ಚುನಾವಣೆ ಟೈಮ್‌ನಲ್ಲೇ ಅರವಿಂದ್‌ ಕೇಜ್ರಿವಾಲ್‌ ಅರೆಸ್ಟ್‌ ಮಾಡಿದ್ದೇಕೆ? ಇಡಿಗೆ ಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್‌


ಲೋಕಸಭೆ ಚುನಾವಣೆ ಟೈಮ್‌ನಲ್ಲೇ ಅರವಿಂದ್‌ ಕೇಜ್ರಿವಾಲ್‌ರನ್ನು ಬಂಧಿಸಿದ್ದೇಕೆ ಎಂದು ಸುಪ್ರೀಂ ಕೋರ್ಟ್‌ ಇಡಿಗೆ ಪ್ರಶ್ನೆ ಮಾಡಿದ್ದು, ಶುಕ್ರವಾರದ ಒಳಗಾಗಿ ಉತ್ತರ ನೀಡುವಂತೆ ಸೂಚನೆ ನೀಡಿದೆ.
 

Supreme Court asks ED Why was Arvind Kejriwal arrested before polls san

ನವದೆಹಲಿ (ಏ.30): ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳು ಇರುವಾಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧನ ಮಾಡಿದ್ದೇಕೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ ಪ್ರಶ್ನೆ ಮಾಡಿದೆ. ಅದರೊಂದಿಗೆ ಅರವಿಂದ್ ಕೇಜ್ರಿವಾಲ್‌ ಅವರ ಲೀಗಲ್‌ ಟೀಮ್‌ ಕೇಳಿರುವ ಕೆಲವು ಪ್ರಶ್ನೆಗಳಿಗೆ ಶುಕ್ರವಾರದ ಒಳಗಾಗಿ ಉತ್ತರ ನೀಡುವಂತೆ ತಿಳಿಸಿದೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಮತ್ತು ಜಾರಿ ನಿರ್ದೇಶನಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಪೀಠವು ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ "ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದೆ, ನೀವು ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕೊನೆಯ ಪ್ರಶ್ನೆಯೆಂದರೆ, ಸಾರ್ವತ್ರಿಕ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಇರುವಾಗ ಅವರನ್ನು ಬಂಧಿಸಿದ್ದೇಕೆ' ಎಂದು ಕೇಳಿದ್ದಾರೆ.

ವಿಚಾರಣೆಯ ಪ್ರಾರಂಭ ಮತ್ತು ಕೆಲವು ಸಮಯದ ನಂತರ ಪುನರಾವರ್ತಿತ ದೂರುಗಳ ನಡುವೆ ಇರುವ ಸಮಯದ ಅಂತರದ ಬಗ್ಗೆಯೂ ವಿವರವಾಗಿ ತಿಳಿಸುವಂತೆ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅರವಿಂದ್ ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಅಪರಾಧದ ಆದಾಯದ ಕುರುಹು ಇಲ್ಲ ಮತ್ತು ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ನೇರವಾಗಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಮುಂದಿನ ವಿಚಾರಣೆ ನಡೆಯುವ ಮೇ 3 ಶುಕ್ರವಾರದಂದು ಪ್ರತಿಕ್ರಿಯೆ ನೀಡುವಂತೆ ಇಡಿಗೆ ಸೂಚಿಸಲಾಗಿದೆ.

ರಾಘವ್‌ ಚಡ್ಡಾ ತಮ್ಮ Eyesight ಕಳೆದುಕೊಂಡಿರಬಹುದು.. ಅಪ್‌ಡೇಟ್‌ ನೀಡಿದ ಆಪ್‌

ಪ್ರಸ್ತುತ ರದ್ದಾಗಿರುವ ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಅವರು ಏಪ್ರಿಲ್ 1 ರಿಂದ ತಿಹಾರ್ ಜೈಲಿನಲ್ಲಿದ್ದು, ಮೇ 7 ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಏಪ್ರಿಲ್ 9 ರಂದು ದೆಹಲಿ ಹೈಕೋರ್ಟ್ ಮುಖ್ಯಮಂತ್ರಿಯ ಬಂಧನದಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದು ತೀರ್ಪು ನೀಡಿತ್ತು.

ಅಬಕಾರಿ ಹಗರಣದಲ್ಲಿ ಹೈರಾಣದ ಆಪ್, ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ಕೋರ್ಟ್!

Latest Videos
Follow Us:
Download App:
  • android
  • ios