ಬಹುಅಂತಸ್ತಿನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ 9 ಜನರು ಸಾವನ್ನಪ್ಪಿದ ಭೀಕರ ಘಟನೆ ದೆಹಲಿಯ ಪಾಲಂ ಪ್ರದೇಶದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನವದೆಹಲಿ: ಬಹುಅಂತಸ್ತಿನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ 9 ಜನರು ಸಾವನ್ನಪ್ಪಿದ ಭೀಕರ ಘಟನೆ ದೆಹಲಿಯ ಪಾಲಂ ಪ್ರದೇಶದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಾಯ್ತು?:

ರಾಜೇಂದ್ರ ಕಶ್ಯಪ್‌ ಎಂಬ ವ್ಯಾಪಾರಿಗೆ ಸೇರಿದ ಕಟ್ಟಡದ ನೆಲಮಹಡಿ, ಮೊದಲ ಮಹಡಿಯಯಲ್ಲಿ ಬಟ್ಟೆ ಮತ್ತು ಸೌಂದರ್ಯವರ್ಧಕ ವಸ್ತುಗಳ ಶೋರೂಂ ಇದೆ. ಉಳಿದ ಎರಡು ಮಹಡಿಗಳಲ್ಲಿ ರಾಜೇಂದ್ರ ಕಶ್ಯಪ್‌, ತಮ್ಮ ಪತ್ನಿ, 5 ಗಂಡು ಮಕ್ಕಳು, ಓರ್ವ ಪುತ್ರಿ, ನಾಲ್ವರು ಸೊಸೆಯರು ಮತ್ತು 7 ಮೊಮ್ಮಕಳೊಂದಿಗೆ ವಾಸವಿದ್ದಾರೆ. ಘಟನೆ ನಡೆದಾಗ ಕಶ್ಯಪ್‌ ಮತ್ತು ಅವರ ಪುತ್ರ ಹಾಗೂ ಅವರ ಕುಟುಂಬ ಸದಸ್ಯರು ಮನೆಯಲ್ಲಿ ಇರಲಿಲ್ಲ.

ಕಟ್ಟಡ ಮೊದಲ ಮಹಡಿಯಲ್ಲಿ ಬೆಂಕಿ

ಬುಧವಾರ ಮುಂಜಾನೆ ಕಟ್ಟಡ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿ ದಹನಶೀಲ ವಸ್ತುಗಳು ಇದ್ದ ಕಾರಣ ಬಹುಬೇಗ ಬೆಂಕಿ ಎಲ್ಲೆಡೆ ವ್ಯಾಪಿಸಿದೆ. ಈ ವೇಳೆ ಮನೆಯೊಳಗಿದ್ದವರು ಹೊರಗೆ ಬರಲಾಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಮೂವರು ಕಟ್ಟಡದಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.

ಬೆಂಕಿ ಸುದ್ದಿ ತಿಳಿದ ತಕ್ಷಣವೇ 30 ಆ್ಯಂಬುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಯತ್ನ ಮಾಡಿದವಾದರೂ, ಮಧ್ಯಾಹ್ನದ ವೇಳೆಗಷ್ಟೇ ಪೂರ್ಣ ಪ್ರಮಾಣದಲ್ಲಿ ಬೆಂಕಿ ನಂದಿದೆ.