ಆರ್‌ಎಸ್‌ಎಸ್‌ ಮುಖ್ಯಸ್ಥರ ಹೇಳಿಕೆ ಖಂಡಿಸಿದ ಕೇಂದ್ರ ಸಚಿವ| ಭಾರತದಲ್ಲಿ ನೆಲೆಸಿರುವ ಎಲ್ಲರೂ ಹಿಂದೂಗಳೇ ಎಂದ ಮೋಹನ್ ಭಾಗವತ್| ಭಾರತ ಎಲ್ಲ ಧರ್ಮಗಳ ನೆಲವೀಡು ಎಂದ ರಾಮದಾಸ್ ಅಠವಾಳೆ| 'ಭಾರತ ಹಿಂದೊಮ್ಮೆ ಬೌದ್ಧ ಧರ್ಮ ಅನುಯಾಯಿಗಳ ದೇಶವಾಗಿತ್ತು'| ಭಾರತ ಕೇವಲ ಹಿಂದೂಗಳ ದೇಶ ಎಂದು ಹೇಳುವುದು ಸರಿಯಲ್ಲ ಎಂದ ಅಠವಾಳೆ|

ನವದೆಹಲಿ(ಡಿ.27): ಭಾರತದಲ್ಲಿ ವಾಸಿಸುವ ಎಲ್ಲ ಪ್ರಜೆಗಳೂ ಹಿಂದೂಗಳು ಎಂಬ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು, ಕೇಂದ್ರ ಸಚಿವ ರಾಮದಾಸ್ ಅಠವಾಳೆ ಖಂಡಿಸಿದ್ದಾರೆ.

ಭಾರತದಲ್ಲಿ ವಿವಿಧ ಕಾಲಘಟ್ಟದಲ್ಲಿ ವಿವಿಧ ಧರ್ಮಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಭಾರತ ಹಿಂದೊಮ್ಮೆ ಬೌದ್ಧ ಧರ್ಮ ಅನುಯಾಯಿಗಳ ದೇಶವಾಗಿತ್ತು ಎಂಬುದನ್ನು ನಾವು ಮರೆಯಬಾರದು ಎಂದು ಅಠವಾಳೆ ಹೇಳಿದ್ದಾರೆ.

ಭಾರತೀಯ ಮುಸ್ಲಿಮರು ಚೆನ್ನಾಗಿರಲು ಕಾರಣವೇನು?: ಭಾಗವತ್ ಅನಿಸಿಕೆ ಒಪ್ಪೋಣವೇನು?

ಭಾರತದಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್, ಬೌದ್ಧ, ಜೈನ ಹೀಗೆ ಅನೇಕ ಧರ್ಮಗಳು ಅಸ್ತಿತ್ವ ಕಂಡುಕೊಂಡಿವೆ. ಈ ಹಿನ್ನೆಲೆಯಲ್ಲಿ ಭಾರತ ಕೇವಲ ಹಿಂದೂಗಳ ದೇಶ ಎಂದು ಹೇಳುವುದು ಸರಿಯಲ್ಲ ಎಂದು ಅಠವಾಳೆ ಅಭಿಪ್ರಾಯಪಟ್ಟಿದ್ದಾರೆ.

Scroll to load tweet…

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೈದರಾಬಾದ್‌ನಲ್ಲಿ ಮಾತನಾಡುತ್ತಾ, ಭಾರತದಲ್ಲಿ ನೆಲೆಸಿರುವ ಎಲ್ಲಾ ಪ್ರಜೆಗಳು ಅವರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಅವರನ್ನು ಹಿಂದೂಗಳು ಎಂದು ನಾವು ಪರಿಗಣಿಸುತ್ತೇವೆ ಎಂದು ಹೇಳಿದ್ದರು.

ಗೋಹತ್ಯೆಗಳ ಹೆಸರಿನಲ್ಲಿ ಹಿಂದೂ ಸಂಸ್ಕೃತಿ ಹಾನಿಗೆ ಸಂಚು: ಭಾಗವತ್ ಕಿಡಿ