ವಿಜಯಪುರ: ಬೀಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಬಾವಿಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ಬಾಲಕರು ಸಾವು
ಈಜಲು ಬಾರದೆ ಇಬ್ಬರೂ ಗೆಳೆಯರು ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈಜು ಬರದೆ ಹೋದರೂ ಬಾಲಕರು ಬಾವಿಯಲ್ಲಿ ಸ್ನಾನಕ್ಕೆಂದು ತೆರಳಿದ್ದರು. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ವಿಜಯಪುರ(ಏ.30): ಬಾವಿಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. ಸೋಮಶೇಖರ್ ಆಲಮೇಲ್ (16), ಮಲಿಕ್ ನದಾಫ್ (16) ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕರಾಗಿದ್ದಾರೆ.
ಮೃತ ಬಾಲಕರು ಬೀಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಬಾವಿಯಲ್ಲಿ ಸ್ನಾನಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ.
ಬಾವಿಗೆ ಬಿದ್ದ ಬೆಕ್ಕು ರಕ್ಷಣೆಗೆ ಹೋದ ಐವರು ದುರಂತ ಸಾವು!
ಈಜಲು ಬಾರದೆ ಇಬ್ಬರೂ ಗೆಳೆಯರು ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈಜು ಬರದೆ ಹೋದರೂ ಬಾಲಕರು ಬಾವಿಯಲ್ಲಿ ಸ್ನಾನಕ್ಕೆಂದು ತೆರಳಿದ್ದರು. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.