Asianet Suvarna News Asianet Suvarna News

ಅಬಕಾರಿ ಹಗರಣದಲ್ಲಿ ಹೈರಾಣದ ಆಪ್, ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ಕೋರ್ಟ್!

ದೆಹಲಿ ಅಬಕಾರಿ ಹಗರಣದಲ್ಲಿ ಆಪ್ ಸರ್ಕಾರ ಹೈರಾಣಾಗಿದೆ. ಸಿಎಂ ಕೇಜ್ರಿವಾಲ್ ಸೇರಿದಂತೆ ಕೆಲ ನಾಯಕರು ಜೈಲು ಸೇರಿದ್ದಾರೆ. ಈ ಪೈಕಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲಿನಿಂದ ಹೊರಬರವು ಮತ್ತೊಂದು ಆಸೆಯೂ ಕೈಗೂಡಿಲ್ಲ. ಕೋರ್ಟ್ ಇದೀಗ ಜಾಮೀನು ಅರ್ಜಿ ತಿರಸ್ಕರಿಸಿದೆ.

Delhi liquor scam Manish Sisodia Bail plea rejects by Rose avenue court ckm
Author
First Published Apr 30, 2024, 4:59 PM IST

ದೆಹಲಿ(ಏ.30)  ದೆಹಲಿ ಅಬಕಾರಿ ನೀತಿ ಹಗರಣದ ಕುಣಿಕೆ ಬಿಗಿಯಾಗುತ್ತಿದೆ. ತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ ಆಪ್ ನಾಯಕರಿಗೆ ತೀವ್ರ ತಲೆನೋವು ಎದುರಾಗಿದೆ. ಈಗಾಗಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆ ಮಾಡಿದ ಪ್ರಯತ್ನಗಳು ವಿಫಲವಾಗಿದೆ. ಇದರ ಬೆನ್ನಲ್ಲೇ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ 2ನೇ ಪ್ರಯತ್ನವೂ ಕೈಗೂಡಿಲ್ಲ. ಜಾಮೀನಿಗಾಗಿ ರೋಸ್ ಅವೆನ್ಯೂ ಕೋರ್ಟ್‌ಗೆ ಸಿಸೋಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

ಮನೀಶ್ ಸಿಸೋಡಿಯಾಗೆ ಮತ್ತೆ ತೀವ್ರ ಹಿನ್ನೆಡೆಯಾಗಿದೆ. ಇಷ್ಟೇ ಅಲ್ಲ ಆಪ್ ಸರ್ಕಾರಕ್ಕೂ ಮುಖಭಂಗವಾಗಿದೆ. ಬಂಧನವೇ ಅಕ್ರಮ ಎಂದಿರುವ ಆಪ್ ನಾಯಕರಿಗೆ ಜಾಮೀನು ಪಡೆಯಲು ಸಾಧ್ಯವಾಗುತ್ತಿಲ್ಲ.  ಮನೀಸ್ ಸಿಸೋಡಿಯಾ ತನಿಖೆ ವಿಳಂಭವಾಗುತ್ತಿರುವ ಕಾರಣ ಮುಂದಿಟ್ಟು ಜಾಮೀನು ನೀಡುವಂತೆ ರೋಸ್ ಅವೆನ್ಯೂ ಕೋರ್ಟ್‌ಗೆ 2ನೇ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಇಡಿ ಹಾಗೂ ಸಿಬಿಐ ಎರಡೂ ತನಿಖಾ ಸಂಸ್ಥೆಗಳು ಸಿಸೋಡಿಯಾಗೆ ಜಾಮೀನು ನೀಡದಂತೆ ವಾದ ಮಂಡಿಸಿತ್ತು.

ಅನಾರೋಗ್ಯಕ್ಕೆ ತುತ್ತಾದ ಪತ್ನಿಯ ಭೇಟಿಗೆ ದೆಹಲಿ ಮಾಜಿ ಡಿಸಿಎಂ ಸಿಸೋಡಿಯಾಗೆ ಬರಿ 6 ಗಂಟೆ ಅವಕಾಶ!

ಜಸ್ಟೀಸ್ ಸಂಜೀವ್ ಖನ್ನ, ದೀಪಾಂಕರ್ ದತ್ತಾ ಒಳಗೊಂಡ ಪೀಠ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ನಡೆಸಿತ್ತು. ಬಳಿಕ ಈ ಅರ್ಜಿಯನ್ನು ತಿರಸ್ಕರಿಸಿತು. ರೋಸ್ ಅವೆನ್ಯೂ ಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಇದೀಗ ಮನೀಶ್ ಸಿಸೋಡಿಯಾ ದೆಹಲಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಫೆಬ್ರವರಿ 2023ರಿಂದ ಮನೀಶ್ ಸಿಸೋಡಿಯಾ ಜೈಲುವಾಸದಲ್ಲಿದ್ದಾರೆ. 

ಇತ್ತ ದೆಹಲಿ ಅಬಕಾರಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹಾಗೂ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ಪುತ್ರಿ ಕೆ.ಕವಿತಾ ಅವರ ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಿಸಿದೆ. ಮೇ.7ರಂದು ಕೇಜ್ರಿವಾಲ್ ಹಾಗೂ ಕವಿತಾರನ್ನು ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಇದರ ನಡುವೆ ಕೇಜ್ರಿವಾಲ್ ಕೂಡ ಜಾಮೀನುಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಕೇಜ್ರಿವಾಲ್ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿಲ್ಲ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೇಜ್ರಿವಾಲ್‌ ಅವರನ್ನು ಮಾ.21ರಂದು ಹಾಗೂ ಕವಿತಾ ಅವರನ್ನು ಮಾ.15ರಂದು ಬಂಧಿಸಿತ್ತು.

ಮನೀಷ್‌ ಸಿಸೋಡಿಯಾಗೆ ಸಿಗದ ಬೇಲ್‌, 338 ಕೋಟಿ ವರ್ಗಾವಣೆಯ ಬಗ್ಗೆ ಅನುಮಾನವಿದೆ ಎಂದ ಸುಪ್ರೀಂ !

ಕೇಜ್ರಿವಾಲ್ ಅನುಪಸ್ಥಿತಿಯಲ್ಲಿ ಪತ್ನಿ ಸುನಿತಾ ಕೇಜ್ರಿವಾಲ್‌ ಅವರು ಲೋಕಸಭಾ ಚುನಾವಣೆ ಪ್ರಚಾರ ಅಖಾಡಕ್ಕೆ ಇಳಿದಿದ್ದಾರೆ. ಶನಿವಾರ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ಭರ್ಜರಿ ರೋಡ್‌ ಶೋ ಮಾಡಿದ್ದಾರೆ. 
 

Follow Us:
Download App:
  • android
  • ios