ಮಹಿಳಾ ವೈದ್ಯರನ್ನೇ ಟಾರ್ಗೆಟ್ ಮಾಡಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ, ಅವರಿಗೆ ಸರ್ವಾಂಗವನ್ನೂ ತೋರಿಸಿದ ಭಾರತೀಯ ಮೂಲದ ಯುವಕನನ್ನು ಕೆನಡಾದ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 25 ವರ್ಷದ ವೈಭವ್ ಎಂದು ಗುರುತಿಸಲಾಗಿದೆ.

ಮಹಿಳಾ ವೈದ್ಯರನ್ನೇ ಟಾರ್ಗೆಟ್ ಮಾಡಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ, ಅವರಿಗೆ ಸರ್ವಾಂಗವನ್ನೂ ತೋರಿಸಿದ ಭಾರತೀಯ ಮೂಲದ ಯುವಕನನ್ನು ಕೆನಡಾದ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 25 ವರ್ಷದ ವೈಭವ್ ಎಂದು ಗುರುತಿಸಲಾಗಿದೆ. ಆರೋಪಿ ವೈಭವ್ ಕೆನಡಾದ ಮಿಸ್ಸಿಸೌಗಾದ ಹಲವು ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು, ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಅಲ್ಲಿ ಕಾರ್ಯನಿರ್ವಹಿಸುವ ಮಹಿಳಾ ವೈದ್ಯರನ್ನು, ಮಹಿಳಾ ಸಿಬ್ಬಂದಿಯನ್ನೇ ಟಾರ್ಗೆಟ್ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ. ಈತನ ವರ್ತನೆಯ ಬಗ್ಗೆ ಸರಣಿ ಆರೋಪಗಳು ಕೇಳಿ ಬಂದ ನಂತರ ಅಲ್ಲಿನ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಎಂದು ಪೀಲ್‌ನ ಪ್ರಾದೇಶಿಕ ಪೊಲೀಸರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣದ ತನಿಖಾಧಿಕಾರಿಗಳ ಪ್ರಕಾರ ವೈಭವ್ ಎಂದು ಗುರುತಿಸಲ್ಪಟ್ಟ 25 ವರ್ಷದ ಆರೋಪಿ, ತನಗೆ ಅನಾರೋಗ್ಯವಿದೆ. ವೈದ್ಯಕೀಯ ಸಮಸ್ಯೆ ಇದೆ ಎಂದು ಹೇಳಿಕೊಂಡು ಕ್ಲಿನಿಕ್‌ಗಳಿಗೆ ಭೇಟಿ ನೀಡುತ್ತಿದ್ದ. ಅಲ್ಲಿನ ಮಹಿಳಾ ವೈದ್ಯರಿಂದ ಅನುಚಿತ ದೈಹಿಕ ಸಂಪರ್ಕವನ್ನು ಪ್ರೇರೇಪಿಸುವ ಉದ್ದೇಶದಿಂದಲೇ ಆತ ಅಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಆತನ ಈ ಅಸಭ್ಯ ವರ್ತನೆಯ ಘಟನೆಗಳು ಹಲವು ತಿಂಗಳುಗಳಿಂದ ಹಲವು ಪ್ರದೇಶಗಳ ಕ್ಲಿನಿಕ್‌ಗಳಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೆನಡಾದ ಬ್ರಾಂಪ್ಟನ್ ನಿವಾಸಿಯಾದ ಈತನ ವಿರುದ್ಧ ಈಗ 12ನೇ ವಿಭಾಗದ ಅಪರಾಧ ತನಿಖಾ ಬ್ಯೂರೋವೂ, ಅಸಭ್ಯ ವರ್ತನೆಯ ಆರೋಪ ಹೊರಿಸಿ ಬಂಧಿಸಿದೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ ಆರೋಪಿ ತಾನು ಭೇಟಿ ನೀಡುತ್ತಿದ್ದ ಕ್ಲಿನಿಕ್‌ನ ಮಹಿಳಾ ಸಿಬ್ಬಂದಿ ಮುಂದೆ ತಾನೇ ಬೆತ್ತಲಾಗುತ್ತಿದ್ದನು. ಅಲ್ಲದೇ ಕೆಲವು ಸಂದರ್ಭಗಳಲ್ಲಿ ಅವನ್ನು ತನ್ನ ಗುರುತನ್ನು ಕೂಡ ಮರೆ ಮಾಚುತ್ತಿದ್ದ. ಅಲ್ಲದೇ ಮಹಿಳಾ ಸಿಬ್ಬಂದಿ ತನ್ನನ್ನು ಅಸಭ್ಯವಾಗಿ ಸ್ಪರ್ಶಿಸಬೇಕು ಎಂದೇ ಆತ ಅನಾರೋಗ್ಯದ ಬಗ್ಗೆ ಸುಳ್ಳು ನೆಪಗಳನ್ನು ಮಾಡಿ ಆಸ್ಪತ್ರೆಗೆ ಬರುತ್ತಿದ್ದ. ಅಲ್ಲದೇ ಹೀಗೆ ಆಸ್ಪತ್ರೆಗೆ ಬರುವ ಈತನ ಗುರುತನ್ನು ಮರೆಮಾಚುತ್ತಿದ್ದ. ಆಕಾಶ್‌ದೀಪ್ ಸಿಂಗ್ ಎಂದು ಆತ ತನ್ನನ್ನು ಗುರುತಿಸಿಕೊಂಡಿದ್ದ.

ಮಿಸ್ಸಿಸೌಗಾದ ಹಲವು ಮೆಡಿಕಲ್ ಆಸ್ಪತ್ರೆಗಳಿಗೆ ಭೇಟಿ ನೀಡಿದ ಆತ ಬಹುತೇಕ ಕಡೆಗಳಲ್ಲಿ ಮಹಿಳಾ ಸಿಬ್ಬಂದಿ ಮುಂದೆ ಹೀಗೆ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ಸರಣಿ ದೂರುಗಳು ಕೇಳಿ ಬಂದ ಹಿನ್ನೆಲೆ ಡಿಸೆಂಬರ್ 4 ರಂದು ಆತನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಜಾಮೀನು ಅರ್ಜಿ ವಿಚಾರಣೆಗೆ ಬಾಕಿ ಇರುವ ಹಿನ್ನೆಲೆ ಆತ ಈಗ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾನೆ.

ಇದನ್ನೂ ಓದಿ: ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ

ಆರೋಪಿಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ, ಲಾಭ ಪಡೆಯುವ ಉದ್ದೇಶದಿಂದ ಗುರುತಿನ ವಂಚನೆ, ಗುರುತಿನ ದಾಖಲೆಯನ್ನು ಹೊಂದಿರುವುದು ಮತ್ತು ಗುರುತಿನ ಕಳ್ಳತನ ಸೇರಿದಂತೆ ನಾಲ್ಕು ಗಂಭೀರ ಅಪರಾಧಗಳ ಆರೋಪ ಹೊರಿಸಲಾಗಿದೆ. ಈತನ ವಿರುದ್ಧ ಇನ್ನೂ ವರದಿಯಾಗದೇ ಇರುವ ಇಂತಹದ್ದೇ ಹಲವರು ಪ್ರಕರಣಗಳು ಇರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈತನಿಂದ ಕಿರುಕುಳಕ್ಕೆ ಒಳಗಾದ ಯಾರಾದರು ಇದ್ದರೆ ಕೂಡಲೇ ಮುಂದೆ ಬಂದು ಕೇಸು ದಾಖಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ