ಅಯೋಧ್ಯಾ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಲವ್‌ಕುಶ್ ಮಿಶ್ರಾ ನಿರ್ಮಿಸುತ್ತಿರುವ ಐಷಾರಾಮಿ ಕಟ್ಟಡಕ್ಕೆ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ. ₹20 ಸಾವಿರ ಸಂಬಳ ಪಡೆಯುವ ಆರೋಪಿ ₹1.5 ಕೋಟಿ ಮೌಲ್ಯದ ಮನೆ ನಿರ್ಮಿಸುತ್ತಿದ್ದು, ಹಣದ ಮೂಲದ ವಿಚಾರವಾಗಿ ನೋಟಿಸ್ ಜಾರಿ. 

ಲಕ್ನೋ: ಲಕ್ನೋ (ಜು.3): ಅಯೋಧ್ಯಾ ರಾಮಮಂದಿರ ದೇಣಿಗೆ ಕಳ್ಳತನ(Ayodhya Ram mandir Donation theft case) ಪ್ರಕರಣದಲ್ಲಿ ತನಿಖೆ ಮತ್ತಷ್ಟು ತೀವ್ರತೆ ಪಡೆದೊಂಡಿದೆ. ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳೊಬ್ಬನಾದ ಲವ್‌ಕುಶ್ ಮಿಶ್ರಾ ಮತ್ತು ಅವರ ಕುಟುಂಬದ ಹೆಸರಲ್ಲಿರುವ ಬೃಹತ್ ಕಟ್ಟಡ ಮೇಲೆ ಯೋಗಿ ಸರ್ಕಾರ ಇದೀಗ ಬುಲ್ಡೋಜರ್ ಕ್ರಮ ಜರುಗಿಸುವ ಸಾಧ್ಯತೆ ಭೀತಿ ಹುಟ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಯೋಧ್ಯೆ ಪ್ರಾಧಿಕಾರದಿಂದ ನೋಟಿಸ್ ಜಾರಿ!

ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ(Ayodhya Development Authority) ಗುರುವಾರ ಲವ್‌ಕುಶ್ ಮಿಶ್ರಾ ಪತ್ನಿಯ ಹೆಸರಲ್ಲಿರುವ ನಿರ್ಮಾಣ ಹಂತದ ಕಟ್ಟದಕ್ಕೆ ನೋಟಿಸ್ ಜಾರಿ ಮಾಡಿದೆ. ಕಟ್ಟಡ ನಿರ್ಮಾಣಕ್ಕೆ ಬಳಸಿದ ಹಣದ ಕುರಿತಾಗಿ ಒಂದು ವಾರದೊಳಗೆ ಸಮರ್ಪಕ ಉತ್ತರ ನೀಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಹಣದ ವಿಚಾರವಾಗಿ ಅಸಮರ್ಪಕ ಅಥವಾ ತೃಪ್ತಿಕರ ಉತ್ತರ ಸಿಗದಿದ್ದರೆ ಕಟ್ಟಡವನ್ನು ಬುಲ್ಡೋಜರ್ ಬಳಸಿ ಕೆಡುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಅಯೋಧ್ಯ ಅಕ್ರಮ: ಬೀದಿಗಿಳಿದ ವಕೀಲರು; ಕನ್ನಡಿಗ ಗೋಪಾಲ್ ಸೇರಿ ಮೂವರ ವಿರುದ್ಧ ಎಫ್‌ಐಆರ್‌ಗೆ ಪಟ್ಟು! ಪ್ರತಿಭಟನೆ ವೇಳೆ ಜೈ ಶ್ರೀರಾಂ ಘೋಷಣೆ

ಸಂಬಳ ₹20 ಸಾವಿರ, ₹1.5 ಕೋಟಿ ಬೆಲೆಬಾಳುವ ಮನೆ!

ರಾಮ ಮಂದಿರ ದೇಣಿಗೆ ಕಳವು ಪ್ರಕರಣದಲ್ಲಿ ಬಂಧಿತರಾದ ಎಂಟು ಆರೋಪಿಗಳಲ್ಲಿ ಲವ್‌ಕುಶ್ ಕೂಡ ಒಬ್ಬ. ಈ ಹಿಂದೆಯೂ ಪೊಲೀಸರು ಮನೆ ಮೇಲೆ ದಾಳಿ ನಡೆಸಿದಾಗ ₹14.25 ಲಕ್ಷ ನಗದು ವಶಪಡಿಸಿಕೊಂಡಿದ್ದರು. ಅರೋಪಿ ರಾಮ ಮಂದಿರ ಟ್ರಸ್ಟ್‌ನ ಸದಸ್ಯರಾದ ಅನಿಲ್ ಮಿಶ್ರಾ ಆಪ್ತನಾಗಿದ್ದಾನೆ.

ಶಹಾದತ್‌ ಗಂಜ್‌ನಲ್ಲಿ ಐಷಾರಾಮಿ ಬಂಗಲೆ!

ಪೊಲೀಸರ ಮಾಹಿತಿ ಪ್ರಕಾರ ಆರೋಪಿ ಲವ್‌ಕುಶ್ ಶಹಾದತ್‌ಗಂಜ್‌ ಪ್ರದೇಶದಲ್ಲಿ ಸುಮಾರು 1,000 ಚದರ ಅಡಿ ಜಾಗದಲ್ಲಿ ಮೂರು ಅಂತಸ್ತಿನ ಐಷಾರಾಮಿ ಮನೆ ನಿರ್ಮಿಸಲಾಗುತ್ತಿತ್ತು. ಇದ್ಲಲದೇ 2025ರ ಅಕ್ಟೋಬರ್‌ನಲ್ಲಿ ಪತ್ನಿಯ ಹೆಸರಲ್ಲೂ ಸುಮಾರು ₹25 ಲಕ್ಷಕ್ಕೆ ಜಾಗ ಖರೀದಿಸಿದ್ದ ಆರೋಪಿ ಒಟ್ಟು ಸುಮಾರು ₹1.5 ಕೋಟಿ ಇದಕ್ಕೆ ಹೂಡಿಕೆ ಮಾಡಲಾಗಿತ್ತು ಎಂದು ಅಂದಾಜಿಸಲಾಗಿದೆ.

ಲವ್‌ಕುಶ್ ಮಾಸಿಕ ಆದಾಯವೇ ₹20 ಸಾವಿರ ಹೀಗಿರುವಾಗಿ ಐಷಾರಾಮಿ ಬಂಗಲೆ ನಿರ್ಮಾಣಕ್ಕೆ ಬಂದ ಹಣ ಎಲ್ಲಿಯದು? ಅಯೋಧ್ಯೆ ದೇಣಿಗೆ ಕಳ್ಳತನದ ಹಣ ಇದರಲ್ಲಿ ತೊಡಗಿಸಲಾಗಿದೆ ಎಂಬ ಆರೋಪ ಹಿನ್ನೆಲೆ ತನಿಖಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವೇಳೆ ಐಷಾರಾಮಿ ಕಟ್ಟಡಗಳ ಕುರಿತು ಸಮರ್ಪಕ ಉತ್ತರ ನೀಡದಿದ್ದಲ್ಲಿ ಬುಲ್ಡೋಜರ ಕ್ರಮ ಜರುಗಿಸುವ ಬಗ್ಗೆಯೂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Manusmriti viral: ರಾಮ ಮಂದಿರದ ₹200 ಕೋಟಿ ದೇಣಿಗೆ ಕಳವು ಬಳಿಕ ವೈರಲ್ ಆಯ್ತು ಮನುಸ್ಮೃತಿ! ದೇಣಿಗೆ ಕಳ್ಳರಿಗೆ ಯಾವ ಶಿಕ್ಷೆ ಹೇಳಿದೆ?

ಅಂತಿಮ ಹಂತಕ್ಕೆ ಬಂದಿದ್ದ ನಿರ್ಮಾಣ ಕಾಮಗಾರಿ!

ಇನ್ನು ಲವ್‌ಕುಶ್ ಬಂಧನಕ್ಕೆ ಮುನ್ನವೇ ಐಷಾರಾಮಿ ಕಟ್ಟಡಗಳ ಕಾಮಗಾರಿ ಮುಗಿದಿದ್ದು ಅಂತಿಮ ಹಂತಕ್ಕೆ ತಲುಪಿತ್ತು. ಹೊಸ ಕಟ್ಟಡದಲ್ಲಿ ದೊಡ್ಡ ಅಡುಗೆಮನೆ, ಹಲವಾರು ಬೆಡ್‌ರೂಂಗಳು, ಲಿಫ್ಟ್‌ಗೆ ವ್ಯವಸ್ಥೆ ಜೊತೆಗೆ ಪಕ್ಕದಲ್ಲಿ ಮತ್ತೊಂದು ಮಹಡಿ ನಿರ್ಮಿಸಲು ಜಾಗ ಉಳಿಸಲಾಗಿತ್ತು. ಇದಕ್ಕಾಗಿ ಸುಮಾರು ₹80ರಿಂದ ₹90 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಣಿಗೆ ಹಣದಿಂದಲೇ ಮನೆ ನಿರ್ಮಾಣವೇ?

ಈ ಮನೆ ನಿರ್ಮಾಣಕ್ಕೆ ರಾಮ ಮಂದಿರದ ದೇಣಿಗೆ ಹಣವೇ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಏಕೆಂದರೆ ಲವ್‌ಕುಶ್‌ಗೆ ಇಷ್ಟೊಂದು ಹಣದಲ್ಲಿ ಐಷಾರಾಮಿ ಹಣ ಕಟ್ಟಲು ಹಣ ಎಲ್ಲಿಂದ ಬಂತು? ಎಂಬ ತನಿಖಾಧಿಕಾರಿಗಳ ಪ್ರಶ್ನೆ. ಈವರೆಗೆ ಎಂಟು ಆರೋಪಿಗಳ ಮನೆಗಳ ಮೇಲೆ ನಡೆಸಿರುವ ಪೊಲೀಸರು ಸುಮಾರು ₹80.92 ಲಕ್ಷ ಭಾರತೀಯ ಕರೆನ್ಸಿ, 1,121 ಅಮೆರಿಕನ್‌ ಡಾಲರ್‌, ಜೊತೆಗೆ ಭಕ್ತರು ದೇಣಿಗೆಯಾಗಿ ನೀಡಿದ್ದರೆಂದು ಶಂಕಿಸಲಾದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.