ಛಂಗನೇ ನೀರೊಳಗೆ ನೆಗೆದು ಮೊಸಳೆಯ ಬೇಟೆಯಾಡಿದ ಚಿರತೆ.. ವಿಡಿಯೋ ವೈರಲ್
ಚಿರತೆಯೊಂದು ನೀರೊಳಗೆ ಈಜಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 4 ಸೆಕೆಂಡ್‌ನ ಈ ವಿಡಿಯೋವನ್ನು ಐದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಚುರುಕುತನ ಹಾಗೂ ಶಕ್ತಿ ಸಾಮರ್ಥ್ಯಕ್ಕೆ ಹೆಸರಾದ ಚಿರತೆಗಳು ಅತ್ಯಂತ ವೇಗವಾಗಿ ಓಡಬಲ್ಲವು. ಅಷ್ಟೇ ವೇಗವಾಗಿ ಮರವೇರಿ ಬೇಟೆಯಾಡಬಲ್ಲವು ಎಂಬುದು ಬಹುತೇಕರಿಗೆ ತಿಳಿದಿದೆ. ಆದರೆ ಚಿರತೆ ಅಷ್ಟೇ ವೇಗವಾಗಿ ನೀರೊಳಗೂ ಈಜಬಲ್ಲದು ತನಗಿಂತ ಗಾತ್ರದಲ್ಲಿ ದೊಡ್ಡದಾದ ಮೊಸಳೆ ಮುಂತಾದ ಪ್ರಾಣಿಗಳನ್ನು ಬೇಟೆಯಾಡಬಲ್ಲದು ಎಂಬ ವಿಚಾರ ನಿಮಗೆ ಗೊತ್ತೆ?
ಚಿರತೆಯೊಂದು ನೀರೊಳಗೆ ಈಜಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 4 ಸೆಕೆಂಡ್‌ನ ಈ ವಿಡಿಯೋವನ್ನು ಐದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. Fascinating ಎಂಬ ಬಳಕೆದಾರ ಹೆಸರು ಹೊಂದಿರುವವರೊಬ್ಬರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ನೀರೊಳಗೂ ಚಿರತೆ ವೇಗವಾಗಿ ಈಜುತ್ತಿರುವ ದೃಶ್ಯ ಸೆರೆ ಆಗಿದೆ. ಜಾಗ್ವಾರ್‌ಗಳು ಶ್ರೇಷ್ಠ ಈಜುಗಾರರು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
4 ಸೆಕೆಂಡ್‌ಗಳ ವಿಡಿಯೋದಲ್ಲಿ ಜಾಗ್ವಾರ್ (jaguars) ತಿಳಿನೀಲಿ ಬಣ್ಣದ ನೀರಿನ ಆಳದಲ್ಲಿ ಈಜುತ್ತಿರುವುದನ್ನು ಕೂಡ ಕಾಣಬಹುದು. ತನ್ನ ದೇಹವನ್ನು ಬೇಕಾದಂತೆ ಬಾಗಿಸಿಕೊಂಡು ಚಿರತೆ ತಿಳಿ ನೀಲಿ ನೀರಲ್ಲಿ ಈಜುತ್ತಿದೆ. ನೀರಿನ ತಳವನ್ನೊಮ್ಮೆ ತಲುಪಿ ಮತ್ತೆ ಮೇಲೆ ಬರುತ್ತಿದೆ. ಚಿರತೆಗಳು ತಮ್ಮ ಕ್ಷಿಪ್ರ ಬೇಟೆಗೆ ಹೆಸರುವಾಸಿಯಾಗಿವೆ. ಈ ವಿಡಿಯೋ ನೋಡಿದ ಅನೇಕರು ಈ ಟ್ವಿಟ್ಟರ್ ಸರಣಿಯಲ್ಲಿ ಚಿರತೆಗಳು ನೀರೊಳಗೂ ಭೂಮಿ (Earth) ಮೇಲೆಯೂ ಮರದ ತುದಿಯಲ್ಲೂ ಬೇಟೆಯಾಡುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇಂತಹ ಮತ್ತೊಂದು ವಿಡಿಯೋದಲ್ಲಿ ಚಿರತೆಯೊಂದು ನೀರಿನ ಸಮೀಪ ಕಾದು ಕುಳಿತು ನೀರಿನಲ್ಲಿ ತೇಲಾಡುತ್ತಿದ್ದ ಬೃಹತ್ ಗಾತ್ರದ ಮೊಸಳೆಯೊಂದನ್ನು (Crocodile) ಬೇಟೆಯಾಡಿದೆ.
ಮನೆಯಲ್ಲೇ ಮೊಸಳೆ ಸಾಕಿದ ಭೂಪ: ಕಿಲ್ಲರ್ ಮೊಸಳೆಯೊಂದಿಗೆ ಆಟ
ಈ ವಿಡಿಯೋವನ್ನು @VahsiHayatlar ಎಂಬುವವರು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ. 42 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ನದಿಯ ಸಮೀಪ ದಡದಲ್ಲಿ ಚಿರತೆಯೊಂದು ಬೇಟೆಗಾಗಿ ಹೊಂಚು ಹಾಕಿ ಕಾಯುತ್ತಾ ಕುಳಿತಿದೆ. ಈ ವೇಳೆ ಮೊಸಳೆಯೊಂದು ನೀರಿನಲ್ಲಿ ಈಜುತ್ತಾ ಮುಂದೆ ಬಂದಿದ್ದು, ಇದಕ್ಕೆ ಗುರಿ ಇಟ್ಟ ಚಿರತೆ ಛಂಗನೆ ನೀರಿಗೆ ಹಾರಿ ಮೊಸಳೆಯ ಮೇಲೆ ದಾಳಿ ಮಾಡಿದ ತನಗಿಂತಲೂ ಗಾತ್ರದಲ್ಲಿ ದೊಡ್ಡದಾದ ಮೊಸಳೆಯನ್ನು ನೀರಿನಿಂದ ಮೇಲೆತ್ತಿಕೊಂಡು ಬಂದಿದೆ. ಈ ವಿಡಿಯೋ ಸಾಕಷ್ಟು ರೋಚಕವಾಗಿದ್ದು, ಚಿರತೆಯ (Leopard) ಶಕ್ತಿ ಸಾಮರ್ಥ್ಯ ಎಂತಹದ್ದು ಎಂಬುದನ್ನು ತೋರಿಸುತ್ತಿದೆ. ಸಾಮಾನ್ಯವಾಗಿ ಚಿರತೆಗಳು, ಪುಟ್ಟ ಹಕ್ಕಿಗಳು ಮೀನುಗಳು ಸೇರಿದಂತೆ ಜಿಂಕೆ, ಕೋತಿ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಅಲ್ಲದೇ ಇವು ನೀರೊಳಗೆ 15 ರಿಂದ 20 ನಿಮಿಷಗಳ ಕಾಲ ಉಸಿರನ್ನು ಬಿಗಿ ಹಿಡಿಯಬಲ್ಲವು.
ಎಳನೀರು ಬೇಕಿತ್ತೆ... ತೆಂಗಿನ ಮರವೇರಿದ ಚಿರತೆ viral video