ?

ITBP ಅಧಿಕೃತ ವೆಬ್‌ಸೈಟ್‌ itbpolice.nic.in ಗೆ ಭೇಟಿ ನೀಡಿ.

ನೇಮಕಾತಿ (Recruitment) ವಿಭಾಗದಲ್ಲಿ “Head Constable (Motor Mechanic)” ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಅರ್ಹತೆ ಪರಿಶೀಲಿಸಿ.

‘Apply Online’ ಲಿಂಕ್ ಆಯ್ಕೆ ಮಾಡಿ, ನಿಮ್ಮ ವಿವರಗಳನ್ನು ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡಿ.

ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿ ಶುಲ್ಕ ಪಾವತಿಸಿ (ಅನ್ವಯಿಸಿದರೆ).

ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 27, 2026