Asianet Suvarna News Asianet Suvarna News

ಸೈಕಲಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿಯ ಶಾಲ್‌ ಎಳೆದು, ಬೀಳಿಸಿ ಬೈಕ್ ಹತ್ತಿಸಿ ಕೊಲೆ: video viral

ಶಾಲೆಯಿಂದ ಮನೆಗೆ ಸೈಕಲ್‌ನಲ್ಲಿ ಮರಳುತ್ತಿದ್ದ ವಿದ್ಯಾರ್ಥಿನಿಯನ್ನು ಮೂವರು ಯುವಕರು ಪೀಡಿಸಿ ಅಪಘಾತದಲ್ಲಿ ಕೊಲೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

Uttar Pradesh Muslim youth killed a female student by pulling her shawl while she raiding cycle and killed her by moving off bike on her akb
Author
First Published Sep 18, 2023, 8:51 AM IST

ಅಂಬೇಡ್ಕರ್‌ನಗರ್‌ (ಉ.ಪ್ರ): ಶಾಲೆಯಿಂದ ಮನೆಗೆ ಸೈಕಲ್‌ನಲ್ಲಿ ಮರಳುತ್ತಿದ್ದ ವಿದ್ಯಾರ್ಥಿನಿಯನ್ನು ಮೂವರು ಯುವಕರು ಪೀಡಿಸಿ ಅಪಘಾತದಲ್ಲಿ ಕೊಲೆ ಮಾಡಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಅದರ ಬೆನ್ನಲ್ಲೇ ಆರೋಪಿಗಳ ಕಾಲಿಗೆ ಗುಂಡಿಕ್ಕಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನ್ಯಾನ್ಸಿ (Nancy) ಎಂಬ ಶಾಲೆಯ ವಿದ್ಯಾರ್ಥಿನಿ (school student) ಎಂದಿನಂತೆ ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ ದಾರಿಯಲ್ಲಿ ಬಂದ ಇಬ್ಬರು ಯುವಕರು, ಬಲವಂತವಾಗಿ ಆಕೆಯ ದುಪ್ಪಟ್ಟ ಎಳೆಯಲು ಪ್ರಯತ್ನಿಸಿದ್ದರು. ಈ ವೇಳೆ ಆಕೆ ಆಯತಪ್ಪಿ ಸೈಕಲ್‌ನಿಂದ (bicycle) ಕೆಳಗೆ ಬಿದ್ದ ವೇಳೆ ಹಿಂಬದಿಯಿಂದ ಬಂದ ಬೈಕ್‌ ಸವಾರ ಏಕಾಏಕಿ ವಿದ್ಯಾರ್ಥಿನಿಯ ಮೇಲೆ ಬೈಕ್‌ ಹತ್ತಿಸಿದ್ದಾನೆ. ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ದುಪ್ಪಟ್ಟ ಎಳೆದ ಶಹವಾಜ್‌ (Shahwaz) ಹಾಗೂ ಅರವಾಜ್‌ (Arawaz) ಹಾಗೂ ಬೈಕ್‌ ಹತ್ತಿಸಿದ ಫೈಸಲ್‌ (Faisal)ಪರಿಚಿತರು ಎಂದು ಪೊಲೀಸರು ತಿಳಿಸಿದ್ದಾರೆ.

ದೇಗುಲದಲ್ಲಿ ನಮಾಜ್‌: ತಾಯಿ, ಮಗಳ ಜೊತೆ ಕುಮ್ಮಕ್ಕಿತ್ತ ಇಮಾಂ ಸೆರೆ

ಬರೇಲಿ: ತಮ್ಮ ಧರ್ಮಗುರುಗಳು ಹೇಳಿದರು ಎಂದು ಶುಕ್ರವಾರ ಇಲ್ಲಿನ ಶಿವನ ದೇವಸ್ಥಾನದಲ್ಲಿ (Shiva temple) ನಮಾಜ್‌ (Namaz) ಮಾಡಿದ ಮಹಿಳೆ ಹಾಗೂ ಆಕೆಯ ಮಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಪ್ರೇಮ್‌ಸಿಂಗ್‌ ಎಂಬುವವರು ನೀಡಿದ ದೂರಿನಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ನಜೀರ್‌ (Nazir) (38), ಮಗಳು ಸಬೀನಾ (19) ಹಾಗೂ ಚಮನ್‌ ಶಾ ಮಿಯಾನ್ (Chaman Shah Mian) ಎಂಬ ಧರ್ಮಗುರುವನ್ನು ಬಂಧಿಸಲಾಗಿದೆ. ಎಫ್‌ಐಆರ್‌ ದಾಖಲಿಸಲಾಗಿದ್ದು, ಮೂವರನ್ನು ವಿಚಾರಣೆ ನಡೆಸಲಾಗುತ್ತಿದೆ ಹಾಗೂ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕ್‌ಗೆ ತೆರಳಿ ಪ್ರೇಮಿ ವರಿಸಿದ್ದ ಅಂಜು ಮಕ್ಕಳ ನೋಡಲು ಭಾರತಕ್ಕೆ
ಪೇಶಾವರ: ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಪ್ರಿಯಕರನನ್ನು ವರಿಸಿದ್ದ ಭಾರತದ ಅಂಜು, ಇದೀಗ ತನ್ನ ಮಕ್ಕಳನ್ನು ನೋಡುವ ಸಲುವಾಗಿ ಮುಂದಿನ ತಿಂಗಳು ಭಾರತಕ್ಕೆ ಮರಳಲು ನಿರ್ಧರಿಸಿದ್ದಾಳೆ. ಪ್ರಿಯಕರ ನಸ್ರುಲ್ಲಾಹ್‌ಗಾಗಿ (Nasrullah) ಇಸ್ಲಾಂಗೆ ಮತಾಂತರ ಆಗಿ ತನ್ನ ಹೆಸರನ್ನು ಫಾತಿಮಾ ಎಂಬು ಬದಲಾಯಿಸಿಕೊಂಡಿರುವ ಅಂಜು, ಕಳೆದ 2 ತಿಂಗಳಿನಿಂದ ತನ್ನ ಮಕ್ಕಳನ್ನು ನೋಡದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ. ಹೀಗಾಗಿ ಅನಿವಾರ್ಯವಾಗಿ ಆಕೆ ಭಾರತದ ವೀಸಾ (Indian visa) ಸಿಕ್ಕ ಕೂಡಲೇ ಭಾರತಕ್ಕೆ ಮರಳಲಿದ್ದಾಳೆ ಎಂದು ಆಕೆಯ ಪತಿ ಮಾಹಿತಿ ನೀಡಿದ್ದಾನೆ. ಆದರೆ ಅಲ್ಲಿಂದ ಪಾಕ್‌ಗೆ ಮರಳುವ ಕುರಿತು ಆತ ಯಾವುದೇ ಮಾಹಿತಿ ನೀಡಿಲ್ಲ. ಅಂಜು ಈ ಮೊದಲು ರಾಜಸ್ಥಾನದಲ್ಲಿನ ಅರವಿಂದ್‌ (Arvind) ಎಂಬುವವರನ್ನು ವಿವಾಹವಾಗಿದ್ದರು. ಇವರಿಗೆ 15 ವರ್ಷದ ಒಬ್ಬ ಮಗಳು ಮತ್ತು 6 ವರ್ಷದ ಒಬ್ಬ ಪುತ್ರ ಇದ್ದಾರೆ.

ಕೋಟ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಇದೀಗ ಪಿಎಚ್‌ಡಿ ಅಧ್ಯಯನ ವಿಷಯ: ವರದಿ

ಕೋಟಾ: ಇಲ್ಲಿನ ಕೋಚಿಂಗ್‌ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ ಮನಶಾಸ್ತ್ರದ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆಯ ವಿಷಯದ ಮೇಲೆ ಪಿಎಚ್‌ಡಿ ಸಂಶೋಧನೆ ಮಾಡಿದ್ದಾರೆ. ಈ ಸಂಶೋಧನೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣ, ಆತ್ಮಹತ್ಯೆ ತಡೆಗೆ ಮಾಡಬಹುದಾದ ಕ್ರಮಗಳನ್ನು ವಿವರಿಸಿದ್ದಾರೆ. ಇದರಲ್ಲಿ ಮೊದಲನೇ ಸಲಹೆಯಲ್ಲಿ ತರಬೇತಿ ಕೇಂದ್ರಗಳಲ್ಲಿ ಅಂಕಗಳ ನಿಗದಿಯನ್ನು ತೆಗೆಯುವುದು, ವಿದ್ಯಾರ್ಥಿಗಳನ್ನು ರ್‍ಯಾಂಕ್‌ ಆಧಾರದ ಮೇಲೆ ಇರುವ ಶ್ರೇಣಿಗಳನ್ನು ತೆಗೆಯುವುದು ಹಾಗೂ ತರಬೇತಿ ಕೇಂದ್ರವು ತಮ್ಮ ಶುಲ್ಕವನ್ನು ಮೂರು ತಿಂಗಳ ಅನ್ವಯ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಇದರಿಂದಾಗಿ ಮನೆಯವರ ಆರ್ಥಿಕ ಒತ್ತಡದಿಂದ, ಗುಣಮಟ್ಟದ ಮೇಲೆ ಬರುವ ಖಿನ್ನತೆಯಿಂದ ಸಾವನ್ನಪ್ಪುವ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸಂಶೋಧನೆಯಲ್ಲಿ ಸೂಚಿಸಲಾಗಿದೆ.

ಇಂದಿನಿಂದ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ : ಇತಿಹಾಸದ ಪುಟ ಸೇರಲ ...

Follow Us:
Download App:
  • android
  • ios