ತಾಯಂದಿರ ದಿನದಂತೆ ಪತ್ನಿಯರ ದಿನ ಆಚರಿಸಬೇಕು ಸಾಮಾಜಿಕ ನ್ಯಾಯ ಖಾತೆ ಸಚಿವ ಅಠವಾಳೆ ಹೇಳಿಕೆ ಸಾಂಗ್ಲಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು

ತಾಯಿಯರ ದಿನದಂತೆ ಪತ್ನಿಯರ ದಿನವನ್ನು ಆಚರಿಸಬೇಕು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ರಾಮ್‌ದಾಸ್‌ ಅಠವಾಳೆ ಹೇಳಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಠವಾಳೆ, ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ. ಹಾಗೆಯೇ ಪತ್ನಿ ಪತಿಯ ಪ್ರತಿ ಏಳು ಬೀಳುಗಳ ಜೊತೆ ಇರುತ್ತಾಳೆ. ಪ್ರತಿಯೊಬ್ಬ ಯಶಸ್ವಿ ಗಂಡಿನ ಹಿಂದೆ ಓರ್ವ ಮಹಿಳೆ ಇರುತ್ತಾಳೆ. ಹೀಗಾಗಿ ನಾವು ಪತ್ನಿಯರ ದಿನವನ್ನು ಕೂಡ ಆಚರಿಸಬೇಕು ಎಂದು ಅಠವಾಳೆ ಹೇಳಿದರು. ಅಂತಾರಾಷ್ಟ್ರೀಯ ತಾಯಂದಿರ ದಿನವನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. 

ಇತ್ತ ಸಚಿವರು ಪತ್ನಿಯರ ದಿನ ಆಚರಿಸಬೇಕು ಎನ್ನುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಾಸ್ಯ ಶುರು ಮಾಡಿದ್ದಾರೆ. ಒಬ್ಬರು ಪ್ರತಿದಿನವೂ ಪತ್ನಿಯದ್ದೇ ದಿನವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮದುವೆಯಾದ ಯಾವುದೇ ಗಂಡು ಮದುವೆಯ ನಂತರ ಪತ್ನಿಯದಲ್ಲದ ದಿನವನ್ನು ಆಚರಿಸಿರುವುದುಂಟೇ ಎಂದು ಮತ್ತೊಬ್ಬರು ಕೇಳಿದ್ದಾರೆ. 

ಶೇ.75 ರಷ್ಟು ಮೀಸಲಾತಿ ಪರ ಕೇಂದ್ರ ಸಚಿವ ಅಠವಾಳೆ ಬ್ಯಾಟಿಂಗ್!

ಇನ್ನು ಕೆಲವರು ದೇಶದಲ್ಲಿ ನೂರಾರು ಸಮಸ್ಯೆಗಳಿರುವಾಗ ಸಚಿವರೊಬ್ಬರು ಪತ್ನಿಯರ ದಿನಕ್ಕೆ ಬೇಡಿಕೆ ಇಡುತ್ತಿರುವುದು ನಾಚಿಕೆಗೇಡು ಎಂದಿದ್ದಾರೆ. ಮತ್ತೆ ಕೆಲವರು ವ್ಯಂಗ್ಯವಾಗಿ ನಾವು ಕೂಡ ನಿಮ್ಮೊಂದಿಗೆ ಇದ್ದೇವೆ. ನಾವು ಈ ಕೂಡಲೇ ಪತ್ನಿಯರ ದಿನದ ಆಚರಣೆಯನ್ನು ಜಾರಿಗೆ ತರುವಂತೆ ಪ್ರಧಾನಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು. ಮತ್ತೊಬ್ಬ ಪ್ರತಿದಿನವೂ ಪತ್ನಿಯ ದಿನವೇ ಆಕೆಗೆ ರಜೆ ಎಂಬುದು ಇಲ್ಲ ಆಕೆಗೆ ಸಂಬಳ ಎಂಬುದು ಇರುವುದಿಲ್ಲ. ನಿವೃತ್ತಿಯೂ ಇರುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಗೆ ಇದರಿಂದ ಕಷ್ಟವಾಗಬಹುದು ಎಂದು ಮತ್ತೊರ್ವ ವ್ಯಂಗ್ಯವಾಡಿದ್ದಾರೆ. ಹಾಗೆಯೇ ಯಾಕೆ ಇಡೀ ದೇಶವೇ ಶೋಕಿಸಬೇಕೆಂದು ಬಯಸುತ್ತೀರಿ ಎಂದು ಓರ್ವರು ತಮಾಷೆಯ ಕಾಮೆಂಟ್ ಮಾಡಿದ್ದಾರೆ.

Scroll to load tweet…
Scroll to load tweet…
Scroll to load tweet…

ದೇಶದಲ್ಲಿ ಜಾತಿ ವ್ಯವಸ್ಥೆ ನಿರ್ನಾಮ ಆಗಬೇಕು. ಇದಕ್ಕೆ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಕಳೆದ ವರ್ಷ ಜೂನ್‌ನಲ್ಲಿ ಹೇಳಿದ್ದರು. ಈ ರೀತಿ ಸಮಾಜ ನಿರ್ಮಾಣಕ್ಕೆ ಕರ್ನಾಟಕದಲ್ಲಿ ಬಸವಣ್ಣ ಅನುಸರಿಸಿದ ಮಾರ್ಗ ಪಾಲಿಸಬೇಕು ಎಂದು ರಾಮದಾಸ್ ಹೇಳಿದ್ದರು. ಕರ್ನಾಟಕದಲ್ಲಿ ಬಸವಣ್ಣ ಲಿಂಗಾಯಿತ ಧರ್ಮ ಹುಟ್ಟು ಹಾಕಿದರು. ಅಂತರ್ಜಾತಿ ವಿವಾಹಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ಈ ವ್ಯವಸ್ಥೆ ದೇಶದಲ್ಲಿ ಜಾರಿಯಾದರೆ ಜಾತಿ ವ್ಯವಸ್ಥೆ ನಿರ್ಮೂಲನೆ ಆಗಲಿದೆ ಎಂದು ಅಠಾವಳೆ ಹೇಳಿದ್ದರು. ಜಾತಿ ಗಣತಿ ಕುರಿತು ಪ್ರತಿಕ್ರಿಯೆ ವೇಳೆ ಅಠಾವಳೆ ಕರ್ನಾಟಕ ಹಾಗೂ ಬಸವಣ್ಣನ ಆದರ್ಶಗಳನ್ನು ನೆನೆದಿದ್ದಾರೆ.

ಆರ್‌ಎಸ್‌ಎಸ್‌ ಮುಖ್ಯಸ್ಥರ ವಿರುದ್ಧ ಅಠವಾಳೆ ಆಕ್ರೋಶ: ಎಲ್ಲರಿಗೂ ಸೇರಿದ್ದಂತೆ ಈ ದೇಶ!