ಆರ್‌ಸಿಬಿ ತಂಡ ಈ ಬಾರಿ ಐಪಿಎಲ್ ಟೂರ್ನಿಯ ಅಂತಿಮ ಹೊತ್ತಿನಲ್ಲಿ ಹೊಸ ಅಧ್ಯಾಯ ಆರಂಭಿಸಿದೆ. ಇದೀಗ ಆರ್‌ಸಿಬಿಯ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದೆ. ಈ ಪೈಕಿ ತಂಡದಲ್ಲಿರುವ ಜಸ್ಪ್ರೀತ್ ಬುಮ್ರಾ ಶೈಲಿಯ ಬೌಲರ್ ಭಾರಿ ಸಂಚಲನ ಸೃಷ್ಟಿಸಿದ್ದಾನೆ.
ಬೆಂಗಳೂರು(ಏ.30) ಐಪಿಎಲ್ 2024 ಟೂರ್ನಿಯಲ್ಲಿ ಆರ್‌ಸಿಬಿ ಅಬ್ಬರ ಟೂರ್ನಿಯ ಲೀಗ್ ಪಂದ್ಯಗಳು ಅಂತಿಮ ಘಟ್ಟ ತಲುಪುತ್ತಿದ್ದಂತೆ ಆರಂಭಗೊಂಡಿದೆ. ಸತತ 2 ಪಂದ್ಯ ಗೆದ್ದು ಎದುರಾಳಿಗಳಿಗೆ ನಡುಕ ಹುಟ್ಟಿಸಿರುವ ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದೆ. ಇದರ ನಡುವೆ ಆರ್‌ಸಿಬಿ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿದೆ. ಮುಂದಿನ ಪಂದ್ಯಕ್ಕೆ ಕಠಿಣ ಅಭ್ಯಾಸ ನಡೆಸುತ್ತಿರುವ ಆರ್‌ಸಿಬಿ ಪಾಳಯದಲ್ಲೊಬ್ಬ ವೇಗಿ ಜಸ್ಪ್ರೀತ್ ಬುಮ್ರಾ ಇದ್ದಾನೆ. ಈತ ಮುಂಬೈ ಇಂಡಿಯನ್ಸ್ ತಂಡದ ಬೌಲರ್ ಅಲ್ಲ. ಆದರೆ ಬುಮ್ರಾ ರೀತಿಯಲ್ಲೇ ಬೌಲಿಂಗ್ ಮಾಡುತ್ತಿದ್ದಾನೆ. ಆರ್‌ಸಿಬಿ ನೆಟ್ ಬೌಲರ್ ಮುಕೇಶ್ ಕುಮಾರ್ ಇದೀಗ ಭಾರಿ ವೈರಲ್ ಆಗಿದ್ದಾನೆ.
ಆರ್‌ಸಿಬಿ ತಂಡದಲ್ಲಿನ ಆಟಗಾರರಿಗೆ ಅಭ್ಯಾಸದ ವೇಳೆ ಬೌಲಿಂಗ್ ಮಾಡುವ ನೆಟ್ ಬೌಲರ್ ಈ ಮುಕೇಶ್ ಕುಮಾರ್. ಈತನ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಕೇಶ್ ಕುಮಾರ್‌ಗೆ ಅವಕಾಶ ನೀಡುವಂತೆ ಅಭಿಮಾನಿಗಳು ಸಲಹೆ ನೀಡಿದ್ದಾರೆ. ಮುಕೇಶ್ ಕುಮಾರ್ ಆರ್‌ಸಿಬಿ ಬೌಲಿಂಗ್ ಸಮಸ್ಯೆಗೆ ಉತ್ತರ ನೀಡಬಲ್ಲ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಕೂತು ಮಾತಾಡೋದು ಸುಲಭ..': ನಗುನಗುತ್ತಲೇ ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ
ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಆರ್‌ಸಿಬಿ ನೆಟ್ ಬೌಲರ್ ಮುಕೇಶ್ ಕುಮಾರ್ ಬೌಲಿಂಗ್ ಶೈಲಿಯಲ್ಲಿ ಸಾಮ್ಯತೆ ಇದೆ. ಬುಮ್ರಾ ರೀತಿಯಲ್ಲೇ ರನ್ ಅಪ್, ಅದೇ ರೀತಿಯ ಆ್ಯಕ್ಷನ್‌ನಲ್ಲಿ ಮುಕೇಶ್ ಕುಮಾರ್ ಬೌಲಿಂಗ್ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ಅಷ್ಟೇ ಅತ್ಯುತ್ತಮ ಬೌಲಿಂಗ್ ದಾಳಿ ನಡೆಸುವ ಮೂಲಕ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮ ಅಭ್ಯಾಸ ಒದಗಿಸುತ್ತಿದ್ದಾರೆ.
2022ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನೆಟ್ ಬೌಲರ್ ಆಗಿದ್ದ ಮುಕೇಶ್ ಕುಮಾರ್ ಈ ಬಾರಿ ಆರ್‌ಸಿಬಿ ನೆಟ್ ಬೌಲರ್ ಆಗಿ ಸೇರಿಕೊಂಡಿದ್ದಾನೆ. ಈತನ ವಿಡಿಯೋ ಒಂದು ವೈರಲ್ ಆಗಿದೆ. ಈ ಪ್ರತಿಭೆಗೆ ಅಕಾಶ ನೀಡಿ ಅನ್ನೋ ಮನವಿಗಳು, ಪ್ರತಿಕ್ರೆಯೆಗಳು ಹೆಚ್ಚಾಗಿದೆ.
ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಆರಂಭಿಕ 8 ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿತ್ತು. ಕೇವಲ 1 ಗೆಲುವು ದಾಖಲಿಸಿ ಅಭಿಮಾನಿಗಳು ಬೇಸರಕ್ಕೆ ಕಾರಣಾಗಿತ್ತು. ಆದರೆ ಕಳೆದೆರಡು ಪಂದ್ಯದಲ್ಲಿ ಆರ್‌ಸಿಬಿ ನೀಡಿದ ಪ್ರದರ್ಶನ 7 ಸೋಲನ್ನೇ ಮರೆಸಿ ಬಿಟ್ಟಿದೆ. ಅದ್ಭುತ, ದಾಖಲೆಯ ಬ್ಯಾಟಿಂಗ್ ಪ್ರದರ್ಶನಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಸತತ 2 ಪಂದ್ಯ ಗೆದ್ದರೂ ಆರ್‌ಸಿಬಿ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೊನೆಯ ಸ್ಥಾನದಲ್ಲಿರುವ ಅಂದರೆ 10ನೇ ಸ್ಥಾನದಲ್ಲಿರುವ ಆರ್‌ಸಿಬಿ ಒಟ್ಟು 10 ಪಂದ್ಯಗಳಿಂದ 3 ಗೆಲುವು ಸಾಧಿಸಿ 6 ಅಂಕ ಸಂಪಾದಿಸಿದೆ.
ಮೋದಿ ಸ್ಟೇಡಿಯಂನಲ್ಲಿ ಘರ್ಜಿಸಿದ ವಿಲ್ ಜ್ಯಾಕ್ಸ್; ಆರ್‌ಸಿಬಿಗೆ ಮತ್ತೊಂದು ಗೆಲುವು
