ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು? ಈ ಕಾರಿನ ನಿರ್ವಹಣೆ ಕಡಿಮೆ, ಉತ್ತಮ ಮೈಲೇಜ್ ನೀಡಲಿದೆ. ವಿಶೇಷ ಅಂದರೆ ಇದು ಪರಿಸರಕ್ಕೆ ಪೂರಕವಾಗಿರುವ ಕಾರು.
ನವದೆಹಲಿ (ಡಿ.11) ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಕಾರು ಬಳಕೆ ಕಡಿಮೆ ಮಾಡಲು ಎಲೆಕ್ಟ್ರಿಕ್ ಕಾರುಗಳು ಹೆಚ್ಚು ಬಳಕೆ ಮಾಡಲಾಗುತ್ತದೆ. ಈ ಮೂಲಕ ಪರಿಸರ ಮಾಲಿನ್ಯ ತಗ್ಗಿಸುವ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಫ್ಲೆಕ್ಸಿ ಫ್ಯೂಯೆಲ್ ಕಾರುಗಳ ಬಳಕೆಯೂ ಹೆಚ್ಚಾಗುತ್ತಿದೆ. ಎಥೆನಾಲ್ ಮಿಶ್ರಿತ ಇಂಧನ, ಹೈಡ್ರೋಜನ್ ಫ್ಯುಯೆಲ್ ಸೇರಿದಂತೆ ಹಲವು ಆಯ್ಕೆಗಳಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಇದರ ಬೆನ್ನಲ್ಲೇ ಹೈಡ್ರೋಜನ್ ಕಾರು ಉತ್ತೇಜನ ನೀಡಲು ಕೇಂದ್ರ ಸಚಿ ಪ್ರಹ್ಲಾದ್ ಜೋಶಿ ಇಂದು ಸಂಸತ್ತಿಗೆ ಟೋಯೋಟಾ ಮಿರೈ ಕಾರಿನಲ್ಲಿ ಆಗಮಿಸಿದ್ದಾರೆ.
ತಾವೇ ಕಾರ್ ಓಡಿಸಿಕೊಂಡು ಬಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ದೆಹಲಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಪ್ರಹ್ವಾದ್ ಜೋಶಿ ಹೈಡ್ರೋಜನ್ ಕಾರು ಮೂಲಕ ಆಗಮಿಸಿದ್ದಾರೆ. ವಿಶೇಷ ಅಂದರೆ ಸತಃ ಪ್ರಹ್ಲಾದ್ ಜೋಶಿ ಕಾರು ಡ್ರೈವ್ ಮಾಡಿಕೊಂಡು ಸಂಸತ್ತಿಗೆ ಆಗಮಿಸಿದ್ದಾರೆ. ಅಟಲ್ ಅಕ್ಷಯ ಊರ್ಜ ಭವನ್ ನಿಂದ ಸಂಸತ್ ಭವನಕ್ಕೆ ದೆಹಲಿ ಕಾರು ಚಲಾಯಿಸಿಕೊಂಡು ಬಂದಿದ್ದಾರೆ.
ಪೆಟ್ರೋಲ್, ಡೀಸೆಲ್ ಬೇಡ
ಹೈಡ್ರೋಜನ್ ಫ್ಯುಯೆಲ್ ಕಾರಿಗೆ ಪೆಟ್ರೋಲ್, ಡೀಸೆಲ್ ಅಗತ್ಯವಿಲ್ಲ. ಹೈಡ್ರೋಜನ್ ಇಂಧನ ಮೂಲಕ ಕಾರು ಸಾಗಲಿದೆ. ಎಲೆಕ್ಟ್ರಿಕ್ ಕಾರಿನಂತೆ ಯಾವುದೇ ಸದ್ದಿಲ್ಲ, ಪರಿಸರ ಮಾಲಿನ್ಯವೂ ಇಲ್ಲ. ನವೀಕರಿಸಬಹುದಾದ ಇಂಧನ ಇಲಾಖೆ, ಟೊಯೋಟಾ ಕಿರ್ಲೋಸ್ಕರ್ ಕಂಪನಿ ಮತ್ತು ನಮ್ಮ ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ (NISE) ಅಡಿಯಲ್ಲಿ ಈ ಕಾರು ನಿರ್ಮಾಣ ಮಾಡಲಾಗಿದೆ.
ಕಾರಿನ ಇಂಧನ ಹಾಗೂ ಎಂಜಿನ್
ಹೈಡ್ರೋಜನ್ ಕಾರಿನಲ್ಲಿ ಇಂಧನವಾಗಿ ಹೈಡ್ರೋಜನ್ ಅನಿಲ್ ಬಳಕೆ ಮಾಡಲಾಗುತ್ತದೆ. ಹೈಡ್ರೋಜನ್ ಹಾಗೂ ಆಮ್ಲಜನಕವನ್ನು ಸಂಯೋಜಿಸಿ ಇಂಧನವಾಗಿ ತಯಾರಿಸಲಾಗುತ್ತದೆ.ಕಾರಿಗೆ ತುಂಬುವ ಹೈಡ್ರೋಜನ್ ಫ್ಯುಯೆಲ್ ಈ ಇಂಧನದಲ್ಲಿ ವಿದ್ಯುತ್ ಉತ್ಪಾದನೆಗೊಳ್ಳಲಿದೆ. ಈ ಮೂಲಕ ಕಾರಿನ ಎಲೆಕ್ಟ್ರಿಕ್ ಮೋಟಾರ್ ಮೂಲಕ ಕಾರು ಓಡಲಿದೆ. ಇದರಿಂದ ಎಮಿಶನ್ ಸಮಸ್ಯೆ ಇಲ್ಲ. ಕಾರಣ ಹೈಡ್ರೋಜನ್ ಹಾಗೂ ಆಮ್ಲಜನಕ ಬಳಕೆ ಮಾಡುವ ಕಾರಣ ಇದರಿಂದ ಹೊರಸೂಸುವುದು ನೀರಿನ ಆವಿ ಅಥವಾ ಹೊಗೆ. ಹೈಡ್ರೋಜನ್ ಕಾರಿನಿಂದ ಎಮಿಶನ್ ಸಮಸ್ಯೆ ಇಲ್ಲ. ಆಟೋಮ್ಯಾಟಿಕ್ ಕಾರು ಇದಾಗಿದ್ದು, ಡ್ರೈವಿಂಗ್ ಕೂಡ ಸುಲಭ.
ಹೈಡ್ರೋಜನ್ ಕಾರಿನ ಬೆಲೆ ಎಷ್ಟು
ಎಲೆಕ್ಟ್ರಿಕ್ ಕಾರಿನಿಂತೆ ಚಾರ್ಜ್ ಮಾಡಲು ಕಾಯಬೇಕಿಲ್ಲ. ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವ ರೀತಿಯಲ್ಲಿ ಇಂಧನ ಅತೀ ವೇಗವಾಗಿ ಅಂದರೆ 3 ರಿಂದ 4 ನಿಮಿಷದಲ್ಲಿ ಹೈಡ್ರೋಜನ್ ಫ್ಯುಯೆಲ್ ಕಾರಿಗೆ ತುಂಬಿಸಬಹುದು. ಟೋಯೋಟಾ ಮಿರೈ ಕಾರು 3698 ಸಿಸಿ ಎಂಜಿನ್ ಹೊಂದಿದೆ. 152 ಬಿಹೆಚ್‌ಪಿ ಪವರ್ ಹಾಗೂ 335 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಟೋಯೋಟಾ ಮಿರೈ ಹೈಡ್ರೋಜನ್ ಕಾರಿನ ಬೆಲೆ ಸರಿಸುಮಾರು 60 ಲಕ್ಷ ರೂಪಾಯಿ.
ಮಿರೈ ಕಾರಿನಲ್ಲಿ ಸಂಸತ್ತಿಗೆ ಆಗಮಿಸಿದ್ದ ನಿತಿನ್ ಗಡ್ಕರಿ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಂಧನಕ್ಕೆ ಪರ್ಯಾಯವಾಗಿ ಹಲವು ಮಾರ್ಗಗಳನ್ನು ಎರಡನೇ ಅವಧಿ ಸರ್ಕಾರದಲ್ಲಿ ಮಾಡಿತ್ತು. ಈ ವೇಳೆ ಹೈಡ್ರೋಜನ್ ಕಾರುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಟೋಯೋಟಾ ಜೊತೆ ಕೈಜೋಡಿಸಲಾಗಿತ್ತು. ಮಿರೈ ಕಾರಿನ ಮೂಲಕ ನಿತಿನ್ ಗಡ್ಕರಿ ಸಂಸತ್ತಿಗೆ ಆಗಮಿಸಿದ್ರು. ಈ ಮೂಲಕ ಹೈಡ್ರೋಜನ್ ಕಾರು ಬಳಕೆಗೆ ಉತ್ತೇಜನ ನೀಡಿದ್ದರು. ಭಾರತದಲ್ಲಿ ಇದೀಗ ಹೈಡ್ರೋಜನ್ ಕಾರು ಉತ್ಪಾದನೆ ನಿಧಾನವಾಗಿ ವೇಗ ಪಡೆದುಕೊಳ್ಳುತ್ತಿದೆ.


