50 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅವರ ಮಗನ ಶಾಲೆಯ ಮುಂದೆಯೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಗನನ್ನು ಶಾಲೆಗೆ ಬಿಟ್ಟು ವಾಪಸ್ ಬರುವಾಗ ಆರು ಜನರ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದೆ.

ಮಗ ಓದ್ತಿದ್ದ ಶಾಲೆಯ ಮುಂದೆಯೇ ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ:

50 ವರ್ಷದ ಉದ್ಯಮಿಯೊಬ್ಬರನ್ನು ಅವರ ಮಗ ಓದುತ್ತಿದ್ದ ಶಾಲೆಯ ಮುಂದೆಯೇ ದುಷ್ಕರ್ಮಿಗಳು ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ತೆಲಂಗಾಣದ ಮೆಡ್ಚಲ್ ಮಲ್ಕಜ್‌ಗಿರಿ ಜಿಲ್ಲೆಯಲ್ಲಿ ನಡೆದಿದೆ. ಘಂಟಾ ವೆಂಕಟರತ್ನಂ ಕೊಲೆಯಾದ ಉದ್ಯಮಿ. ವೆಂಕಟರತ್ನಂ ಅವರು ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುತ್ತಿದ್ದರು. ಅವರು ತಮ್ಮ ಮಗನನ್ನು ಶಾಲೆಗೆ ಬಿಡುವುದಕ್ಕೆ ಇಂದು ಮುಂಜಾನೆ ಹೋಗಿದ್ದ ವೇಳೆ ಈ ದುರಂತ ನಡೆದಿದೆ. ಅರು ಜನರಿದ್ದ ದುಷ್ಕರ್ಮಿಗಳ ತಂಡ ಅವರ ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಅವರನನ್ನು ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.

ಮಗನ ಶಾಲೆಗೆ ಬಿಟ್ಟು ವಾಪಸ್ ಬರ್ತಿದ್ದಾಗ ದುರಂತ:

ಸ್ಕೂಟರ್‌ನಲ್ಲಿ ಮಗುವನ್ನು ಶಾಲೆಗೆ ಬಿಟ್ಟು ವಾಪಸ್ ಬರುತ್ತಿದ್ದ ವೇಳೆ ಅವರನ್ನು ಸುತ್ತುವರೆದ ಅಪರಿಚಿತ ದುಷ್ಕರ್ಮಿಗಳ ತಂಡ ಅವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಪೋಸ್ಟರ್ ಬಿಲ್ಲಬೊಂಗ ಶಾಲೆಯ ಮುಂದೆಯೇ ಈ ದುರಂತ ನಡೆದಿದೆ. ದುಷ್ಕರ್ಮಿಗಳಲ್ಲಿ ಇಬ್ಬರು ಬೈಕ್‌ನಲ್ಲಿ ಬಂದರೆ ನಾಲ್ಕು ಜನ ಆಟೋದಲ್ಲಿ ಬಂದಿದ್ದಾರೆ. ನಂತರ ಶಾಲೆಯ ಹೊರಭಾಗದಲ್ಲಿ ಕಾದು ನಿಂತು ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ

ದುಷ್ಕರ್ಮಿಗಳು ಉದ್ಯಮಿ ವೆಂಕಟರತ್ನಂ ಅವರ ಮೇಲೆ ಭೀಕರವಾಗಿ ದಾಳಿ ಮಾಡಿದ್ದು, ಅವರ ಹೊಟ್ಟೆ ಬೆನ್ನು ಹಾಗೂ ಕತ್ತಿಗೆ ಮತ್ತೆ ಮತ್ತೆ ಇರಿದಿದ್ದಾರೆ. ಈ ಭಯಾನ ದೃಶ್ಯ ಅಲ್ಲೇ ಸಮೀಪದಲ್ಲಿದ್ದ ಕಟ್ಟಡವೊಂದರ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಈ ಭಯಾನಕ ದಾಳಿಯಿಂದಾಗಿ ವೆಂಕಟರತ್ನಂ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಿಂದ ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸೆರೆಯಾದ ಸಿಸಿಟಿವಿ ದೃಶ್ಯಾವಳಿಯಲ್ಲಿ ಘಟನೆ ನಡೆಯುತ್ತಿರುವಾಗಲೇ ಅಲ್ಲಿ ಹಲವು ವಾಹನಗಳು ಜನರು ಓಡಾಡುತ್ತಿದ್ದು, ಯಾರೊಬ್ಬರು ಕೂಡ ಈ ಘಟನೆಯನ್ನು ತಡೆಯುವುದಕ್ಕೆ ಪ್ರಯತ್ನಿಸಿಲ್ಲ.

ಇದನ್ನೂ ಓದಿ: 25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ