ಸಿನಿಮಾದ ಕ್ಲೈಮ್ಯಾಕ್ಸ್ ಮೀರಿಸ್ತಿದೆ ಈ ದೃಶ್ಯ: ಮೊಸಳೆಯಿಂದ ಜಿಂಕೆ ಗ್ರೇಟ್ ಎಸ್ಕೇಪ್

ಬೇಟೆಯಲ್ಲಿ ಒಂದಕ್ಕೆ ಹಸಿವು ನೀಗಿಸುವ ಖುಷಿಯಾದರೆ ಮತ್ತೊಂದಕ್ಕೆ ಜೀವ ಉಳಿಸಿಕೊಳ್ಳವು ಕಸಿವಿಸಿ. ಅಂತಹ ರೋಚಕ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದ್ದು,  ಮೈ ಜುಮ್ಮೆನಿಸುತ್ತಿದೆ.

This scene surpasses the climax of the movie, the great escape of the deer from the crocodile akb

ನವದೆಹಲಿ:  ಪ್ರಾಣಿಗಳ ಪರಸ್ಪರ ಕಿತ್ತಾಟ ಹಾಗೂ ಅನ್ಯೋನ್ಯತೆಯ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.  ಪ್ರಾಣಿಗಳ ಜೈವಿಕ ಸರಪಳಿಯಲ್ಲಿ ಹುಲ್ಲನ್ನು ತಿಂದು ಮೊಲ ಮೊಲವನ್ನು ತಿಂದು ಹುಲಿ ಹೀಗೆ ಒಬ್ಬರನೊಬ್ಬರು ತಿಂದು ಬದುಕುವುದು ಸಾಮಾನ್ಯ ಇದು ಪ್ರಕೃತಿಗೂ ಸೈ. ಆದರೆ ಈ ಬೇಟೆಯಲ್ಲಿ ಒಂದಕ್ಕೆ ಹಸಿವು ನೀಗಿಸುವ ಖುಷಿಯಾದರೆ ಮತ್ತೊಂದಕ್ಕೆ ಜೀವ ಉಳಿಸಿಕೊಳ್ಳವು ಕಸಿವಿಸಿ. ಅಂತಹ ರೋಚಕ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದ್ದು,  ಮೈ ಜುಮ್ಮೆನಿಸುತ್ತಿದೆ. ಈ ವಿಡಿಯೋವನ್ನು ಸಿನಿಮಾ ನಿರ್ಮಾಪಕ ವಿನೋದ್ ಕಪ್ರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. 

50 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಜಿಂಕೆಯೊಂದು ನದಿಯಲ್ಲಿ ಈಜುತ್ತಾ ಒಂದು ಭಾಗದಿಂದ ಮತ್ತೊಂದು ಭಾಗದ ಕಾಡಿಗೆ ಹೊರಟಿದೆ. ಈ ವೇಳೆ ನೀರಿನಲ್ಲಿದ್ದ ಮೊಸಳೆಯೊಂದು ಜಿಂಕೆಯನ್ನು ನೋಡಿದ್ದು, ಅದನ್ನು ಹಿಂದೆಯಿಂದ ಬೆನ್ನಟ್ಟಲು ಶುರು ಮಾಡಿದೆ. ಇತ್ತ ಜಿಂಕೆಗೆ ತನ್ನ ಬೆನ್ನ ಹಿಂದೆ ಮೊಸಳೆ ಬರುತ್ತಿದೆ ಎಂದು ಗೊತ್ತಾಗಿದೆ ತಡ ತನ್ನ ವೇಗ ಹೆಚ್ಚಿಸಿಕೊಂಡು ಕೂದಲೆಳೆ ಅಂತರದಲ್ಲಿ ಜಿಂಕೆಯಿಂದ ಪಾರಾಗಿದೆ. ಈ ವಿಡಿಯೋದಲ್ಲಿ ಮೊದಲಿಗೆ ಈಜುತ್ತಿರುವ ಜಿಂಕೆಯ ಕೊಂಬುಗಳು ಮಾತ್ರ ಕಾಣಿಸುತ್ತಿರುತ್ತವೆ. ಆದರೆ ಯಾವಾಗ ತನ್ನ ಬೆನ್ನ ಹಿಂದೆ ಮೊಸಳೆ ಇದೆ ಎಂಬುದು ಜಿಂಕೆಗೆ ಗೊತ್ತಾಯ್ತೋ ನೀರಿನಲ್ಲೇ ನೆಗೆಯಲು ಶುರು ಮಾಡಿದ ಅದು ಕ್ಷಣದಲ್ಲಿ ಎಸ್ಕೇಪ್ ಆಗಿದೆ. 

ಬೈಕ್‌ ಮೇಲೆ ಮೊಸಳೆಯ ಮಲಗಿಸಿ ಅದರ ಮೇಲೆ ಕೂತು ಯುವಕನ ಸವಾರಿ!

ಇತ್ತ ಈ ದೃಶ್ಯವನ್ನು ಸೆರೆ ಹಿಡಿದ ಕ್ಯಾಮರಾ ಮ್ಯಾನ್‌ಗಳು ಅದೇ ನದಿಯಲ್ಲಿ ಬೋಟೊಂದರಲ್ಲಿ ಈ ದೃಶ್ಯವನ್ನು ಚೇಸ್ ಮಾಡುತ್ತಿದ್ದು, ಅವರು ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವ ಜಿಂಕೆಯನ್ನು ಬೊಬ್ಬೆ ಹೊಡೆದು ಪ್ರೋತ್ಸಾಹಿಸುವುದನ್ನು ಕೇಳಬಹುದಾಗಿದೆ.  ಒಟ್ಟಿನಲ್ಲಿ ಜಿಂಕೆ ಮೊಸಳೆ ಬಾಯಿಯಿಂದ ಕ್ಷಣದಲ್ಲಿ ಎಸ್ಕೇಪ್ ಆಗಿ ಬದುಕಿದೆನೋ ಬಡ ಜೀವ ಎಂದು ಕಾಡಿನೊಳಗೋಡಿದರೆ, ಅತ್ತ ಮೊಸಳೆ ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಿರುಗಿದೆ. 

ಛಂಗನೇ ನೀರೊಳಗೆ ನೆಗೆದು ಮೊಸಳೆಯ ಬೇಟೆಯಾಡಿದ ಚಿರತೆ.. ವಿಡಿಯೋ ವೈರಲ್

ವಿಡಿಯೋ ನೋಡಿದ ಅನೇಕರು ಇದೊಂದು ಗ್ರೇಟ್ ಎಸ್ಕೇಪ್ ಎಂದು ಜಿಂಕೆಯನ್ನು ಶ್ಲಾಘಿಸಿದ್ದಾರೆ.  ಮತ್ತೊಬ್ಬರು ಮೊಸಳೆಯ ಮುಖಕ್ಕೆ ಒದ್ದು ಅದು ಹೇಗೆ ಎಸ್ಕೇಪ್ ಆಯ್ತು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಈ ದೃಶ್ಯ ನಂಬಲಾಗುತ್ತಿಲ್ಲ, ಈ ಜಿಂಕೆ ಶ್ರೇಷ್ಠ ಹೋರಾಟಗಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ವ್ಯಕ್ತಿಯನ್ನು ಅಟ್ಟಿಸಿಕೊಂಡು ಬಂದ ಮೊಸಳೆ: ಭಯಾನಕ ದೃಶ್ಯ ನೋಡಿ ಬೆಚ್ಚಿಬಿದ್ದ ನೆಟ್ಟಿಗರು..!

 

Latest Videos
Follow Us:
Download App:
  • android
  • ios