ಲವ್ ಬಗ್ಗೆ ಅದಿನ್ನೆಂಥಾ ಸ್ಟಡಿ ಮಾಡಿದಾರೋ ಏನೋ, ಮೃಣಾಲ್ ಠಾಕೂರ್ ಮಾತಿಗೆ ನೆಟ್ಟಿಗರು ಫಿದಾ!

ನಟಿ ಮೃಣಾಲ್ ಠಾಕೂರ್ ಅವರು ತಮ್ಮ 'ಕಲ್ಯಾಣಿ ವಚ್ಚಾ ವಚ್ಚಾ' ಸಿನಿಮಾದ ಪಾತ್ರದ ಬಗ್ಗೆ ಕೂಡ ತುಂಬಾ ಎಕ್ಸೈಟ್ ಆಗಿ ಮಾತನಾಡಿದ್ದಾರೆ. 'ನನಗೆ ತೆಲುಗು ಸಿನಿಮಾಗಳೆಂದರೆ ಅಚ್ಚುಮೆಚ್ಚು. ಬಾಲಿವುಡ್ ಸಿನಿಮಾಗಳು ಕೂಡ ಇಷ್ಟ. ಸೌತ್ ಸಿನಿಮಾಗಳಲ್ಲಿ, ಅದರಲ್ಲೂ..

Indian Actress Mrunal Thakur talks about Love and its Definition in an Interview srb

ನಟಿ ಮೃಣಾಲ್ ಠಾಕೂರ್ (Mrunal Thakur) ಸದ್ಯ ಭಾರೀ ಜನಪ್ರಿಯತೆ ಪಡೆಯುತ್ತಿರುವ ನಟಿ. ಅವರ ಸಂದರ್ಶನಗಳು, ರೀಲ್ಸ್‌ ಹಾಗೂ ಚಿಟ್‌ ಚಾಟ್ ವೀಡಿಯೋಗಳು ಸೋಷಿಯಲ್ ಮೀಡಿಯಾಗಳು ಹಾಗೂ ಯೂ ಟ್ಯೂಬ್‌ಗಳಲ್ಲಿ ಬಹಳಷ್ಟು ಹರಿದಾಡುತ್ತಲೇ ಇರುತ್ತವೆ. ಹೀಗೇ ಒಂದು ಸಂದರ್ಶನದಲ್ಲಿ ನಟಿ ಮೃಣಾಲ್‌ಗೆ 'ನಿಮ್ಮ ಪ್ರಕಾರ ಲವ್ಅಂದ್ರೆ ಏನು? ನೀವು ಅದನ್ನು ಹೇಗೆ ಅರ್ಥೈಸುತ್ತೀರಿ, ಆ ಬಗ್ಗೆ ಹೇಳಿ' ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಮೃಣಾಲ್ ಠಾಕೂರ್ ತಮ್ಮದೇ ಆದ ವಿಚಾರಧಾರೆ ಬಳಿಸಿ ಉತ್ತರ ನೀಡಿದ್ದಾರೆ. ಹಾಗಿದ್ದರೆ ಅವರು ಲವ್ ಬಗ್ಗೆ ಏನು ಹೇಳಿದ್ದಾರೆ? 

'ಲವ್ ಅಂದ್ರೆ ನೀವಿರುವ ಈ ಕ್ಷಣ.. ಎಂಜಾಯ್ ಮಾಡುತ್ತಿರುವ ಈ ಕ್ಷಣವನ್ನು ಲವ್ (Love) ಎನ್ನಬಹುದು. ಆದರೆ, ಈ ಲವ್ ಡೆಫನಿಶನ್ ಅನ್ನೋದು ಪ್ರತಿ ವ್ಯಕ್ತಿಯ ದೃಷ್ಟಿನಲ್ಲಿ ಬದಲಾಗುತ್ತದೆ. ಏಕೆಂದರೆ, ಇಬ್ಬರು ವ್ಯಕ್ತಿಗಳು ಸೇರಿ ಲವ್ ಮಾಡುತ್ತಿದ್ದರೆ ಅವರಿಬ್ಬರಲ್ಲೇ ಅದರ ಬಗ್ಗೆ ಡಿಫ್ರೆಂಟ್ ಒಪಿನಿಯನ್ ಇರುತ್ತದೆ ಎಂದರೆ, ಇಬ್ಬರು ವ್ಯಕ್ತಿಗಳ ಒಂದೇ ಲವ್‌ನಲ್ಲಿ ಎರಡು ಅಭಿಪ್ರಾಯಗಳು ಇರುತ್ತವೆ ಎಂದಾಗ, ಪ್ರಪಂಚಕ್ಕೇ ಒಂದು ಅರ್ಥ ಇರಲು ಹೇಗೆ ಸಾಧ್ಯ? 

ಭಾರೀ ಟ್ರೆಂಡಿಂಗ್‌ನಲ್ಲಿ 'ನಿರ್ಗತಿಕ' ಪದ.., ಬಿಸಿಬಿಸಿ ಚರ್ಚೆ; ಭಾರೀ ಟ್ರೋಲ್ ಆಗುತ್ತಿರುವ ಪ್ರಕಾಶ್ ರಾಜ್!

ನನ್ನ ಪ್ರಕಾರ ಲವ್ ಎಂದರೆ, ಒಬ್ಬರನ್ನೊಬ್ಬರು ಕೇರ್ ಟೇಕರ್ ಆಗಿ ನೋಡಿಕೊಳ್ಳುತ್ತ, ಪರಸ್ಪರ ಒಬ್ಬರಿಗಾಗಿ ಮತ್ತೊಬ್ಬರ ಹೃದಯ ಮಿಡಿಯುತ್ತಿದ್ದು ನಮಗಿಂತ ಅವರು ಹೆಚ್ಚು ಎಂಬ ಭಾವದಲ್ಲಿ ಅವರ ಪರವಾಗಿ ನಿಲ್ಲುವ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಎನ್ನಬಹುದು. ನಾವು ಲವ್‌ನಲ್ಲಿ ಬೀಳಬಾರದು, ಅದರಲ್ಲಿ ನಾವು ಎದ್ದೇಳಬೇಕು. ಅಂದರೆ, ನಾವು ಲವ್‌ ನಲ್ಲಿ 'ಫಾಲ್' ಆಗಬಾರದು, 'ರೈಸ್' ಆಗಬೇಕು. ಆದರೆ, ಅದು ಎಷ್ಟು ಜನರಿಗೆ ತಿಳಿದಿದೆ? ಅದನ್ನು ಅದೆಷ್ಟು ಜನರು ಕರೆಕ್ಟಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಅತಿ ಮುಖ್ಯ. 

ವಿಜಯ್ ದೇವರಕೊಂಡ ಜತೆ ಸಿನಿಮಾಗೆ ಹೋಗ್ಬೇಕು ಅಂದ ರಶ್ಮಿಕಾ ಹೃತಿಕ್ ಜತೆ ಹಾಗಂದ್ಬಿಟ್ರಾ?

ಲವರ್ಸ್ ಹೇಗಿರಬೇಕು ಎಂದರೆ, ಉದಾಹರಣೆಗೆ, ನನ್ನ ಜೀವನದಲ್ಲಿ ನಡೆದ ಚಿಕ್ಕ ಅಥವಾ ದೊಡ್ಡ ಘಟನೆಯನ್ನು ನಾನು ನನ್ನ ಸಂಗಾತಿಗೆ ಫಿಲ್ಟರ್ ಇಲ್ಲದೇ ಹೇಳಿಕೊಳ್ಳುವಂತಿರಬೇಕು. ಆದರೆ, ನನ್ನ ಸಂಗಾತಿ ಅದರ ಬಗ್ಗೆ ಸಲಹೆ-ಸೂಚನೆ ನೀಡಿದರೂ ಕೂಡ, ಹಾಗೆ ಮಾಡಬೇಡ, ಹೀಗೆ ಹೇಳಬೇಡ ಎಂದು ನನ್ನನ್ನು ತಡೆಯದೇ ಅದಕ್ಕಿಂತ ಚೆನ್ನಾಗಿ ಏನಾದರೂ ಮಾಡುವಂತಿದ್ದರೆ ಅದನ್ನು ಹೇಳುವಂತಿರಬೇಕು' ಎಂದಿದ್ದಾರೆ ನಟಿ ಮೃಣಾಲ್ ಠಾಕೂರ್.  

ಅಂಬಿ ಕಡೆಯಿಂದ ವಿಷ್ಣು ರಾಜಕೀಯ ಪ್ರವೇಶಕ್ಕೆ ಪ್ಲಾನ್ ನಡೆದಿತ್ತು; ಯಾರ ವಿರುದ್ಧ ಗೊತ್ತಾ?

ಅಂದಹಾಗೆ, ನಟಿ ಮೃಣಾಲ್ ಠಾಕೂರ್ ಅವರು ತಮ್ಮ 'ಕಲ್ಯಾಣಿ ವಚ್ಚಾ ವಚ್ಚಾ' ಸಿನಿಮಾದ ಪಾತ್ರದ ಬಗ್ಗೆ ಕೂಡ ತುಂಬಾ ಎಕ್ಸೈಟ್ ಆಗಿ ಮಾತನಾಡಿದ್ದಾರೆ. 'ನನಗೆ ತೆಲುಗು ಸಿನಿಮಾಗಳೆಂದರೆ ಅಚ್ಚುಮೆಚ್ಚು. ಬಾಲಿವುಡ್ ಸಿನಿಮಾಗಳು ಕೂಡ ಇಷ್ಟ. ಸೌತ್ ಸಿನಿಮಾಗಳಲ್ಲಿ, ಅದರಲ್ಲೂ ನಾನು ನಟಿಸಿರುವ ತೆಲುಗು ಸಿನಿಮಾಗಳಲ್ಲಿ ಸಂಬಂಧಗಳ ಬಗ್ಗೆ, ಸಾಮಾಜಿಕ ಜವಾಬ್ದಾರಿ ಬಗ್ಗೆ ತುಂಬಾ ಚೆನ್ನಾಗಿ ಕಥೆಯಲ್ಲಿ ನಿರೂಪಿಸಿದ್ದಾರೆ. ನನಗದು ಇಷ್ಟವಾಗುತ್ತದೆ. ಏಕೆಂದರೆ, ನಮ್ಮ ಬದುಕು ಜನರ ಸುತ್ತಲೂ ಜನರಿಗಾಗಿಯೇ ನಡೆಯುತ್ತಾ ಇರುತ್ತದೆ. 

ನಟಿ ಗೀತಾ ನೆನಪಿದ್ಯಲ್ಲ ನಿಮಗೆ? ಅಮೆರಿಕಾದಿಂದ ಬಂದು ಈಗ ಮತ್ತೆ ಸಿನಿಮಾದಲ್ಲಿ ನಟಿಸ್ತಿರೋದ್ಯಾಕೆ..?

ಸೀತಾ ರಾಮಂ, ಹಾಯ್ ನನ್ನಾ, ದಿ ಫ್ಯಾಮಿಲಿ ಸ್ಟಾರ್, ಜೆರ್ಸಿ, ಕುಂಕಮ ಭಾಗ್ಯ,, ಲಸ್ಟ್ ಸ್ಟೋರೀಸ್, ಲವ್ ಸೋನಿಯಾ, ಸೂಪರ್ 30, ಗುಮ್ರಾಹ್, ಪಿಪ್ಪಾ ಹೀಗೆ ಲಿಸ್ಟ್‌ನಲ್ಲಿ ಸಾಕಷ್ಟಿವೆ. ತೆಲುಗು ಸಿನಿಮಾಗಳಿರಲಿ ಅಥವಾ ಹಿಂದಿ ಚಿತ್ರಗಳಿರಲಿ, ಅವುಗಳಲ್ಲಿ ನಟಿ ಮೃಣಾಲ್ ಠಾಕೂರ್ ಪಾತ್ರಗಳು ಮತ್ತೆ ಮತ್ತೆ ಸಿನಿಮಾ ನೋಡಬೇಕು ಎನ್ನುವಂತೆ ಮಾಡುತ್ತವೆ ಎನ್ನಬಹುದು. 

'ಆ ಕರಾಳ ರಾತ್ರಿ'ಯ ಬಗ್ಗೆ ಮಾತನಾಡಿದ ಅನುಪಮಾ ಗೌಡ; ಅಲ್ಲಿಂದ ಮುಂದಕ್ಕೆ ಜೀವನ ಹೇಗೆ ನಡೀತಿದೆ?

Latest Videos
Follow Us:
Download App:
  • android
  • ios