ಇಂದಿನಿಂದ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ : ಇತಿಹಾಸದ ಪುಟ ಸೇರಲಿದೆ ಹಳೆ ಸಂಸತ್‌ ಭವನ

ಬ್ರಿಟಿಷರ ಆಳ್ವಿಕೆ, 2ನೇ ಮಹಾಯುದ್ಧ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಗಳಿಗೆ, ಸಂವಿಧಾನ ರಚನೆ, ಹಲವಾರು ಐತಿಹಾಸಿಕ ಹಾಗೂ ವಿವಾದಾತ್ಮಕ ಮಸೂದೆಗಳಿಗೆ ಸಾಕ್ಷಿಯಾಗಿದ್ದ ನವದೆಹಲಿಯ ಹಳೆಯ ಸಂಸತ್‌ ಭವನ ಇತಿಹಾಸದ ಪುಟ ಸೇರಲು ಕ್ಷಣಗಣನೆ ಆರಂಭವಾಗಿದೆ.

Five day special session of Parliament from today Old Parliament House will be join Historical monument page akb

ನವದೆಹಲಿ: ಬ್ರಿಟಿಷರ ಆಳ್ವಿಕೆ, 2ನೇ ಮಹಾಯುದ್ಧ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಗಳಿಗೆ, ಸಂವಿಧಾನ ರಚನೆ, ಹಲವಾರು ಐತಿಹಾಸಿಕ ಹಾಗೂ ವಿವಾದಾತ್ಮಕ ಮಸೂದೆಗಳಿಗೆ ಸಾಕ್ಷಿಯಾಗಿದ್ದ ನವದೆಹಲಿಯ ಹಳೆಯ ಸಂಸತ್‌ ಭವನ ಇತಿಹಾಸದ ಪುಟ ಸೇರಲು ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಈ ಕಲಾಪದ ಅವಧಿಯಲ್ಲೇ ಸಂಸತ್ತಿನ ಕಾರ್ಯಕಲಾಪ ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ ಹೊಸ ಸಂಸತ್‌ ಭವನಕ್ಕೆ ಸ್ಥಳಾಂತರವಾಗುವ ಸಾಧ್ಯತೆ ನಿಚ್ಚಳವಾಗಿದೆ. ಹೀಗಾದಲ್ಲಿ ಹಳೆಯ ಸಂಸತ್ ಭವನ (Old Parliament House) ಇತಿಹಾಸದ ಒಂದು ಸ್ತಂಭವಾಗಿ, ಸ್ಮಾರಕವಾಗಿ ಉಳಿಯಲಿದೆ.

96 ವರ್ಷದ ಇತಿಹಾಸ:

ಕೋಲ್ಕತಾದಿಂದ ನವದೆಹಲಿಗೆ ರಾಜಧಾನಿ ಸ್ಥಳಾಂತರವಾದ ಬಳಿಕ ಬ್ರಿಟಿಷರು ವಿಶಿಷ್ಟ ಕಟ್ಟಡವಾದ ಈಗಿನ ಸಂಸತ್‌ ಭವನವನ್ನು (Parliament House) ನಿರ್ಮಾಣ ಮಾಡಿದ್ದರು. 1927ರ ಜ.18ರಂದು ಅಂದಿನ ಭಾರತದ ವೈಸ್‌ರಾಯ್(Viceroy of India) ಲಾರ್ಡ್‌ ಇರ್ವಿನ್‌ (Lord Irvine) ಅವರು ಈ ಕಟ್ಟಡವನ್ನು ಚಿನ್ನದ ಕೀಲಿ (golden key) ಕೈ ಮೂಲಕ ಬಾಗಿಲು ತೆರೆದು ಉದ್ಘಾಟಿಸಿದ್ದರು. ಆರು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಈ ಕಟ್ಟಡ ಇದ್ದು, 144 ಕಲ್ಲಿನ ಕಂಬಗಳನ್ನು ಹೊಂದಿದೆ. 560 ಅಡಿ ವ್ಯಾಸ ಹಾಗೂ ಮೂರನೇ ಒಂದು ಮೈಲಿಯಷ್ಟು ಸುತ್ತಳತೆಯನ್ನು ಹೊಂದಿದೆ.

ನವದೆಹಲಿಯನ್ನು ರಾಜಧಾನಿಯಾಗಿ ಆಯ್ಕೆ ಮಾಡಿಕೊಂಡ ಬಳಿಕ ಅದನ್ನು ವಿನ್ಯಾಸಗೊಳಿಸಲು ನಿಯುಕ್ತಿಗೊಂಡಿದ್ದ ಸರ್‌ ಹರ್ಬರ್ಟ್‌ ಬೇಕರ್‌ (Sir Herbert Baker) ಹಾಗೂ ಸರ್‌ ಎಡ್ವಿನ್‌ ಲ್ಯೂಟನ್‌ (Sir Edwin Luton) ಅವರು ಈ ಕಟ್ಟಡವನ್ನು ವಿನ್ಯಾಸಗೊಳಿಸಿದ್ದರು. ಈ ಕಟ್ಟಡದ ವಿನ್ಯಾಸ ವಿಶ್ವದಲ್ಲೇ ಅತ್ಯಂತ ವಿಶಿಷ್ಟವಾಗಿತ್ತು. ಭಾರತಕ್ಕೆ ಒಂದು ಹೆಗ್ಗುರುತಾಗಿತ್ತು. ಈ ಕಟ್ಟಡ ಇನ್ನು ಮುಂದೆ ಭಾರತ ಇತಿಹಾಸ ಕೋಟೆ ಹಾಗೂ ನವದೆಹಲಿಯ ವಾಸ್ತುಶಿಲ್ಪ ರತ್ನವಾಗಿ ಮುಂದುವರಿಯಲಿದೆ ಎಂದು ಇತಿಹಾಸ ತಜ್ಞರು ಹೇಳಿದ್ದಾರೆ.

ಪ್ರಧಾನಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ ರಾಹುಲ್, ಖರ್ಗೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ 73ನೇ ಜನ್ಮದಿನದ ಸಂಭ್ರಮ. ಮೋದಿ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಸೇರಿ ಪ್ರಮುಖ ರಾಜಕೀಯ ನಾಯಕರು, ಇತರ ಗಣ್ಯರು ಶುಭಾಶಯ ಕೋರಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಕರ್ನಾಟಕದ ಸಿದ್ದರಾಮಯ್ಯ, ಶಿವರಾಜ್‌ ಸಿಂಗ್‌ ಚೌಹಾಣ್‌ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿವಿಧ ಪಕ್ಷಗಳ ಮುಖ್ಯಮಂತ್ರಿಗಳೂ ಸಹ ಪ್ರಧಾನಿ ಮೋದಿ ಅವರಿಗೆ ಶುಭ ಕೋರಿದ್ದಾರೆ. ಪ್ರಧಾನಿ ಮೋದಿ ಅವರ ಜನ್ಮದಿನಕ್ಕೆ ಅನೇಕ ರಾಜ್ಯಗಳ ರಾಜ್ಯಪಾಲರು, ಬಾಲಿವುಡ್‌ ಸೇರಿ ಭಾರತೀಯ ಚಿತ್ರರಂಗದ ಅನೇಕ ನಟ, ನಟಿಯರು ಶುಭ ಕೋರಿದರು.

Latest Videos
Follow Us:
Download App:
  • android
  • ios