ವ್ಯಕ್ತಿಯನ್ನು ಅಟ್ಟಿಸಿಕೊಂಡು ಬಂದ ಮೊಸಳೆ: ಭಯಾನಕ ದೃಶ್ಯ ನೋಡಿ ಬೆಚ್ಚಿಬಿದ್ದ ನೆಟ್ಟಿಗರು..!
ಮೊಸಳೆಯೊಂದು ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೆರಿಕದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಮೊಸಳೆ ನೋಡಿದ್ರೆ ಯಾರಿಗೆ ಭಯವಾಗಲ್ಲ ಹೇಳಿ. ಅದನ್ನು ಮೃಗಾಲಯದೊಳಗೆ ನೋಡಿದ್ರೂ ಅಷ್ಟೇ, ನಿಮ್ಮ ಮೊಬೈಲ್, ಲ್ಯಾಪ್‌ಟಾಪ್‌ನಲ್ಲಿ ನೋಡಿದ್ರೂ ಭಯವಾಗುತ್ತದೆ. ಇನ್ನು, ನಿಮ್ಮ ಹಿಂದೆ ಅಥವಾ ಮುಂದೆ ಮೊಸಳೆ ನಿಜಕ್ಕೂ ಇದ್ರೆ ಅದನ್ನು ನೋಡಿ ನಿಮಗೆಷ್ಟು ಆತಂಕವಾಗ್ಬೋದು. ಕ್ಯೂಬಾದ ಮೊಸಳೆಯು ವ್ಯಕ್ತಿಯೊಬ್ಬರನ್ನು ಅಟ್ಟಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಒಂದು ಕ್ಷಣ ಬೆಚ್ಚಿರುವುದಂತೂ ಖಂಡಿತ. ನಂತರ ಆ ವ್ಯಕ್ತಿಯ ಸ್ಥಿತಿ ಏನಾಯಿತೋ ಎಂಬ ಬಗ್ಗೆ ಸರಿಯಾಗಿ ಮಾಹಿತಿ ತಿಳಿದುಬಂದಿಲ್ಲ.
ಯುನೈಟೆಡ್ ಸ್ಟೇಟ್ಸ್‌ನ ಥೀಮ್ ಪಾರ್ಕ್ ಮತ್ತು ವನ್ಯಜೀವಿ ಸಂರಕ್ಷಣೆ ಕ್ಯೂಬಾ ಮೊಸಳೆಯ ಈ ಕಿರು ಕ್ಲಿಪ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಆಗಸ್ಟ್ 18 ರಂದು ಅಪ್‌ಲೋಡ್ ಮಾಡಲಾದ ಈ ವಿಡಿಯೋ ಈಗಾಗಲೇ ಸುಮಾರು 1.3 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು 7,800ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಅಲ್ಲದೆ, 1,200 ಕ್ಕೂ ಹೆಚ್ಚು ನೆಟ್ಟಿಗರು ಕಮೆಂಟ್ ಮಾಡಿದ್ದು, ಹಾಗೆ ಈ ಚಿಕ್ಕ ವಿಡಿಯೋ ಕ್ಲಿಪ್ ಅನ್ನು ಸಾಮಾಜಿಕ ಜಾಲತಾಣದಲ್ಲಿ 11 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿಕೊಂಡಿದ್ದಾರೆ.
ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಮೊಸಳೆ: ವಿಡಿಯೋ ವೈರಲ್
ಇನ್ನು, ಸಾಮಾಜಿಕ ಮಾಧ್ಯಮ ಪೋಸ್ಟ್ ಪ್ರಕಾರ, ಈ ಚಿಕ್ಕ ವಿಡಿಯೋ ಕ್ಲಿಪ್‌ನಲ್ಲಿರುವ ಮೊಸಳೆಯ ಹೆಸರು ಚೈನ್ಸಾ ಎಂದು ತಿಳಿದುಬಂದಿದೆ. ಬೃಹತ್ ಸರೀಸೃಪವು ಗ್ಯಾಟರ್ಲ್ಯಾಂಡ್ ಒರ್ಲ್ಯಾಂಡೋದಲ್ಲಿನ ಅದರ ಜಾಗದ ಸುತ್ತಲೂ ವೇಗವಾಗಿ ಓಡುತ್ತಿರುವುದನ್ನು ದಾಖಲಿಸಲಾಗಿದೆ. "ಚೈನ್ಸಾ ಇನ್ ಆಕ್ಷನ್. ನಮ್ಮ ಅದ್ಭುತ ಕ್ಯೂಬನ್ ಮೊಸಳೆ!" ಎಂದು ಈ ವಿಡಿಯೋಗೆ ಶಿರ್ಷಿಕೆ ನೀಡಲಾಗಿದೆ.
ಈ ಕೆಳಗಿರುವ ವಿಡಿಯೋವನ್ನು ನೀವೇ ನೋಡಿ..
ಈ ಚಕ್ಕ ವಿಡಿಯೋ ಕ್ಲಿಪ್‌ನಲ್ಲಿ, ಥೀಮ್ ಪಾರ್ಕ್‌ನಲ್ಲಿ ಮೊಸಳೆಯ ಜಾಗದಲ್ಲಿ ವ್ಯಕ್ತಿಯೊಬ್ಬರು ಅದರಿಂದ ದೂರ ಓಡಿಹೋಗುತ್ತಿರುವುದು ಕಂಡುಬಂದಿದೆ. "ಫ್ಲೋರಿಡಿಯನ್ ಆಗಿ, ಇದು ನಾನು ನೋಡಿದ ಅತ್ಯಂತ ಭಯಾನಕ ವಿಷಯವಾಗಿದೆ" ಎಂದು ಕಾಮೆಂಟ್ ವಿಭಾಗದಲ್ಲಿ ಒಬ್ಬ ಬಳಕೆದಾರರು ಬರೆದಿದ್ದಾರೆ. "ವಾವ್ ... ನಾನು ಗೇಟರ್ ಅನ್ನು ವಾಸ್ತವವಾಗಿ ಬಹುತೇಕ ನಾಗಾಲೋಟದಿಂದ ಓಡುವುದನ್ನು ನೋಡಿಲ್ಲ.. ಅದ್ಭುತ!" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಹಾಗೆ, "ನಾನು ಇದನ್ನು ನೋಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ! ಹಾಗೆ, ನಂಬಲಾಗದ ಮತ್ತು ಭಯಾನಕ!" ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, "ದುಃಸ್ವಪ್ನಗಳನ್ನು ಮಾಡಲಾದ ವಸ್ತು!" ಎಂದು ನಾಲ್ಕನೆಯ ವ್ಯಕ್ತಿ ಕಮೆಂಟ್ ಮಾಡಿದ್ದಾರೆ. ಅದೇ ರೀತಿ, ಸಾವಿರಾರು ನೆಟ್ಟಿಗರು ವಿಭಿನ್ನವಾಗಿ ಕಮೆಂಟ್ ಮಾಡಿದ್ದಾರೆ.
ಫೇಸ್‌ಬುಕ್ ಬಳಕೆದಾರರು "ಗೇಟರ್‌ಗಳು ಪರಭಕ್ಷಕಗಳನ್ನು ಹೊಂಚು ಹಾಕುತ್ತವೆ ಮತ್ತು ನಿಜವಾಗಿಯೂ ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಸ್ವಲ್ಪ ಸಮಯದವರೆಗೆ ಮಾತ್ರ. ಆದ್ದರಿಂದ ಅವು ನಿಮ್ಮನ್ನು ಬಹಳ ಸಮಯದವರೆಗೆ ಅಥವಾ ಕನಿಷ್ಠ ಭೂಮಿಯಲ್ಲಿ ಹಿಂಬಾಲಿಸುತ್ತಾರೆ ಎಂದು ನಿರೀಕ್ಷಿಸಬೇಡಿ. ಅವು ಮೊದಲು ಶಕ್ತಿಯನ್ನು ಉಳಿಸುತ್ತದೆ ಮತ್ತು ಅಗ್ರಗಣ್ಯ." ಎಂದು ಕಮೆಂಟ್ ಮಾಡಿದ್ದಾರೆ.
ಮೊಸಳೆ ಜೊತೆ ಚೆಲ್ಲಾಟ ಆಡಲು ಹೋಗಿ ಕೈ ಕಳೆದುಕೊಂಡ ಯುವಕ : ವಿಡಿಯೋ ವೈರಲ್
ಈ ಮಧ್ಯೆ, ನ್ಯೂಸ್ ವೀಕ್ ಪ್ರಕಾರ, ಕ್ಯೂಬನ್ ಮೊಸಳೆಗಳು ಸಾಮಾನ್ಯವಾಗಿ 10 ಅಡಿ ಉದ್ದದವರೆಗೆ ಬೆಳೆಯುತ್ತವೆ. ಅವು ಚಿಕ್ಕ ಕಾಲುಗಳನ್ನು ಹೊಂದಿದ್ದರೂ ಸಹ, ಈ ಪ್ರಭೇದಗಳು ಗಂಟೆಗೆ 15 ರಿಂದ 22 ಮೈಲುಗಳಷ್ಟು ದೂರ ವೇಗವಾಗಿ ಚಲಿಸಬಹುದು. ಈ ಮೊಸಳೆಗಳು ಓಡುವಾಗ 100 ಅಡಿಗಳವರೆಗೆ ಜೋರಾಗಿ ಓಡಬಹುದು, ಆದರೆ ಅವು ಸುಲಭವಾಗಿ ದಣಿಯುವುದರಿಂದ ಈ ರೀತಿಯಾಗಿ ಹೆಚ್ಚು ಬೇಟೆಯಾಡುವುದಿಲ್ಲ ಎಂದು ತಿಳಿದುಬಂದಿದೆ.