Asianet Suvarna News Asianet Suvarna News

ಕರ್ನಾಟಕದ ಕೈತಪ್ಪಿದ ಚಾಂಪಿಯನ್ ಕಿರೀಟ, ಶಾ ಕಚೇರಿ ಮುಂದೆ ಟಿಎಂಸಿ ಧರಣಿ: ನ.22ರ ಟಾಪ್ 10 ಸುದ್ದಿ!

ತ್ರಿಪುರಾದಲ್ಲಿ ತನ್ನ ಸದಸ್ಯರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ಗೃಹ ಸಚಿವಾಲಯದ  ಮುಂದೆ ಟಿಎಂಸಿ ಧರಣಿ ನಡೆಸುತ್ತಿದೆ. ಮೋದಿ ಕೃಷಿ ಕಾಯ್ದೆ ನಿರ್ಧಾರ ಸರಿಯಾಗಿದೆ ಎಂದು ಸಮೀಕ್ಷೆ ಹೇಳುತ್ತಿದೆ. ವಿಂಗ್ ಕಮಾಂಡರ್ ಅಭಿನಂದನ್‌ಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಮಿಳುನಾಡು ಮುಷ್ತಾಕ್ ಆಲಿ ಟ್ರೋಫಿ ಗೆದ್ದುಕೊಂಡಿದೆ. ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ, 100' ಸಿನಿಮಾಗೆ ಸುಧಾಮೂರ್ತಿ ಮೆಚ್ಚುಗೆ ಸೇರಿದಂತೆ ನವೆಂಬರ್ 22ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Syed Mushtaq Ali Trophy Final Karnataka to TMC Protest top 10 News of november 22 ckm
Author
Bengaluru, First Published Nov 22, 2021, 4:59 PM IST
  • Facebook
  • Twitter
  • Whatsapp

All Party Meeting;ಚಳಿಗಾಲ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ!

Syed Mushtaq Ali Trophy Final Karnataka to TMC Protest top 10 News of november 22 ckm

ಕೃಷಿ ಕಾಯ್ದೆ(Farm laws repeal) ವಾಪಸ್, ಅಚಲ ನಿರ್ಧಾರದಿಂದ ಹಿಂದೆ ಸರಿಯುವ ಮೂಲಕ ವಿಪಕ್ಷಗಳ ಬಾಯಿಗೆ ಆಹಾರವಾಗಿರುವ ಬಿಜೆಪಿ(BJP) ಇದೀಗ ಟೀಕೆಗಳಿಗೆ ಉತ್ತರಿಸದೆ ಮುಬರುವ ಚುನಾವಣೆಗಳತ್ತ(Election) ಚಿತ್ತಹರಿಸಿದೆ. ಇದರ ನಡುವೆ ಚಳಿಗಾಲದ ಅಧಿವೇಶನ(Winter Session) ಬಂದೇ ಬಿಟ್ಟಿದೆ. ಇದೀಗ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ(All-Party Meeting) ನಡೆಯಲಿದೆ.

Amit Shah ಭೇಟಿಗೆ ನಕಾರ : ಕೇಂದ್ರ ಗೃಹ ಸಚಿವಾಲಯದ ಮುಂದೆ ಟಿಎಂಸಿ ಧರಣಿ!

Syed Mushtaq Ali Trophy Final Karnataka to TMC Protest top 10 News of november 22 ckm

 ತೃಣಮೂಲ ಕಾಂಗ್ರೆಸ್ (Trinamoola Congress) ಸೋಮವಾರ, ನವೆಂಬರ್ 22ರಂದು  ತ್ರಿಪುರಾದಲ್ಲಿ ತನ್ನ ಸದಸ್ಯರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ಗೃಹ ಸಚಿವಾಲಯದ (Ministry of Home Affairs) ಹೊರಗೆ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಟಿಎಂಸಿ ನಾಯಕರು 'ನಾವು ಜಯಿಸುತ್ತೇವೆ (We Shall Overcome)' ಎಂಬ ಹಾಡುಗಳನ್ನು ಹಾಡಿದ್ದೂ ಘಟನೆಯ ಕುರಿತು ಬಿಜೆಪಿ (BJP) ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ

Vir Chakra: ಭಾರತೀಯ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್‌ಗೆ ಪ್ರಶಸ್ತಿ ಪ್ರದಾನ!

Syed Mushtaq Ali Trophy Final Karnataka to TMC Protest top 10 News of november 22 ckm

ಫೆಬ್ರವರಿ 2019 ರಲ್ಲಿ ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್ -16 (F-16) ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ (Wing Commander Abhinandan Varthaman) ಅವರಿಗೆ ಸೋಮವಾರ, ನವೆಂಬರ್ 22 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramanath Kovind) ಅವರು ವೀರ ಚಕ್ರವನ್ನು (Vir Chakra) ಪ್ರದಾನ ಮಾಡಿದ್ದಾರೆ.

Farm Laws Repeal: ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ, ಮೋದಿ ಸರ್ಕಾರ ರೈತಪರ : ಸಮಿಕ್ಷೇ!

Syed Mushtaq Ali Trophy Final Karnataka to TMC Protest top 10 News of november 22 ckm

ನರೇಂದ್ರ ಮೋದಿ (Narendra Modi) ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು  ದಿಢೀರನೆ ಹಿಂಪಡೆದಿದ್ದರಿಂದ (Farm laws repealed) ಅವರ ವರ್ಚಸ್ಸಿಗೆ ಕೊಂಚ ಹಿನ್ನಡೆಯಾಗಿದೆ ಎಂಬ ವಿಶ್ಲೇಷಣೆಗಳು ಸುಳ್ಳು ಎಂದು ಸಮೀಕ್ಷೆಯೊಂದು (Survey) ಹೇಳಿದೆ. ನರೇಂದ್ರ ಮೋದಿ ಅವರು ರೈತಪರ ಪ್ರಧಾನಿ. ಕೃಷಿ ಕಾಯ್ದೆಯನ್ನು ಹಿಂಪಡೆದ ಅವರ ನಿರ್ಧಾರ ಸೂಕ್ತವಾಗಿಯೇ ಇದೆ ಎಂಬುದು ಬಹುತೇಕ ಮಂದಿಯ ಅಭಿಪ್ರಾಯವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

Syed Mushtaq Ali Trophy Final: ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮಿಳುನಾಡಿಗೆ ಟ್ರೋಫಿ ಗೆಲ್ಲಿಸಿದ ಶಾರುಖ್ ಖಾನ್..!

Syed Mushtaq Ali Trophy Final Karnataka to TMC Protest top 10 News of november 22 ckm

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ (Syed Mushtaq Ali Trophy) ಕರ್ನಾಟಕ ಕ್ರಿಕೆಟ್ ತಂಡದ (Karnataka Cricket Team) ವಿರುದ್ದ 4 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ ತಮಿಳುನಾಡು ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

'100' ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಇನ್ಫೋಸಿಸ್ ಮುಖ್ಯಸ್ಥೆ​ ಸುಧಾಮೂರ್ತಿ

Syed Mushtaq Ali Trophy Final Karnataka to TMC Protest top 10 News of november 22 ckm

ಬಹಳ ದಿನಗಳ ಬಳಿಕ ಒಂದು ಒಳ್ಳೆಯ ಸಿನಿಮಾ ನೋಡಿದೆ. ಸೈಬರ್ ಕ್ರೈಂ ಕಥೆ ಆಧಾರಿತ ಈ ಸಿನಿಮಾ, ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ತೊಂದರೆ ಅನುಭವಿಸುತ್ತಿದೆ ಎನ್ನುವುದನ್ನು ಅಚ್ಚುಕಟ್ಟಾಗಿ ನಿರ್ದೇಶಕ ರಮೇಶ್ ಅರವಿಂದ್ ತೋರಿಸಿದ್ದಾರೆ ಎಂದು ಸುಧಾಮೂರ್ತಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Best Laptops for Students: 30,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ

Syed Mushtaq Ali Trophy Final Karnataka to TMC Protest top 10 News of november 22 ckm

ಕೋವಿಡ್ (Covid-19 ಸಾಂಕ್ರಾಮಿಕದಿಂದಾಗಿ ಸಾಕಷ್ಟು ಬದಲಾವಣೆಗಳಾಗಿವೆ. ಮನೆಯಿಂದಲೇ ಕೆಲಸ ಮಾಡುವುದು ಹಿಡಿದು ಆನ್‌ಲೈನ್ ತರಗತಿಯವರೆಗೂ ಸಾಕಷ್ಟು ಬದಲಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲಸ ಮಾಡುವವರಿಗೆ ಲ್ಯಾಪ್‌ಟ್ಯಾಪ್‌(Laptops)ಗಳು ಅಗತ್ಯ. ಯಾವ ರೀತಿಯ ಲ್ಯಾಪ್‌ಟ್ಯಾಪ್ ಖರೀದಿಸಬೇಕೆಂಬ ಮಾಹಿತಿ ಇರುವುದಿಲ್ಲ. ಹಾಗಾಗಿ, 30 ಸಾವಿರ ರೂಪಾಯಿ ಒಳಗೆ ಇರುವ ಅತ್ಯುತ್ತಮ ಲ್ಯಾಪ್‌ಟ್ಯಾಪ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

Mangaluru Airport | ಭದ್ರತೆಗೆ ನಿಯೋಜನೆ ಗೊಂಡಿದ್ದ CISF ಪಡೆಯ ಲೀನಾ ಸಾವು

Syed Mushtaq Ali Trophy Final Karnataka to TMC Protest top 10 News of november 22 ckm

ಮಂಗಳೂರು ಏರ್ಪೋರ್ಟ್ ಆವರಣದಲ್ಲಿ ಭದ್ರತೆಗೆ ನಿಯೋಜನೆ ಗೊಂಡಿದ್ದ ಸಿ ಐ ಎಸ್ಎಫ್ ಪಡೆಯ ಶ್ವಾನ ಸಾವನ್ನಪ್ಪಿದೆ.  ಸಿ ಐ ಎಸ್ ಎಫ್ ಪಡೆಯೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ  ಲ್ಯಾಬ್ರಡಾರ್ ತಲಿತ ಶ್ವಾನ ಲೀನಾ ಕಿಡ್ನಿ ವೈಫಲ್ಯದಿಂದ ಮೃತ ಪಟ್ಟಿದೆ. 

New Car Launch: ಅಪ್‌ಡೇಟ್‌ಗಳೊಂದಿಗೆ ರಸ್ತೆಗಿಳಿಯಲಿದೆ ಹೊಸ ಮಾರುತಿ ವಿಟಾರಾ ಬ್ರೆಜಾ

Syed Mushtaq Ali Trophy Final Karnataka to TMC Protest top 10 News of november 22 ckm

ಮಾರುತಿ ಕಂಪನಿಯ ಜನಪ್ರಿಯ ಎಸ್‌ಯುವಿ ವಿಟಾರಾ ಬ್ರೆಜಾ ಹೊಸ ಅಪ್‌ಡೇಟ್‌ಗಳೊಂದಿಗೆ ಮುಂದಿನ ವರ್ಷ ಲಾಂಚ್ ಆಗಲಿದೆ. ಈಗ ಲೀಕ್ ಆಗಿರುವ ಕೆಲವು ಫೋಟೋಗ್ರಾಫ್‌ಗಳ ಪ್ರಕಾರ, ಕಂಪನಿಯ ಸಾಕಷ್ಟು ಪರಿಷ್ಕೃತ ವಿನ್ಯಾಸವನ್ನು ಬ್ರೆಜಾಗೆ ನೀಡುತ್ತಿದ್ದು, ಹೊಸ ಲುಕ್‌ನಲ್ಲಿ ಅದು ಕಂಗೊಳಿಸಲಿದೆ.

Follow Us:
Download App:
  • android
  • ios